ಮಠದಲ್ಲಿ ಮಹಿಳೆ ಜೊತೆ ವ್ಯಕ್ತಿ ಮೋಜು-ಮಸ್ತಿ..? ಸಮುದಾಯದ ಮುಖಂಡರಿಂದ ಸ್ವಾಮೀಜಿಗೆ ಕ್ಲಾಸ್..!

Valmiki Peeth : ಅದು ಸಮಾಜದ ಜನರು ಭಕ್ತಿ ಭಾವದಿಂದ ಪೂಜಿಸುವ ಜಾಗ. ಅಲ್ಲಿನ ಶ್ರೀಗಳೇ ಭಕ್ತರಿಗೆ ಆರಾಧ್ಯ ದೈವ. ಆದರೆ ಅಂತಹ ಪವಿತ್ರ ಸ್ಥಳದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವುದು ಸಮಾಜದ ಮುಖಂಡರ ಕಣ್ಣಿಗೆ ಬಿದ್ದಿದೆ. ವ್ಯಕ್ತಿಯೊಬ್ಬ ಅಲ್ಲಿ ನಡೆಸುತ್ತಿರುವ ಚೆಲ್ಲಾಟ ನೋಡಿ ಇದೀಗ ಮುಖಂಡರೆ ಕೆಂಡಾಮಂಡಲರಾಗಿದ್ದು, ಇದೀಗ ಸ್ವಾಮೀಜಿಯನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅದು ಯಾವ ಮಠ, ಸ್ವಾಮೀಜಿ ಯಾರು ಅಂತೀರಾ ಈ ಸ್ಟೋರಿ ಓದಿ..  

Written by - Savita M B | Last Updated : Aug 13, 2023, 11:00 PM IST
  • ಸ್ವಾಮೀಜಿಯ ಮುಂದೆ ಸಮಾಜದ ಮುಖಂಡರ ದೂರುಗಳ ಸುರಿಮಳೆ
  • ಮೌನವಾಗಿ ಕುಳಿತಿರುವ ಸ್ವಾಮೀಜಿ ಮುಂದೆ ಮುಖಂಡರ ಆಕ್ರೋಶ.
  • ಪವಿತ್ರ ಮಠದಲ್ಲಿ ನೋಡಬಾರದ್ದನ್ನ ನೋಡಿರುವ ಸಮಾಜದ ಮುಖಂಡರು
ಮಠದಲ್ಲಿ ಮಹಿಳೆ ಜೊತೆ ವ್ಯಕ್ತಿ ಮೋಜು-ಮಸ್ತಿ..? ಸಮುದಾಯದ ಮುಖಂಡರಿಂದ ಸ್ವಾಮೀಜಿಗೆ ಕ್ಲಾಸ್..! title=

ದಾವಣಗೇರೆ : ಸ್ವಾಮೀಜಿಯ ಮುಂದೆ ಸಮಾಜದ ಮುಖಂಡರ ದೂರುಗಳ ಸುರಿಮಳೆ, ಮೌನವಾಗಿ ಕುಳಿತಿರುವ ಸ್ವಾಮೀಜಿ ಮುಂದೆ ಮುಖಂಡರ ಆಕ್ರೋಶ. ಪವಿತ್ರ ಮಠದಲ್ಲಿ ನೋಡಬಾರದ್ದನ್ನ ನೋಡಿರುವ ಸಮಾಜದ ಮುಖಂಡರು ಸ್ವಾಮೀಜಿಯನ್ನ ತರಾಟೆಗೆ ತೆಗೆದುಕೊಂಡಿರುವ ಪರಿಯಿದು. 

ಹೌದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿರುವ ಪ್ರಭಾವಿ ವಾಲ್ಮೀಕಿ ನಾಯಕ ಸಮಾಜದ ವಾಲ್ಮೀಕಿ ಪೀಠದಲ್ಲಿ ನಡೆಯಬಾರದ್ದು ನಡೆಯುತ್ತಿದೆ. ಮಠದಲ್ಲಿ ವ್ಯಕ್ತಿಯೊಬ್ಬ ತೊಡೆಯ ಮೇಲೆ ಮಹಿಳೆಯರನ್ನ ಕೂರಿಸಿಕೊಂಡು ಚಕ್ಕಂದವಾಡುತ್ತಿದ್ದಾನೆ. ಇದನ್ನ ನಾವು ಕಣ್ಣಾರೆ ಕಂಡಿದ್ದೇವೆ. 

