ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾ ಪಟ್ಟಿ ಪ್ರಕಟ

ಹಿಂದಿನ ವೇಳಾಪಟ್ಟಿಗೆ ಆಕ್ಷೇಪಣೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿಯನ್ನು  ಪ್ರಕಟಿಸಿದೆ.

Written by - Ranjitha R K | Last Updated : Mar 12, 2021, 05:25 PM IST
  • ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾ ಪಟ್ಟಿ
  • 24ರಿಂದ ಜೂನ್ 16ರ ವರೆಗೆ ಪರೀಕ್ಷೆಗಳು ನಡೆಯಲಿದೆ.
  • ಹಳೆ ವೇಳಾಪಟ್ಟಿಗೆ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಹೊಸ ವೇಳಾ ಪಟ್ಟಿ ಪ್ರಕಟ
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾ ಪಟ್ಟಿ ಪ್ರಕಟ title=
24ರಿಂದ ಜೂನ್ 16ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ (file photo)

ಬೆಂಗಳೂರು : 2020-21ನೇ ಸಾಲಿನ ದ್ವೀತಿಯ ಪಿಯುಸಿ (PUC Exam) ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ (Revised time table)ಪ್ರಕಟಗೊಂಡಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಮೇ 24ರಿಂದ ಜೂನ್ 16ರ ವರೆಗೆ ಪರೀಕ್ಷೆಗಳು ನಡೆಯಲಿದೆ. ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಯ ಬಗ್ಗೆ ಆಕ್ಷೇಪಣೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹೊಸ ವೇಳಾಪಟ್ಟಿ ಪ್ರಕಟಿಸುತ್ತಿರುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. 

ಈ ಹಿಂದೆ ದ್ವೀತಿಯ ಪಿಯುಸಿಗೆ  ಮೇ 24ರಿಂದ ಜೂನ್ 10 ರವರೆಗೆ ಪರೀಕ್ಷೆ (Exam) ನಡೆಸಲು ನಿರ್ಧರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾ ಪಟ್ಟಿ ಪ್ರಕಟಿಸಿತ್ತು. ಆದರೆ ಈ ಬಗ್ಗೆ ಆಕ್ಷೇಪಣೆಗಳು ಕೇಳಿ ಬಂದಿತ್ತು. ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿಯನ್ನು (Revised time table) ಪ್ರಕಟಿಸಿದೆ. 

ಇದನ್ನೂ ಓದಿ : CBSE Revised Date Sheet : 10ನೇ 12 ನೇ ತರಗತಿ ಪರೀಕ್ಷೆಯ ಪರಿಷ್ಕೃತ ವೇಳಾ ಪಟ್ಟಿ ಪ್ರಕಟ

ಪರಿಷ್ಕೃತ ವೇಳಾಪಟ್ಟಿಯಂತೆ ಪರೀಕ್ಷಾ ದಿನಾಂಕ ಹೀಗಿದೆ :
ಮೇ 24: ಸೋಮವಾರ – ಇತಿಹಾಸ
ಮೇ 25 : ಮಂಗಳವಾರ – ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮೇ 26 : ಬುಧವಾರ – ಭೂಗೋಳ ಶಾಸ್ತ್ರ
ಮೇ 27 : ಗುರುವಾರ – ಮನಃಶಾಸ್ತ್ರ, ಬೇಸಿಕ್ ಮ್ಯಾಥ್
ಮೇ 28 : ಶುಕ್ರವಾರ – ತರ್ಕಶಾಸ್ತ್ರ
ಮೇ 29 : ಶನಿವಾರ – ಕನ್ನಡ (Kannada)
ಮೇ 31 : ಸೋಮವಾರ – ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ
ಜೂ 1 : ಮಂಗಳವಾರ – ಮಾಹಿತಿ ತಂತ್ರಜ್ಞಾನ, ರೀಟೈಲ್, ಅಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್
ಜೂ 2 : ಬುಧವಾರ – ರಾಜ್ಯಶಾಸ್ತ್ರ, ಗಣಕ ವಿಜ್ಞಾನ
ಜೂ 3 : ಗುರುವಾರ – ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
ಜೂ 4 : ಶುಕ್ರವಾರ – ಅರ್ಥಶಾಸ್ತ್ರ
ಜೂ 5 :ಶನಿವಾರ - ಗೃಹ ವಿಜ್ಞಾನ
ಜೂ 7 : ಸೋಮವಾರ – ವ್ಯವಹಾರ ಅಧ್ಯಯನ, ಭೌತಶಾಸ್ತ್ರ
ಜೂ 8: ಮಂಗಳವಾರ – ಭೂಗರ್ಭ ಶಾಸ್ತ್ರ
ಜೂ 9 : ಬುಧವಾರ – ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
ಜೂ 10: ಗುರುವಾರ – ಸಮಾಜಶಾಸ್ತ್ರ, ರಸಾಯನ ಶಾಸ್ತ್ರ
ಜೂ 11: ಶುಕ್ರವಾರ – ಉರ್ದು, ಸಂಸ್ಕೃತ
ಜೂ 12 : ಶನಿವಾರ – ಸಂಖ್ಯಾಶಾಸ್ತ್ರ
ಜೂ 14: ಸೋಮವಾರ – ಐಚ್ಛಿಕ ಕನ್ನಡ
ಜೂ 15 : ಮಂಗಳವಾರ – ಹಿಂದಿ (Hindi
ಜೂ 16 : ಬುಧವಾರ – ಇಂಗ್ಲೀಷ್

ಇದನ್ನೂ ಓದಿ : CBSE VS ICSE: ಯಾವ ಬೋರ್ಡ್ ಅಡಿ ಮಕ್ಕಳ Admission ಮಾಡಿಸುವುದು ಉಚಿತ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News