ಬೆಂಗಳೂರು: ನಾಗಪೂಜೆಯಲ್ಲಿ ಅಕ್ರಮವಾಗಿ ಜೀವಂತ ಹಾವನ್ನು ಹಿಡಿದು ಪೂಜೆ ಸಲ್ಲಿಸಿದ್ದ ಜಗ್ಗಿ ವಾಸುದೇವ್ ವಿರುದ್ಧ ಈಗ ಅರಣ್ಯ ಸಂರಕ್ಷಣೆ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾಲಾರಿ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಇಶಾ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಈ ಘಟನೆ ನಡೆದಿದೆ.ಪ್ರಖರವಾದ ಬೆಳಕಿನಲ್ಲಿ ಲಕ್ಷಾಂತರ ಜನಸ್ತೋಮದ ಮಧ್ಯೆ ಜಿವಂತ ಹಾವನ್ನು ಹಿಡಿದು ಹಿಂಸೆ ಮಾಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ದೂರು ದಾಖಲಿಸಲಾಗಿದೆ.
Complaint by an SPCA member to the DCF Ckikkaballapur against @SadhguruJV of @ishafoundation for flaunting a rat snake at a public event. The rat snake species are protected under the Indian Wildlife Act #SadhguruQuotes #sadhgurusannidhi @TheSouthfirst @anusharavi10 pic.twitter.com/T4IlfDOrWC
— Bellie Thomas (@belliethomas) October 15, 2022
ಅಕ್ರಮವಾಗಿ ಹಾವನ್ನು ಹಿಡಿದು ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಡಿ ಚಿಕ್ಕಬಳ್ಳಾಪುರದ ಉರಗತಜ್ಞ ಸಿಎನ್ ಪೃಥ್ವಿರಾಜ್ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೆ ದೂರು ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