Mandya Assembly Election Result 2023: ಮಂಡ್ಯ ಜಿಲ್ಲೆಯಲ್ಲಿ 6 ಸ್ಥಾನ ಕಳೆದುಕೊಂಡ ಜೆಡಿಎಸ್

Mandya assembly election result 2023: 2018ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನವನ್ನು ಗೆದ್ದು ಬೀಗಿದ್ದ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಶಕ್ತವಾಗಿದ್ದರೆ, 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಮತ ಲಭ್ಯವಾಗಿದೆ. ಮೇಲುಕೋಟೆಯಿಂದ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದ  ದರ್ಶನ್ ಪುಟ್ಟಣ್ಣಯ್ಯ ಕೂಡ ಗೆಲುವು ಸಾಧಿಸಿದ್ದಾರೆ. 

Written by - Yashaswini V | Last Updated : May 13, 2023, 06:05 PM IST
  • ಮಂಡ್ಯ ಕ್ಷೇತ್ರದಲ್ಲೂ ಕಮಾಲ್ ಮಾಡಿದ ಕಾಂಗ್ರೆಸ್
  • ಕೊನೆಯ ಸುತ್ತಿನಲ್ಲಿ ಜಯಭೇರಿ ಬಾರಿಸಿದ ಕೈ ಅಭ್ಯರ್ಥಿ‌...
  • ಜೆಡಿಎಸ್ ಅಭ್ಯರ್ಥಿ ರಾಮಚಂದ್ರು ವಿರುದ್ದ ಗೆಲುವು.....
  • ಜಿಲ್ಲೆಯಲ್ಲಿ 5+1= 6 ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷ...
  • ಕೆ.ಆರ್.ಪೇಟೆಯಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿ ಗೆಲುವು...
Mandya Assembly Election Result 2023: ಮಂಡ್ಯ ಜಿಲ್ಲೆಯಲ್ಲಿ 6 ಸ್ಥಾನ ಕಳೆದುಕೊಂಡ ಜೆಡಿಎಸ್  title=
Mandya District Assembly Election Result 2023

Mandya Vidhansabha Chunavane Result 2023: ಇಡೀ ರಾಜ್ಯದಲ್ಲಿ ಮಂಡ್ಯದ ಹೆಸರು ಕೇಳಿದರೆ ಒಂದು ರೀತಿಯ ರೋಮಾಂಚನ. ಮೈ ಶುಗರ್ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಹಾಗೂ ಇಲ್ಲಿನ ಜನ ಹೆಚ್ಚು ಕಬ್ಬು ಬೆಳೆಯುವ ಕಾರಣಕ್ಕಾಗಿ ಇದು ಸಕ್ಕರೆ ನಾಡು ಎಂದೇ ಖ್ಯಾತಿ ಪಡೆದಿದೆ. ಇನ್ನೂ ರಾಜಕೀಯದ ವಿಷಯಕ್ಕೆ ಬಂದರೆ ಮಂಡ್ಯ ಜಿಲ್ಲೆಯ ರಾಜಕೀಯ ಚಿತ್ರಣವೇ ರೋಚಕ, ರಣರೋಚಕ. 2018ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನವನ್ನು ಗೆದ್ದು ಬೀಗಿದ್ದ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಶಕ್ತವಾಗಿದ್ದರೆ, 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಮತ ಲಭ್ಯವಾಗಿದೆ. ಮೇಲುಕೋಟೆಯಿಂದ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದ  ದರ್ಶನ್ ಪುಟ್ಟಣ್ಣಯ್ಯ ಕೂಡ ಗೆಲುವು ಸಾಧಿಸಿದ್ದಾರೆ. ಆದರೆ, ಆಪರೇಷನ್ ಕಮಲದ ಮೂಲಕ ಮಂಡ್ಯದಲ್ಲಿ ಒಂದು ಸ್ಥಾನ ಗಿಟ್ಟಿಸಿಕೊಂಡಿದ್ದ ಬಿಜೆಪಿಯ ಕಮಲ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಮುದುಡಿದೆ. 

ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದವರ್ಯಾರು ಎಂದು ನೋಡುವುದಾದರೆ...