ಅಲ್ಲದೇ, ನೀವು ನಮ್ಮ ಸಮಾಜವನ್ನ ಕಡಗಣಿಸುತ್ತಿದ್ದೀರಿ ಎಂದು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕ ಪದಾಧಿಕಾರಿಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಸ್ವಾಮೀಜಿಯ ನಡವಳಿಕೆಯಿಂದ ಬೇಸತ್ತಿದ್ದಾರೆ. ಅದೇ ಕಾರಣಕ್ಕೆ ಒಟ್ಟಿಗೆ ವಾಲ್ಮೀಕಿ ಪೀಟಕ್ಕೆ ಬಂದಿದ್ದು, ಸ್ವಾಮೀಜಿಯನ್ನ ಹೊರಗೆ ಕೂರಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಠದಲ್ಲಿ ವ್ಯಕ್ತಿಯೊಬ್ಬ ಮಹಿಳೆಯರ ಜೊತೆ ಇರುವುದನ್ನ ನಾವು ಕಣ್ಣಾರೆ ನೋಡಿದ್ದೇವೆ. ಮಠದಲ್ಲಿ ಇಂತಹ ಅಸಹ್ಯ ಕೃತ್ಯಗಳಿಗೆ ಯಾಕೆ ಅವಕಾಶ ಕೊಟ್ಟಿದ್ದೀರಿ ? ಕೊಪ್ಪಳದಲ್ಲಿರುವ ಮಠದ ಬೆಳ್ಳಿಯನ್ನ ಯಾರನ್ನ ಕೇಳಿ ಮಾರಾಟ ಮಾಡಿದ್ದೀರಿ ?, ನಿಮ್ಮ ಹಿಂಬಾಲಕರನ್ನಾಗಿ ಬೇರೆ ಸಮುದಾಯದವರನ್ನ ಯಾಕೆ ಇಟ್ಟುಕೊಂಡಿದ್ದೀರಿ? ಎಂದು ಸ್ವಾಮೀಜಿಯ ನಡೆಯ ವಿರುದ್ದವೇ ತೀವ್ರಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ-ಕೈ-ದಳ ನಡುವೆ ನಿವೇಶನ ಹಂಚಿಕೆ ಒಪ್ಪಂದ?..ತುಮಕೂರಿನಲ್ಲಿ ನಿಲ್ಲದ ಹಾಲಿ-ಮಾಜಿ ಶಾಸಕರ ಟಾಕ್ ವಾರ್..!

ನಿಮ್ಮ ನಡವಳಿಕೆಯಿಂದ ವಾಲ್ಮೀಕಿ ಮಠದ ಮತ್ತು ಸಮಾಜದ ಘನತೆ ಹಾಳಾಗುತ್ತಿದೆ. ನಿಮ್ಮ ನಡವಳಿಕೆಯನ್ನ ಸರಿ ಮಾಡಿಕೊಳ್ಳಬೇಕು, ಮಠದಲ್ಲಿ ನಡೆಯುವ ನಿಯಮ ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಮಠದಲ್ಲಿಯೇ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಎಚ್ಚರಿಕೆಯನ್ನ ನೀಡಿದ್ದಾರೆ.

ಈ ವೇಳೆ ಸ್ವಾಮೀಜಿ ಆರೋಪಗಳ ಬಗ್ಗೆ ಟ್ರಸ್ಟ್ ಮೀಟಿಂಗ್ ನಲ್ಲಿ ಸಾಕ್ಷಿಗಳನ್ನು ನೀಡಿ ಅಲ್ಲಿಯೇ ಚರ್ಚೆ ಮಾಡೋಣ ಎಂದು ಹೇಳಿದ್ದಕ್ಕೆ ಮುಖಂಡರು ಕೆಂಡಾಮಂಡಲರಾದರು. ನೀವೇನು ಬೆಳ್ಳಿಯನ್ನ ಟ್ರಸ್ಟ್ ಅನುಮತಿ ಪಡೆದೇ ಮಾರಾಟ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

 ಕೂಡಲೇ ಅಸಹ್ಯ ಕೃತ್ಯಗಳನ್ನ ನಡೆಸುವವರನ್ನ ಮಠದಿಂದ ಹೊರಹಾಕಬೇಕು, ನಿಮ್ಮ ನಡವಳಿಕೆಯನ್ನ 20 ದಿನಗಳಲ್ಲಿ ಸರಿ ಮಾಡಿಕೊಳ್ಳಬೇಕು. ಇದೇ ರೀತಿ ಮುಂದುವರಿದರೆ ನಾವು ಸಮಾಜದ ಪರವಾಗಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರಸನ್ನಾನಂದ ಪುರಿ ಶ್ರೀಗಳಿಗೆ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ.

ಸಮಾಜದ ತಪ್ಪು ಒಪ್ಪುಗಳನ್ನ ತಿದ್ದಬೇಕಿದ್ದ ಸ್ವಾಮೀಜಿಯ ವಿರುದ್ದವೇ ಸಮಾಜದ ಮುಖಂಡರು ದೂರುಗಳ ಸುರಿಮಳೆಗೈದಿದ್ದಾರೆ. ಸ್ವಾಮೀಜಿಯೇ ನಡವಳಿಕೆ ಬಗ್ಗೆ ಆಕ್ಷೇಪವೆತ್ತಿದ್ದು, ಸ್ವಾಮೀಜಿಗೆ ಭಕ್ತರೇ ಬುದ್ದಿ ಹೇಳುತ್ತಿರುವುದು ವಿಪರ್ಯಾಸ.

ಇದನ್ನೂ ಓದಿ-77ನೇ ಸ್ವಾತಂತ್ರ್ಯ ದಿನಾಚರಣೆಗೆ ಕೌಂಟ್‌ಡೌನ್‌, ಮದುವಣಗಿತ್ತಿಯಂತೆ ಸಿಂಗಾರಗೊಂಡ ಮಾಣಿಕ್‌ ಷಾ ಮೈದಾನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News