Shivamogga Assembly Election Result 2023: ಶಿವಮೊಗ್ಗದ ಭದ್ರಾವತಿಯಲ್ಲಿ ಕಾಂಗ್ರೆಸ್-ಗ್ರಾಮಾಂತರದಲ್ಲಿ ಜೆಡಿಎಸ್ ಮುನ್ನಡೆ!

Shivamogga Karnataka Election Result 2023: ಶಿವಮೊಗ್ಗ ಜಿಲ್ಲೆಯಲ್ಲಿ 7 ಮತ ಕ್ಷೇತ್ರಗಳಾದ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ ಮತ್ತು ಸಾಗರದ ಚುನಾವಣಾ ಫಲಿತಾಂಶ, ಗೆಲುವು ಮತ್ತು ಸೋಲುಂಡ ಅಭ್ಯರ್ಥಿಗಳ ಬಗ್ಗೆ ಸಂಪೂರ್ಣ ವರದಿಯಲ್ಲಿ ಜೀ ಕನ್ನಡ ನ್ಯೂಸ್ ನೀಡುತ್ತದೆ.

Written by - Bhavishya Shetty | Last Updated : May 13, 2023, 02:10 PM IST
    • ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ಭಾರೀ ರಂಗು ಪಡೆಯಲಿದೆ
    • ಭದ್ರಾವತಿಯ ರಾಜಕೀಯ ಬಿಟ್ಟರೆ ಮಿಕ್ಕೆಲ್ಲಾ ಕಡೆ ಒಂದೇ ಲೆಕ್ಕಾಚಾರವಿದೆ.
    • ಈ ಬಾರಿ ಜನತೆ ಯಾವ ಪಕ್ಷಕ್ಕೆ ಪಾರುಪಥ್ಯ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ
Shivamogga Assembly Election Result 2023: ಶಿವಮೊಗ್ಗದ ಭದ್ರಾವತಿಯಲ್ಲಿ ಕಾಂಗ್ರೆಸ್-ಗ್ರಾಮಾಂತರದಲ್ಲಿ ಜೆಡಿಎಸ್ ಮುನ್ನಡೆ!  title=
Shivamogga-Karnataka Election Result

Shivamogga Vidhan Sabha Chunav Result 2023: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ಭಾರೀ ರಂಗು ಪಡೆಯಲಿದೆ. ಇದಕ್ಕೆ ಒಂದು ಕಾರಣ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ. ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ ಮತ್ತು ಸಾಗರ ವಿಧಾನಸಭಾ ಕ್ಷೇತ್ರಗಳಿವೆ. ಭದ್ರಾವತಿಯ ರಾಜಕೀಯ ಬಿಟ್ಟರೆ ಮಿಕ್ಕೆಲ್ಲಾ ಕಡೆ ಒಂದೇ ಲೆಕ್ಕಾಚಾರವಿದೆ. ಮಲೆನಾಡಿನ ಭದ್ರಾವತಿ ಕ್ಷೇತ್ರದಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಬಿ. ವೈ ರಾಘವೇಂದ್ರ ಅವರಂತಹ ನಾಯಕರು ಇದ್ದರೂ ಸಹ ಬಿಜೆಪಿ ಬಾವುಟ ಹಾರಿಸಲು ಸಾಧ್ಯವಾಗುತ್ತಿಲ್ಲ. ಇವೆಲ್ಲಾ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ಬಾರಿ ಜನತೆ ಯಾವ ಪಕ್ಷಕ್ಕೆ ಪಾರುಪಥ್ಯ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ. ಶಿವಮೊಗ್ಗ ಕ್ಷೇತ್ರದ ಪಿನ್ ಟು ಪಿನ್ ಅಪ್ಡೇಟ್ಸ್ ಇಲ್ಲಿದೆ.

