Agriculture Tips: ಮಾವು ಬೆಳೆಗಾರರಿಗೆ ಇಲ್ಲಿವೆ ಮಹತ್ವದ ಸಲಹೆಗಳು

 ಈ ವರ್ಷ ಅಕಾಲಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದೆ. ಅಲ್ಲದೇ ಈಗ ಬಿಳುತ್ತಿರುವ ಇಬ್ಬನಿಯಿಂದ ಮತ್ತು ಕಡಿಮೆ ತಾಪಮಾನದಿಂದಾಗಿ ಮಾವು ಹಾಗೂ ಪೇರು ಬೆಳೆಗಳಲ್ಲಿ ಹೂ ಕಚ್ಚುತ್ತಿಲ್ಲ ಮತ್ತು ಹೂ ಉದುರುತ್ತಿದೆ.ಇದಲ್ಲದೆ ಕೀಟ ಮತ್ತು ರೋಗಗಳ ಬಾಧೆಯೂ ಕಂಡು ಬಂದಿರುತ್ತದೆ.ಈ ಹಿನ್ನಲೆಯಲ್ಲಿ ಮಾವಿನ ಬೆಳೆಯ ರಕ್ಷಣೆಗಾಗಿ ಈಗ ಮಾವು ಬೆಳಗಾರರಿಗೆ ತೋಟಗಾರಿಕೆ ಇಲಾಖೆ ಕೆಲವು ಸಲಹೆಗಳನ್ನು ನೀಡಿದೆ.

Last Updated : Dec 29, 2021, 08:42 PM IST
  • ಈ ವರ್ಷ ಅಕಾಲಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದೆ. ಅಲ್ಲದೇ ಈಗ ಬಿಳುತ್ತಿರುವ ಇಬ್ಬನಿಯಿಂದ ಮತ್ತು ಕಡಿಮೆ ತಾಪಮಾನದಿಂದಾಗಿ ಮಾವು ಹಾಗೂ ಪೇರು ಬೆಳೆಗಳಲ್ಲಿ ಹೂ ಕಚ್ಚುತ್ತಿಲ್ಲ ಮತ್ತು ಹೂ ಉದುರುತ್ತಿದೆ.
  • ಇದಲ್ಲದೆ ಕೀಟ ಮತ್ತು ರೋಗಗಳ ಬಾಧೆಯೂ ಕಂಡು ಬಂದಿರುತ್ತದೆ.ಈ ಹಿನ್ನಲೆಯಲ್ಲಿ ಮಾವಿನ ಬೆಳೆಯ ರಕ್ಷಣೆಗಾಗಿ ಈಗ ಮಾವು ಬೆಳಗಾರರಿಗೆ ತೋಟಗಾರಿಕೆ ಇಲಾಖೆ ಕೆಲವು ಸಲಹೆಗಳನ್ನು ನೀಡಿದೆ.
Agriculture Tips: ಮಾವು ಬೆಳೆಗಾರರಿಗೆ ಇಲ್ಲಿವೆ ಮಹತ್ವದ ಸಲಹೆಗಳು  title=

ಬೆಂಗಳೂರು: ಈ ವರ್ಷ ಅಕಾಲಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದೆ. ಅಲ್ಲದೇ ಈಗ ಬಿಳುತ್ತಿರುವ ಇಬ್ಬನಿಯಿಂದ ಮತ್ತು ಕಡಿಮೆ ತಾಪಮಾನದಿಂದಾಗಿ ಮಾವು ಹಾಗೂ ಪೇರು ಬೆಳೆಗಳಲ್ಲಿ ಹೂ ಕಚ್ಚುತ್ತಿಲ್ಲ ಮತ್ತು ಹೂ ಉದುರುತ್ತಿದೆ.ಇದಲ್ಲದೆ ಕೀಟ ಮತ್ತು ರೋಗಗಳ ಬಾಧೆಯೂ ಕಂಡು ಬಂದಿರುತ್ತದೆ.ಈ ಹಿನ್ನಲೆಯಲ್ಲಿ ಮಾವಿನ ಬೆಳೆಯ ರಕ್ಷಣೆಗಾಗಿ ಈಗ ಮಾವು ಬೆಳಗಾರರಿಗೆ ತೋಟಗಾರಿಕೆ ಇಲಾಖೆ ಕೆಲವು ಸಲಹೆಗಳನ್ನು ನೀಡಿದೆ.