  • ಮಂಡ್ಯ ವಿಧಾನಸಭಾ ಕ್ಷೇತ್ರ- ಗಣಿಗ ರವಿಕುಮಾರ್ (ಕಾಂಗ್ರೆಸ್) 
  • ಮದ್ದೂರು – ಕಾಂಗ್ರೆಸ್‌ನ ಕದಲೂರು ಉದಯ್‌ ಗೆಲುವು
  • ಮಳವಳ್ಳಿ: ಪ.ಜಾ ಮೀಸಲು ಕ್ಷೇತ್ರ – ಕಾಂಗ್ರೆಸ್ ಪಿ.ಎಂ ನರೇಂದ್ರಸ್ವಾಮಿ ಗೆಲುವು
  • ಶ್ರೀರಂಗಪಟ್ಟಣ – ಕಾಂಗ್ರೆಸ್‌ನ ರಮೇಶ್‌ಬಾಬು ಬಂಡಿಸಿದ್ಧೇಗೌಡ ಗೆಲುವು
  • ಮೇಲುಕೋಟೆ – ಸರ್ವೋದಯ ಕರ್ನಾಟಕದ ದರ್ಶನ್ ಪುಟ್ಟಣ್ಣಯ್ಯ ಗೆಲುವು
  • ನಾಗಮಂಗಲ – ಕಾಂಗ್ರೆಸ್‌ನ ಚಲುವರಾಯಸ್ವಾಮಿ ಗೆಲುವು
  • ಕೆ.ಆರ್ ಪೇಟೆ – ಜೆಡಿಎಸ್‌ನ ಹೆಚ್.ಟಿ ಮಂಜು ಗೆಲುವು

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಕಮಾಲ್ ಮಾಡಿದ್ದು, ಕೈ ಅಭ್ಯರ್ಥಿ ರವಿಕುಮಾರ್ ಗೌಡ ಕೊನೆಯ ಸುತ್ತಿನಲ್ಲಿ ರೋಚಕ ಗೆಲುವು ಸಾಧಿಸಿದ್ದಾರೆ.  ಮಂಡ್ಯ ಕ್ಷೇತ್ರದಲ್ಲಿ ರವಿಕುಮಾರ್ ಗೌಡ ಜೆಡಿಎಸ್ ಅಭ್ಯರ್ಥಿ ರಾಮಚಂದ್ರು ವಿರುದ್ದ  1849 ಸಾವಿರ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.  

ಮಂಡ್ಯದಲ್ಲಿ ಬಿಜೆಪಿಗೂ ಭಾರಿ ಮುಖಭಂಗ!
ಇನ್ನೂ ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಬಿಜೆಪಿ ಯಾವುದೇ ಕ್ಷೇತ್ರದಲ್ಲಿ ಹೋರಾಟವನ್ನೂ ಕೊಟ್ಟಿಲ್ಲ. ಈ ಮೂಲಕ ಮಂಡ್ಯದ ನೆಲದಲ್ಲಿ ಬಿಜೆಪಿ ಭಾರೀ ಮುಖಭಂಗವನ್ನು ಅನುಭವಿಸಿದೆ. 

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಸುಮಾರು 10 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. 

ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಅರಳದ ಕಮಲ.. ಕೆ.ಆರ್.ಪೇಟೆಯಲ್ಲಿ ಸಚಿವ ನಾರಾಯಣಗೌಡಗೆ ಮುಖಭಂಗ... ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ದ ನಾರಾಯಣಗೌಡಗೆ ಸೋಲುಣಿಸಿದ್ದಾರೆ. 

ಕಳೆದ ಬಾರಿ 2019 ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಸಚಿವರಾಗಿದ್ದ ನಾರಾಯಣಗೌಡ, ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. 

 

2023ರ ರಾಜ್ಯ ವಿಧಾನಸಭಾ ಚುನಾವಣೆಗಾಗಿ 10 ಮೇ 2023ರಂದು ನಡೆದಿದ್ದ ಮತದಾನದ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮಂಡ್ಯದಲ್ಲಿ ಈಗಾಗಲೇ  ಸ್ಟ್ರಾಂಗ್ ರೂಂ ಓಪನ್‌ ಆಗಿದೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಅಧಿಕಾರಿಗಳು ಸ್ಟ್ರಾಂಗ್ ರೂಂ ಓಪನ್ ಮಾಡಿದ್ದಾರೆ. ಮೊದಲಿಗೆ ಅಂಚೆ ಮತಗಳ ಎಣಿಕೆಗೆ ಸಿಬ್ಬಂದಿಗಳು ಸಿದ್ಧತೆ ನಡೆಸಿದ್ದಾರೆ. 

ಜೆ‌ಡಿ‌ಎಸ್ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯ ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿವೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳೂ ಸ್ಥಾನವನ್ನು ಬೆದ್ದು ಬೀಗಿದ್ದ ದಳಪತಿಗಳು ಈ ಬಾರಿ ಮತ್ತೆ ಜಿಲ್ಲೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಕಾಂಗ್ರೆಸ್‌ಗೆ ಅಸ್ತಿತ್ವ ಪ್ರಶ್ನೆಯಾದರೆ, ಆಪರೇಷನ್ ಕಮಲದ ಮೂಲಕ ಮಂಡ್ಯದಲ್ಲಿ ಒಂದು ಸ್ಥಾನ ಗಿಟ್ಟಿಸಿಕೊಂಡಿದ್ದ ಬಿಜೆಪಿಗೆ ಮತ್ತೆ ಅಲ್ಲಿ ಗೆಲ್ಲುವುದು ಸವಾಲೇ ಸರಿ. 

