ದುಡಿದು ಸ್ವಂತ ಮನೆ ಕಟ್ಟುತ್ತಿದ್ದ 24 ವರ್ಷದ ಯುವತಿ ಅಪಘಾತದಲ್ಲಿ ಸಾವು

ನಿನ್ನೆ ಭಾನುವಾರ ಕಂಪನಿಗೆ ರಜೆ. ಹಾಗಾಗಿ ಸುಲೋಚನ ಸ್ನೇಹಿತ ಆನಂದ್ ಎಂಬಾತನ ಜೊತೆಗೆ ಕನಕಪುರ ಕಡೆ ತೆರಳಿದ್ಳು. ಸುಜುಕಿ ಆ್ಯಕ್ಸಿಸ್ ಸ್ಕೂಟರ್ ಹತ್ತಿ ಹೊರಟವ್ರು ಸುತ್ತಾಟ ನಡೆಸಿ ಸಂಜೆ ಆಗುತ್ತಿದ್ದಂತೆ ಮತ್ತೆ ಬೆಂಗಳೂರು ಕಡೆಗೆ ವಾಪಸ್ಸಾಗಿದ್ರು. ನೈಸ್ ರಸ್ತೆ ಮೂಲಕ ಬಂದವರು ಇನ್ನೇನು ಪಿಇಎಸ್ ಕಾಲೇಜು ಟೋಲ್ ದಾಟಬೇಕಿತ್ತು ಅಷ್ಟರಲ್ಲಾಗಲೇ...   

Written by - VISHWANATH HARIHARA | Edited by - Yashaswini V | Last Updated : Apr 3, 2023, 03:47 PM IST
  • ಮಂಡ್ಯ ಮೂಲದ ಸುಲೋಚನಾ ಕುಟುಂಬ ಜಯನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ರು.
  • ಈಕೆಯ ತಾಯಿ ಮನೆಗೆಲಸ ಮಾಡಿ ಮಗಳನ್ನ ಓದಿಸಿದ್ರು.
  • ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಒಂದೂವರೆ ವರ್ಷದ ಹಿಂದೆ ಕೋರಮಂಗಲದಲ್ಲಿರುವ ಕಂಪನಿ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು
ದುಡಿದು ಸ್ವಂತ ಮನೆ ಕಟ್ಟುತ್ತಿದ್ದ 24 ವರ್ಷದ ಯುವತಿ ಅಪಘಾತದಲ್ಲಿ ಸಾವು title=

ಬೆಂಗಳೂರು: ಆಕೆ ಬಡತನದಲ್ಲೇ ಬೆಳೆದವಳು. ಬದುಕಿನ ಬಗ್ಗೆ ಕನಸು ಕಟ್ಟಿಕೊಂಡಿದ್ದವಳು. ಸ್ವಂತದ್ದೊಂದು ಮನೆ ಮಾಡಬೇಕೆಂಬ ಆಸೆ ಹೊಂದಿದ್ದವಳು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಭಾನುವಾರ ಅಂತಾ ಸ್ನೇಹಿತನ ಜೊತೆಗೆ ಸ್ಕೂಟರ್ ಹತ್ತಿ ಹೋದವಳು ಮನೆ ಸೇರೊ ಮುಂಚಿಯೇ ಸಾವಿನ ಮನೆ ಸೇರಿದ್ದಾಳೆ. ಆ ಮೃತ ದುರ್ದೈವಿಯ ಹೆಸರು ಸುಲೋಚನಾ. 

ಮಂಡ್ಯ ಮೂಲದ ಸುಲೋಚನಾ ಕುಟುಂಬ ಜಯನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ರು. ಈಕೆಯ ತಾಯಿ ಮನೆಗೆಲಸ ಮಾಡಿ ಮಗಳನ್ನ ಓದಿಸಿದ್ರು. ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಒಂದೂವರೆ ವರ್ಷದ ಹಿಂದೆ ಕೋರಮಂಗಲದಲ್ಲಿರುವ ಕಂಪನಿ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು ಸುಲೋಚನಾ. ತಮ್ಮನನ್ನ ತಾನೇ ಓದಿಸ್ತಿದ್ಳು. ಆದರೆ ವಿಧಿ ಎಲ್ಲದಕ್ಕೂ ಅಂತ್ಯ ಹಾಡಿಬಿಟ್ಟಿದೆ.

ಇದನ್ನೂ ಓದಿ- Crime News: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ, 8 ಮಂದಿ ಸಾವು!