ಇದನ್ನೂ ಓದಿ: New Wage Code : ಉದ್ಯೋಗಿಗಳಿಗೆ ಸಿಹಿ ಸುದ್ದಿ : ಈಗ ವಾರದಲ್ಲಿ 4 ದಿನ ಮಾತ್ರ ಆಫೀಸ್ ಕೆಲಸ, 3 ದಿನ ರಜೆ!

ಈ ಸಂದರ್ಭದಲ್ಲಿ ರೈತರು ಗಿಡಗಳ ಸುತ್ತಲೂ ಅವುಗಳ ಆಯುಸ್ಸಿಗೆ ತಕ್ಕಂತೆ 3 - 6 ಅಡಿ ಸುತ್ತಲೂ ಮಡಿ ಮಾಡಿ ಮಣ್ಣನ್ನು ಸಡಿಲಗೊಳಿಸಬೇಕು. ಈ ಮಡಿಯಲ್ಲಿ ಜೀವಾಮೃತ, ಎರೆಜ ಮತ್ತು ಗೋಕೃಪಾಮೃತದಂತಹ ಸಾವಯವ ದ್ರಾವಣಗಳನ್ನು 15 ದಿನಗಳಿಗೊಮ್ಮೆ ಸುರಿಯುತ್ತಾ ಇರಬೇಕು. ಆರ್ಕಾ ಮೈಕ್ರೋಬಿಯಲ್ ಕನ್ಸೋರ್ಷಿಯಂ ಕೂಡ ಬಳಸುವುದು ಸೂಕ್ತ. ಇದರಿಂದಾಗಿ ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಾಗುತ್ತದೆ.

ಒಣಗಿದ ರೋಗಗ್ರಸ್ತ ಕೀಟದ ಬಾಧೆಗೆ ತುತ್ತಾದ ರಂಬೆ ಕೊಂಬೆಗಳನ್ನು ಕತ್ತರಿಸಿ ನಾಶಪಡಿಸಬೇಕು. ಸಾಯಂಕಾಲದ ಸಮಯದಲ್ಲಿ ತೋಟದ ನಾಲ್ಕು ಕಡೆಗೆ ಹೊಗೆ ಹಾಕಬೇಕು. ಇದರಿಂದಾಗಿ ಹೂ ಕಚ್ಚುವುದಕ್ಕೆ ಸಹಕಾರಿ.ಇದಲ್ಲದೇ ಕೆಲ ಸಸ್ಯ ಪ್ರಚೋದಕಗಳನ್ನು ತಜ್ಞರ ಸಲಹೆಯಂತೆ ಬಳಸಿದರೆ ಹೂ ಕಚ್ಚುವ ಪ್ರಮಾಣ ಹೆಚ್ಚಾಗುತ್ತದೆ.ಉದಾಹರಣೆಗೆ ಬೋರನ್, ಪ್ಲಾನೋಫಿಕ್ಸ್ ಅಲ್ಲದೇ ಎಸ್.ಆಯ್. ಫ್ಲಾವರ್ ಮತ್ತು ಜೈಮ್ ಗಳಂತಹ ಸಸ್ಯ ಪ್ರಚೋದಕಗಳು ಮಾರುಕಟ್ಟೆಯಲ್ಲಿ ಲಭ್ಯ.

ಇದನ್ನೂ ಓದಿ: ಭಾರತದಲ್ಲಿನ ಕೊರೊನಾ ಪ್ರಕರಣಗಳ ಹೆಚ್ಚಳದ ಕುರಿತು ಕೇಂಬ್ರಿಡ್ಜ್ ವಿವಿ ಹೇಳಿದ್ದೇನು ಗೊತ್ತೇ?

