4 ಗಂಟೆ ರೈಲು ವಿಳಂಬ: ರೇಲ್ವೆ ಅಧಿಕಾರಿಗೆ ಗ್ರಾಹಕನ ಕ್ಷಮೆ ಕೋರಲು ನಿರ್ದೇಶಿಸಿದ ಆಯೋಗ

 ಧಾರವಾಡದ ಮಾಳಮಡ್ಡಿ ನಿವಾಸಿ ಪ್ರಕಾಶ ಉಪ್ಪಾರ ಎಂಬುವವರು ಜರ್ಮನಿಯಲ್ಲಿ ನೆಲಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಸಂಬಂಧಿಕರ ಮದುವೆಯ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದರು.

Written by - Zee Kannada News Desk | Last Updated : Feb 3, 2024, 03:59 PM IST
  • ಈ ದೂರಿಗೆ ಆಕ್ಷೇಪಣೆ ಸಲ್ಲಿಸಿದ ರೇಲ್ವೆ ಇಲಾಖೆ ತಾವು ದೇಶದಲ್ಲಿ ಸಂಚರಿಸುವ ಯಾವುದೇ ರೈಲುಗಳ ಆಗಮನ ಮತ್ತು ನಿರ್ಗಮನದ ಗ್ಯಾರಂಟಿ ಕೊಡುವುದಿಲ್ಲ
  • ಅಲ್ಲದೇ ರೇಲ್ವೆ ಇಲಾಖೆ ಮತ್ತು ವಿಮಾನ ನಿಲ್ದಾಣದ ಪ್ರಾಧಿಕಾರದ ಮಧ್ಯೆ ಯಾವುದೇ ಒಪ್ಪಂದ ಇರುವುದಿಲ್ಲ
  • ಅಷ್ಟಕ್ಕೂ ದೂರುದಾರ ಸಂಚರಿಸುತ್ತಿದ್ದ ರೈಲ್‍ನಂ.17317 ತಾಂತ್ರಿಕ ಕಾರಣಗಳಿಂದ 4 ಗಂಟೆ ವಿಳಂಬವಾಗಿ ಮುಂಬೈ ತಲುಪಿತ್ತು
4 ಗಂಟೆ ರೈಲು ವಿಳಂಬ: ರೇಲ್ವೆ ಅಧಿಕಾರಿಗೆ ಗ್ರಾಹಕನ ಕ್ಷಮೆ ಕೋರಲು ನಿರ್ದೇಶಿಸಿದ ಆಯೋಗ title=

ಧಾರವಾಡ: ಧಾರವಾಡದ ಮಾಳಮಡ್ಡಿ ನಿವಾಸಿ ಪ್ರಕಾಶ ಉಪ್ಪಾರ ಎಂಬುವವರು ಜರ್ಮನಿಯಲ್ಲಿ ನೆಲಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಸಂಬಂಧಿಕರ ಮದುವೆಯ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದರು.

ಮದುವೆ ಮುಗಿದ ನಂತರ ಜರ್ಮನಿಗೆ ಮರಳಲು ಮುಂಬೈನಿಂದ ವಿಮಾನ ಯಾನ ದಿ.28/11/2022 ರಂದು ನಿಗದಿಯಾಗಿತ್ತು. ಅವರು ಧಾರವಾಡದಿಂದ ಮುಂಬೈ ತಲುಪಲು ರೈಲ್‍ನಂ.17317 ರಲ್ಲಿ 3ನೇ ಎಸಿ ಬುಕ್ ಮಾಡಿಸಿದ್ದರು. ಆದರೆ ರೈಲು ನಿಗದಿತ ವೇಳೆಗಿಂತ 4 ಗಂಟೆ ತಡವಾಗಿ ದಾದರ್ ರೇಲ್ವೆ ಸ್ಟೇಶನ್ ತಲುಪಿತ್ತು. ಇದರಿಂದ ದೂರುದಾರರಿಗೆ ವಿಮಾನ ನಿಲ್ದಾಣದ ಒಳಗಡೆ ಹೋಗಲು ಅನಾನುಕೂಲ ಜೊತೆಗೆ ಮಾನಸಿಕ ಕಿರಿಕಿರಿ ಉಂಟಾಗಿತ್ತು. ಕೊನೆಗೆ ವಿಮಾನ ಹೊರಡುವ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಗಳನ್ನು ವಿನಂತಿಸಿದ ದೂರುದಾರ ಜರ್ಮನಿಗೆ ತನ್ನ ಪ್ರಯಾಣ ಬೆಳೆಸಿದ್ದರು.

ಇದನ್ನೂ ಓದಿ: ಇದನ್ನೂ ಓದಿ: Wi-Fi Router: ರಾತ್ರಿ ಮಲಗುವ ಮುನ್ನ Wi-Fi ರೂಟರ್ ಆಫ್ ಮಾಡಲ್ವಾ? ಇದೆಷ್ಟು ಡೇಂಜರಸ್ ಗೊತ್ತಾ?