Shivamogga Karnataka Assembly Election Result 2023: 

ಶಿವಮೊಗ್ಗ ನಗರ ಕ್ಷೇತ್ರ (Shivamogga Assembly Election Result 2023): ಶಿವಮೊಗ್ಗ ನಗರ ಕ್ಷೇತ್ರ (Shivamogga Assembly Election Result 2023) :ಶಿವಮೊಗ್ಗದಲ್ಲಿ ಬಿಜೆಪಿಯ ಚೆನ್ನಬಸಪ್ಪ ಮುನ್ನಡೆ ಸಾಧಿಸಿದ್ದಾರೆ.

ಶಿವಮೊಗ್ಗ ನಗರ 10ನೇ ಸುತ್ತು ಮುಕ್ತಾಯ

ಪಕ್ಷ : ಬಿಜೆಪಿ
ಅಭ್ಯರ್ಥಿ : ಚನ್ನಬಸಪ್ಪ
ಮತಗಳು : 49444

ಪಕ್ಷ : ಕಾಂಗ್ರೆಸ್ 
ಅಭ್ಯರ್ಥಿ : ಹೆಚ್.ಸಿ.ಯೋಗೀಶ್
ಮತಗಳು : 28793

20651 ಬಿಜೆಪಿ ಅಭ್ಯರ್ಥಿ ಮುನ್ನಡೆ

2018ರ ಫಲಿತಾಂಶ :

  • ಬಿಜೆಪಿಯ ಕೆ ಎಸ್ ಈಶ್ವರಪ್ಪ ಪಡೆದ ಮತಗಳು 1,04,027
  • ಕಾಂಗ್ರೆಸ್’ನ ಕೆ ಬಿ ಪ್ರಸನ್ನ ಕುಮಾರ್ ಪಡೆದ ಮತಗಳು 57,920
  • ಜೆಡಿಎಸ್’ ಎಚ್ ಎಸ್ ನಿರಂಜನ ಪಡೆದ ಮತಗಳು 5796

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

  • ಕಾಂಗ್ರೆಸ್ – ಹೆಚ್ ಸಿ ಯೋಗೇಶ್,
  • ಬಿಜೆಪಿ - ಚನ್ನಬಸಪ್ಪ
  • ಆಮ್ ಆದ್ಮಿ – ನೇತ್ರಾವತಿ ಟಿ
  • ಜೆಡಿಎಸ್ –ಆಯನೂರು ಮಂಜುನಾಥ್
  • ಅಖಿಲ ಭಾರತ ಹಿಂದೂ ಮಹಾಸಭಾ - ಧರ್ಮೇಂದ್ರ,

===================================

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ (Shivamogga Rural Assembly Election Result 2023): 

ಶಿವಮೊಗ್ಗ: 

ಶಿವಮೊಗ್ಗ ಗ್ರಾಮಾಂತರ  ವಿದಾನಸಭಾ ಕ್ಷೇತ್ರದ 14ನೇ ಸುತ್ತು ಮುಕ್ತಾಯ

ಪಕ್ಷ : ಬಿಜೆಪಿ
ಅಭ್ಯರ್ಥಿ : ಕೆ.ಬಿ.ಅಶೋಕ್ ನಾಯ್ಕ್
ಮತಗಳು :55539

ಪಕ್ಷ : ಜೆಡಿಎಸ್
ಅಭ್ಯರ್ಥಿ : ಶಾರದಾ ಪೂರ್ಯಾನಾಯ್ಕ್
ಮತಗಳು :  69129

ಜೆಡಿಎಸ್ ಅಭ್ಯರ್ಥಿ 13590 ಮತಗಳ ಮುನ್ನಡೆ

=======================================

ಭದ್ರಾವತಿ ವಿಧಾನಸಭಾ ಕ್ಷೇತ್ರ (Bhadravati Assembly Election Result 2023) :

ಶಿವಮೊಗ್ಗ :

ಭದ್ರಾವತಿ ವಿಧಾನಸಭಾ ಕ್ಷೇತ್ರ 15 ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಪಕ್ಷ : ಕಾಂಗ್ರೆಸ್
ಅಭ್ಯರ್ಥಿ : ಬಿ.ಕೆ.ಸಂಗಮೇಶ್ವರ
ಮತಗಳು :55793