ಇದೇ ಸಮಯದಲ್ಲಿ ಪೋಟ್ಯಾಷೀಯಂ ನೈಟ್ರೀಟ್ (13-0-45) ಮತ್ತು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ರವರು ಆವಿಷ್ಕಾರಿಸಿದ ಮಾವು ಸ್ಪೆಷಲ್ ಮಿಶ್ರಣವನ್ನು 1ಲೀ ನೀರಿಗೆ ಬೆರೆಸಿ 15 ದಿನಗಳು ಅಥವಾ ತಿಂಗಳಿಗೊಮ್ಮೆ ಸಿಂಪಡಿಸಿದರೆ ಹೂ ಕಚ್ಚಿ ಹೂ ಉದರದಂತೆ ಕಾಪಾಡುತ್ತದೆ. ಈ ಸಮಯದಲ್ಲಿ ಎಲೆ ತಿನ್ನುವ ಕೀಟ, ಗೂಡು ಕಟ್ಟುವ ಕೀಟ ವಿಪರೀತವಾಗಿ ಕಂಡು ಬಂದಿದೆ.

ಇವುಗಳ ಹತೋಟಿಗಾಗಿ ಬೇವಿನಣ್ಣೆ 10000 ಪಿ.ಪಿ. ಎಂ. 2 ಮಿಲಿ ಅಥವಾ ರಾಸಾಯನಿಕ ಬಳಸುವವರು ಲಾಂಬ್ಡ ಸಿಯಾಲೋಥ್ರಿನ್ ಶೇಕಡಾ 5% , 1 ಮಿಲಿ ಅಥವಾ ಕ್ವಿನಾಲಫಾಸ್ 25 ಇ.ಸಿ. 2ಮಿಲಿಯಂತಹ ಕೀಟನಾಶಕಗಳ ಜೊತೆಗೆ ರೋಗಗಳ ಹತೋಟಿಗಾಗಿ ಥಯೋಫಿನೈಟ್ ಮೀಥೈಲ್-1 ಗ್ರಾಂ ಅಥವಾ  ಕಾರ್ಬೇಂಡಾಜಿಮ್ 1 ಗ್ರಾಂ ಅಥವಾ ಸಂಯುಕ್ತ ಶಿಲೀಂದ್ರನಾಶಕ ಸಾಫ-2 ಗ್ರಾಂ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸುತ್ತಿರಬೇಕು. ನೆಲದಿಂದ ಬುಡಕ್ಕೆ  3 ಅಡಿಯಷ್ಟು ಸಿ.ಓ.ಸಿ (ಬ್ಲೆöÊಟಾಕ್ಸ್) 100 ಗ್ರಾಂ. ಜೊತೆಗೆ ಕ್ಲೇರೋಪರಿಫಾಸ್ 20 ಇಸಿ ಕೀಟನಾಶಕವನ್ನು 5 ಮಿಲಿ. 1 ಲೀ. ನೀರಿಗೆ ಮಿಶ್ರಣ ಮಾಡಿ ಬಡ್ಡೆಗೆ ಲೇಪಿಸುವುದರಿಂದ ಗೆದ್ದಲು, ಇನ್ನಿತರ ಕೀಟಗಳನ್ನು ಹತೋಟಿಯಲ್ಲಿಡಬಹುದು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ತಜ್ಙ (ಸಂಪನ್ಮೂಲ ವ್ಯಕ್ತಿ) ವಾಮನಮೂರ್ತಿ ಮೊ.ಸಂ: 9482672039, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Video : ಮದುವೆಯ ಅಲಂಕಾರ ಮುಗಿಸಿಕೊಂಡು ಬಂದ ವಧುವಿನಿಂದ ವಿವಾಹಕ್ಕೆ ನಿರಾಕರಣೆ ಕಾರಣ ಇಷ್ಟೇ .!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News