ದೂರುದಾರನಿಗೆ ಲಗೇಜುಗಳನ್ನು ಆತ ಜರ್ಮನಿ ತಲುಪಿದ 2 ದಿನಗಳ ನಂತರ ತಡವಾಗಿ ಬೇರೆ ವಿಮಾನದ ಮೂಲಕ ಕಳುಹಿಸಿಕೊಟ್ಟಿದ್ದರು. ರೇಲ್ವೆ ಇಲಾಖೆಯವರ ಈ ರೀತಿಯ ವಿಳಂಬ ಧೋರಣೆಯಿಂದ ತಾನು ಮಾನಸಿಕ ಕಿರಿಕಿರಿ ಅನುಭವಿಸುವಂತಾಯಿತು. ಕಾರಣ ರೇಲ್ವೆ ಇಲಾಖೆಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ದಿ.26/04/2023 ರಂದು ಈ ದೂರನ್ನು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಈ ದೂರಿಗೆ ಆಕ್ಷೇಪಣೆ ಸಲ್ಲಿಸಿದ ರೇಲ್ವೆ ಇಲಾಖೆ ತಾವು ದೇಶದಲ್ಲಿ ಸಂಚರಿಸುವ ಯಾವುದೇ ರೈಲುಗಳ ಆಗಮನ ಮತ್ತು ನಿರ್ಗಮನದ ಗ್ಯಾರಂಟಿ ಕೊಡುವುದಿಲ್ಲ. ಅಲ್ಲದೇ ರೇಲ್ವೆ ಇಲಾಖೆ ಮತ್ತು ವಿಮಾನ ನಿಲ್ದಾಣದ ಪ್ರಾಧಿಕಾರದ ಮಧ್ಯೆ ಯಾವುದೇ ಒಪ್ಪಂದ ಇರುವುದಿಲ್ಲ. ಅಷ್ಟಕ್ಕೂ ದೂರುದಾರ ಸಂಚರಿಸುತ್ತಿದ್ದ ರೈಲ್‍ನಂ.17317 ತಾಂತ್ರಿಕ ಕಾರಣಗಳಿಂದ 4 ಗಂಟೆ ವಿಳಂಬವಾಗಿ ಮುಂಬೈ ತಲುಪಿತ್ತು. ಅದರಲ್ಲಿ ರೇಲ್ವೆ ಇಲಾಖೆ ಯಾವುದೇ ಸೇವಾ ನ್ಯೂನ್ಯತೆ ಎಸಗಿರುವುದಿಲ್ಲ ಅಂತಾ ತಮ್ಮ ವಿರುದ್ಧದ ದೂರಿಗೆ ಆಕ್ಷೇಪಣೆ ಸಲ್ಲಿಸಿದ್ದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೂ Voter ID Card Correction  ಮಾಡಿಸಬೇಕೆ ? ಇಲ್ಲಿದೆ  ಆನ್‌ಲೈನ್ ಪ್ರಕ್ರಿಯೆಯ ಹಂತ ಹಂತದ ವಿವರ 

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಶ್ರೀ.ಈಶಪ್ಪ.ಭೂತೆ, ಶ್ರೀಮತಿ.ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಶ್ರೀ.ಪ್ರಭು .ಸಿ ಹಿರೇಮಠ ಸದಸ್ಯರು, ರೈಲು ನಿಗದಿತ ವೇಳೆಗೆ ಮುಂಬೈ ತಲುಪದೇ ಇದ್ದರೂ ಸಹ ದೂರುದಾರ ತಾನು ಪ್ರಯಾಣಿಸುವ ವಿಮಾನದ ಮೂಲಕ ವಿದೇಶ ಪ್ರಯಾಣ ಬೆಳೆಸುವಲ್ಲಿ ಸಫಲನಾಗಿದ್ದಾನೆ. ಆದರೆ ರೈಲು ವಿಳಂಬದಿಂದಾಗಿ ಆತ ವಿಮಾನ ನಿಲ್ದಾಣ ತಲುಪಲು ಅನಾನುಕೂಲ ಮತ್ತು ಮಾನಸಿಕ ಯಾತನೆ ಅನುಭವಿಸಿದ್ದರೂ ಸಹ ಎದುರುದಾರರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಅನ್ನುವುದನ್ನು ಒಪ್ಪಲಾಗುವುದಿಲ್ಲ ಅಂತಾ ಆಯೋಗ ಅಭಿಪ್ರಾಯ ಪಟ್ಟು ದೂರುದಾರನ ದೂರನ್ನು ವಜಾಗೊಳಿಸಿ ಆದೇಶ ನೀಡಿರುವುದರ ಜೊತೆಗೆ ರೈಲು ವಿಳಂಬಕ್ಕಾಗಿ ಸಂಭಂದಿಸಿದ ರೇಲ್ವೆ ಅಧಿಕಾರಿಗೆ ದೂರುದಾರನಿಗೆ ಕ್ಷಮೆ ಯಾಚಿಸಲು ನಿರ್ದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News