ಪಕ್ಷ : ಜೆಡಿಎಸ್
ಅಭ್ಯರ್ಥಿ : ಶಾರದಾ ಅಪ್ಪಾಜಿ
ಮತಗಳು : 50524

ಕಾಂಗ್ರೆಸ್ ಅಭ್ಯರ್ಥಿ ಸಂಗಮೇಶ್ವರ 5269 ಮತಗಳ ಮುನ್ನಡೆ

================

ಸೊರಬ ವಿಧಾನಸಭಾ ಕ್ಷೇತ್ರ (Sorab Assembly Election Result 2023) :

ಶಿವಮೊಗ್ಗ: 

ಸೊರಬ 15ನೇ ಸುತ್ತು ಮುಕ್ತಾಯ:

ಪಕ್ಷ : ಬಿಜೆಪಿ
ಅಭ್ಯರ್ಥಿ : ಕುಮಾರ್ ಬಂಗಾರಪ್ಪ
ಮತಗಳು : 46641

ಪಕ್ಷ : ಕಾಂಗ್ರೆಸ್
ಅಭ್ಯರ್ಥಿ : ಮಧು ಬಂಗಾರಪ್ಪ
ಮತಗಳು : 86062

ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ 39421 ಮತಗಳ ಮುನ್ನಡೆ.

 

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

  • ಕಾಂಗ್ರೆಸ್ – ಎಸ್ ಮಧು ಬಂಗಾರಪ್ಪ,
  • ಬಿಜೆಪಿ – ಕುಮಾರ್ ಬಂಗಾರಪ್ಪ.
  • ಆದ್ಮಿ ಪಕ್ಷ - ಚಂದ್ರಶೇಖರ್
  • ಜೆಡಿಎಸ್ – ಬಾಸೂರು ಚಂದ್ರಶೇಖರ್

=======

ಶಿಕಾರಿಪುರ ವಿಧಾನಸಭಾ ಕ್ಷೇತ್ರ (Shikaripur Assembly Election Result 2023):

ಶಿಕಾರಿಪುರ; 11ನೆ ಸುತ್ತು
45449 ಪಕ್ಷೇತರ
53278
ಬಿಜೆಪಿ

2018ರ ಫಲಿತಾಂಶ :

  • ಬಿಜೆಪಿಯ ಬಿಎಸ್ ಯಡಿಯೂರಪ್ಪ ಪಡೆದ ಮತಗಳು 86,983
  • ಕಾಂಗ್ರೆಸ್ ನ ಜಿಬಿ ಮಾಲತೇಶ್ ಪಡೆದ ಮತಗಳು 70596
  • ಜೆಡಿಎಸ್ ನ ಬಳಿಗಾರ್ ಪಡೆದ ಮತಗಳು 13,191

ಇದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪ್ರಬಲ ಕ್ಷೇತ್ರ. ಶಿಕಾರಿಪುರದಲ್ಲಿ 8 ಬಾರಿ ಶಾಸಕ ಸ್ಥಾನವನ್ನು ಬಿಎಸ್ವೈ ಅಲಂಕರಿಸಿದ್ದಾರೆ. ಈ ಬಾರಿ ಬಿವೈ ವಿಜಯೇಂದ್ರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಹಿನ್ನಡೆ ಸಾಧಿಸಿದ್ದಾರೆ.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

  • ಕಾಂಗ್ರೆಸ್ – ಜಿಬಿ ಮಾಲತೇಶ್,
  • ಬಿಜೆಪಿ – ಚಂದ್ರಕಾಂತ್ ರೇವಣ್ಣಕರ್,

=========

ತೀರ್ಥಹಳ್ಳಿ ವಿಧಾನಸಭಾ ಚುನಾವಣಾ ಕ್ಷೇತ್ರ (Thirthahalli Assembly Election Result 2023):

2018ರ ಫಲಿತಾಂಶ :

  • ಬಿಜೆಪಿಯ ಆರಗ ಜ್ಞಾನೇಂದ್ರ ಪಡೆದ ಮತಗಳು 67,527
  • ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ್ ಪಡೆದ ಮತಗಳು 45,572
  • ಜೆಡಿಎಸ್’ನ ಮಂಜುನಾಥ್ ಪಡೆದ ಮತಗಳು 40,127

