ಬಿಜೆಪಿ ಯಾವ ಶಾಸಕನೂ ಪಕ್ಷ ಬಿಡುವುದಿಲ್ಲ,ಆದರೆ 20 ಶಾಸಕರು ಕಾಂಗ್ರೆಸ್ ಬಿಡಲಿದ್ದಾರೆ- ಯಡಿಯೂರಪ್ಪ

ಮೇ 23 ರ ನಂತರ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಬಿಜೆಪಿಯ ಯಾವ ಶಾಸಕನು ಕೂಡ ಪಕ್ಷ ಬಿಡುವುದಿಲ್ಲ ಆದರೆ ಫಲಿತಾಂಶದ ನಂತರ 20ಕ್ಕೂ ಅಧಿಕ ಶಾಸಕರು ಕಾಂಗ್ರೆಸ್ ಪಕ್ಷ ತೊರೆಯಲಿದ್ದಾರೆ ಎಂದು ಉತ್ತರಿಸಿದರು.

Last Updated : May 14, 2019, 03:54 PM IST
ಬಿಜೆಪಿ ಯಾವ ಶಾಸಕನೂ ಪಕ್ಷ ಬಿಡುವುದಿಲ್ಲ,ಆದರೆ 20 ಶಾಸಕರು ಕಾಂಗ್ರೆಸ್ ಬಿಡಲಿದ್ದಾರೆ- ಯಡಿಯೂರಪ್ಪ title=
photo:ANI

ಬೆಂಗಳೂರು: ಮೇ 23 ರ ನಂತರ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಬಿಜೆಪಿಯ ಯಾವ ಶಾಸಕನು ಕೂಡ ಪಕ್ಷ ಬಿಡುವುದಿಲ್ಲ ಆದರೆ ಫಲಿತಾಂಶದ ನಂತರ 20ಕ್ಕೂ ಅಧಿಕ ಶಾಸಕರು ಕಾಂಗ್ರೆಸ್ ಪಕ್ಷ ತೊರೆಯಲಿದ್ದಾರೆ ಎಂದು ಉತ್ತರಿಸಿದರು.

ಕಲಬುರ್ಗಿಯಲ್ಲಿ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಯಡಿಯೂರಪ್ಪ" ಒಬ್ಬನೇ ಒಬ್ಬ ಬಿಜೆಪಿ ಶಾಸಕನೂ ಸಹಿತ ಬಿಜೆಪಿಯನ್ನು ಬಿಡುತ್ತಿಲ್ಲ. ಆದರೆ ಮೇ 23 ರ ನಂತರ ಕುಮಾರಸ್ವಾಮಿಯವರೊಂದಿಗೆ ಅಸಮಾಧಾನ ಹೊಂದಿರುವ ೨೦ ಕ್ಕೂ ಅಧಿಕ ಶಾಸಕರು ಕಾಂಗ್ರೆಸ್ ಪಕ್ಷದೊಂದಿಗೆ ಮುಂದುವರೆಯುವುದಿಲ್ಲವೆಂದು ಯಡಿಯೂರಪ್ಪ ತಿಳಿಸಿದರು.

ಇದಕ್ಕೂ ಮೊದಲು ಕಾಂಗ್ರೆಸ್ ನ ಕರ್ನಾಟಕದ ಉಸ್ತುವಾರಿ ಕೆ.ಸಿ ವೇಣುಗೋಪಾಲ್ " ನಾವು ಬಿಜೆಪಿಯ ಯಾವುದೇ ಶಾಸಕರನ್ನು ಸೆಳೆಯುತ್ತಿಲ್ಲ. ಅವರಾಗಿಯೇ ಮೇ 23 ರ ನಂತರ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ.ಇದು ಸ್ವಾಭಾವಿಕವಾಗಿಯೇ ನಡೆಯುತ್ತದೆ. ಈಗಾಗಲೇ ಕರ್ನಾಟಕ ಕಳೆದ ಒಂದು ವರ್ಷದಿಂದ ಬಿಜೆಪಿ ಕುದುರೆ ವ್ಯಾಪಾರದ ಮನಸ್ಥಿತಿಯನ್ನು ನೋಡಿದೆ ಎಂದು ಹೇಳಿದ್ದರು.

"ನಾವು ಸರ್ಕಾರವನ್ನು ರಚಿಸಿದ್ದೇವೆ .ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿದ್ದೇವೆ ಮುಂದೆಯೂ ನಾವು ನಡೆಸುತ್ತೇವೆ" ಎಂದು ವೇಣುಗೋಪಾಲ್ ಹೇಳಿದ್ದರು

Trending News