ನಿನ್ನೆ ಭಾನುವಾರ ಕಂಪನಿಗೆ ರಜೆ. ಹಾಗಾಗಿ ಸುಲೋಚನ ಸ್ನೇಹಿತ ಆನಂದ್ ಎಂಬಾತನ ಜೊತೆಗೆ ಕನಕಪುರ ಕಡೆ ತೆರಳಿದ್ಳು. ಸುಜುಕಿ ಆ್ಯಕ್ಸಿಸ್ ಸ್ಕೂಟರ್ ಹತ್ತಿ ಹೊರಟವ್ರು ಸುತ್ತಾಟ ನಡೆಸಿ ಸಂಜೆ ಆಗುತ್ತಿದ್ದಂತೆ ಮತ್ತೆ ಬೆಂಗಳೂರು ಕಡೆಗೆ ವಾಪಸ್ಸಾಗಿದ್ರು. ನೈಸ್ ರಸ್ತೆ ಮೂಲಕ ಬಂದವರು ಇನ್ನೇನು ಪಿಇಎಸ್ ಕಾಲೇಜು ಟೋಲ್ ದಾಟಬೇಕಿತ್ತು ಅಷ್ಟರಲ್ಲಾಗಲೇ ಸ್ಕೂಟರ್ ಹಿಂಬದಿ ಟೈರ್ ಪಂಕ್ಚರ್ ಆಗಿ ಬಸ್ಟ್ ಆಗಿದೆ. ಇಬ್ಬರು ಬೈಕ್ ನಿಂದ ಕೆಳಗೆ ಬಿದ್ದು ಗಂಭೀರವಾದ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ತಕ್ಷಣ ಸ್ಥಳೀಯರು  ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು. ಆನಂದ್ ಫುಲ್ ಹೆಲ್ಮೆಟ್ ಧರಿಸಿದ್ದ ಹಾಗಾಗಿ ತಲೆಗೆ ಹೆಚ್ಚು ಗಾಯಗಳಾಗಿರ್ಲಿಲ್ಲ. ಸುಲೋಚನಾ ಹಾಫ್ ಹೆಲ್ಮೆಟ್ ಧರಿಸಿದ್ದಳು. ಹಾಗಾಗಿ ತಲೆಗೆ ಗಂಭೀರ ಗಾಯವಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಲೋಚನಾ ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಮೃತಪಟ್ಟಿದ್ದಾಳೆ. 

ಇನ್ನು ಸುಲೋಚಾ ತಾಯಿ ಮತ್ತು ತಮ್ಮನ ಜೊತೆಗೆ ಬೆಂಗಳೂರಲ್ಲಿ ವಾಸವಿದ್ರೆ ತಂದೆ ಮಂಡ್ಯದಲ್ಲಿ ಇರುತ್ತಿದ್ದರು. ಹಾಗಾಗಿ, ಸುಲೋಚನ ತನ್ನ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ತಮ್ಮನನ್ನ ಓದಿಸುತ್ತಿದ್ಳು. ಬೆಂಗಳೂರಲ್ಲಿ ಸ್ವಂತದ್ದೊಂದು ಮನೆ ಮಾಡಿ ಕುಟುಂಬಸ್ಥರನ್ನ ಖುಷಿಯಾಗಿಡೊ ಆಲೋಚನೆಯಲ್ಲಿದ್ಳು... ಅಷ್ಟರಲ್ಲಾಗಲೇ ವಿಧಿ ಸುಲೋಚನ ಜೀವನದ ಪಯಣವನ್ನೇ ಮುಗಿಸಿದ್ದಾಳೆ.

ಇದನ್ನೂ ಓದಿ- ಲಿಪ್ಸ್ಟಿಕ್ ಹಚ್ಚಿ ಹೆಂಗಸರ ಒಳ ಉಡುಪು ಧರಿಸಿದ ಗಂಡ: ಪತಿ ವಿರುದ್ಧ ಪತ್ನಿ ಕಂಪ್ಲೈಟ್

ಕಷ್ಟಪಟ್ಟು ಬೆಳೆದ ಈಕೆ ಓದಿ ಇಂಜಿನಿಯರ್ ಆಗಿ... ಒಂದೊಳ್ಳೆ ಕೆಲಸಕ್ಕೆ ಸೇರಿ ಕೈ ತುಂಬ ಸಂಬಳ ಪಡಿತಿದ್ದವಳು.. ಜೀವನದ ಬಗ್ಗೆ ಬಹುದೊಡ್ಡ ಕನಸು ಕಂಡಿದ್ದವಳು.. ನಡು ರಸ್ತೆಯಲ್ಲಿ ಬಿದ್ದು ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ಎಂತಹವರ ಕಣ್ಣಲ್ಲೂ ಸಹ ನೀರು ತರಿಸುತ್ತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News