ಚುನಾವಣಾ ಸಮರಕ್ಕೆ ಸಜ್ಜಾಗಿರುವ ತೀರ್ಥಹಳ್ಳಿ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ ಅವರು ಗೆಲುವು ಸಾಧಿಸಿದ್ದರು. ಇನ್ನು ಈ ಬಾರಿಯೂ ಕೂಡ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ್ ಕಣಕ್ಕಿಳಿದಿದ್ದಾರೆ. ಇದು ಸತತ ಆರಬೇ ಬಾರಿ ಮುಖಾಮುಖಿಯಾಗುತ್ತಿರುವುದು. ಮತ್ತೊಂದೆಡೆ ಸಾರ್ವಜನಿಕ ಜೀವನದಲ್ಲಿ ಸಿದ್ಧಾಂತ ರಾಜಕಾರಣಕ್ಕೆ ಒಗ್ಗಿಕೊಂಡಿದ್ದ ಕಿಮ್ಮನೆ ರತ್ನಾಕರ್‌, ಇದೇ ನನ್ನ ಕೊನೆಯ ಚುನಾವಣೆ ಸ್ಪರ್ಧೆ ಎಂದು ಘೋಷಿಸಿ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಮತದಾರ ಯಾವ ಕಡೆ ವಾಲಲಿದ್ದಾನೆ ಎಂದು ಕಾದುನೋಡಬೇಕಿದೆ.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

  • ಕಾಂಗ್ರೆಸ್ - ಕಿಮ್ಮನೆ ರತ್ನಾಕರ್,
  • ಬಿಜೆಪಿ – ಆರಗ ಜ್ಞಾನೇಂದ್ರ,
  • ಜೆಡಿಎಸ್ – ರಾಜಾ ರಾಮ್,
  • ಆ ದ್ಮಿ ಪಕ್ಷ - ಶಿವಕುಮಾರ್,

========

ಸಾಗರ ವಿಧಾನಸಭಾ ಕ್ಷೇತ್ರ (Sagar Assembly Election Result 2023):

2018ರ ಫಲಿತಾಂಶ :

  • ಬಿಜೆಪಿಯ ಹರತಾಳು ಹಾಲಪ್ಪ ಪಡೆದ ಮತಗಳು 78,475
  • ಕಾಂಗ್ರೆಸ್’ನ ಕಾಗೋಡು ತಿಮ್ಮಪ್ಪ ಪಡೆದ ಮತಗಳು 70436
  • ಜೆಡಿಎಸ್’ನ ಗಿರೀಶ್ ಗೌಡ ಪಡೆದ ಮತಗಳು 2,100

ಶಿವಮೊಗ್ಗ: 
ಸಾಗರ 10ನೇ ಸುತ್ತಿನ ಮತ ಎಣಿಕೆ ಮುಕ್ತಾಯ: ಕಾಂಗ್ರೆಸ್ 8852 ಮತಗಳಿಂದ ಮುನ್ನಡೆ

ಪಕ್ಷ : ಬಿಜೆಪಿ
ಅಭ್ಯರ್ಥಿ : ಹರತಾಳು ಹಾಲಪ್ಪ
ಮತಗಳು : 

ಪಕ್ಷ : ಕಾಂಗ್ರೆಸ್ 
ಅಭ್ಯರ್ಥಿ : ಗೋಪಾಲಕೃಷ್ಣ ಬೇಳೂರು
ಮತಗಳು : 

ಕಾಂಗ್ರೆಸ್ 8852 ಮತಗಳಿಂದ ಮುನ್ನಡೆ

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

  • ಬಿಜೆಪಿ- ಹರತಾಳು ಎಚ್ ಹಾಲಪ್ಪ
  • ಕಾಂಗ್ರೆಸ್- ಗೋಪಾಲ ಕೃಷ್ಣ ಬೇಳೂರು
  • ಆಮ್ ಆದ್ಮಿ- ಕೆ ದಿವಾಕರ

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News