ಮಳವಳ್ಳಿ ವಿಧಾನಸಭಾ ಕ್ಷೇತ್ರ (Malavalli Assembly Constituency): 
2018ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ 1,03,038 ಮತಗಳನ್ನು ಪಡೆದು ಜಯ ಸಾಧಿಸಿದ್ದರು. 

ಮಳವಳ್ಳಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Malavalli Assembly Constituency Election Result 2023):
ಈ ಬಾರಿಯ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸುತ್ತಿರುವ ಅಭ್ಯರ್ಥಿಗಳು 
* ಮುನಿರಾಜು- ಬಿ‌ಜೆ‌ಪಿ 
* ಡಾ.ಕೆ.ಅನ್ನದಾನಿ- ಜೆ‌ಡಿ‌ಎಸ್ 
* ನರೇಂದ್ರ ಸ್ವಾಮಿ- ಕಾಂಗ್ರೆಸ್ ಗೆಲುವು

------------------------------------------
ಮದ್ದೂರು ವಿಧಾನಸಭಾ ಕ್ಷೇತ್ರ  (Maddur Assembly Constituency): 
2018ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ 109239 ಮತಗಳನ್ನು ಗಳಿಸಿ  ಗೆಲುವಿನ ನಗೆ ಬೀರಿದ್ದರು. 

ಮದ್ದೂರು ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Maddur Assembly Constituency Election Result 2023):- 
2023ರ ಚುನಾವಣೆಯಲ್ಲಿ ಮದ್ಧೂರು ಕ್ಷೇತ್ರದಿಂದ ಕಣದಲ್ಲಿರುವ ಅಭ್ಯರ್ಥಿಗಳೆಂದರೆ...
>> ಎಸ್. ಪಿ. ಸ್ವಾಮಿ- ಬಿಜೆಪಿ
>> ಡಿಸಿ ತಮ್ಮಣ್ಣ - ಜೆಡಿಎಸ್ 
>> ಉದಯ ಕುಮಾರ್- ಕಾಂಗ್ರೆಸ್ ಗೆಲುವು
------------------------------------------
ಮೇಲುಕೋಟೆ ವಿಧಾನಸಭಾ ಕ್ಷೇತ್ರ (Melukote Assembly Constituency): 
2018ರ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು 96003 ಮತಗಳನ್ನು ಗಳಿಸಿ ಜಯ ಸಾಧಿಸಿದ್ದರು. 

ಮೇಲುಕೋಟೆ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Melukote Assembly Constituency Election Result 2023):-
ಈ ಬಾರಿಯ ಚುನಾವಣೆಯಲ್ಲಿ ಈ ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. 
* ದರ್ಶನ್ ಪುಟ್ಟಣ್ಣಯ್ಯ - ಎಸ್‌ಆರ್‌ಪಿ (90387) - ಗೆಲುವು
* ಸಿ.ಎಸ್ ಪುಟ್ಟರಾಜು- ಜೆ‌ಡಿ‌ಎಸ್ (79434) 
* ಡಾ.ಇಂದ್ರೇಶ್- ಬಿ‌ಜೆ‌ಪಿ (6378)  

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ 10953 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗಮನಾರ್ಹವಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡಿತ್ತು. 
 
------------------------------------------
ಮಂಡ್ಯ ವಿಧಾನಸಭಾ ಕ್ಷೇತ್ರ (Mandya Assembly Constituency):- 
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ 69421 ಮತಗಳನ್ನು ಪಡೆದು ವಿಜಯ ಸಾಧಿಸಿದ್ದರು. 

ಮಂಡ್ಯ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Mandya Assembly Constituency Election Result 2023):- 
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಲಿಗಳು:

>> ಗಣಿಗ ರವಿಕುಮಾರ್‌ - ಕಾಂಗ್ರೆಸ್ (60845) ಗೆಲುವು
>> ರಾಮಚಂದ್ರ - ಜೆ‌ಡಿ‌ಎಸ್ (58996) 
>> ಅಶೋಕ್‌ ಜಯರಾಂ - ಬಿ‌ಜೆ‌ಪಿ (30240)
>> ವಿಜಯಾನಂದ (ಜೆ‌ಡಿ‌ಎಸ್ ಬಂಡಾಯ ಅಭ್ಯರ್ಥಿ) - ಪಕ್ಷೇತರ ಅಭ್ಯರ್ಥಿ 

ಮಂಡ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ 1849 ಮತಗಳ ಅಂತರದಲ್ಲಿ ಜೆ‌ಡಿ‌ಎಸ್ ಅಭ್ಯರ್ಥಿ ರಾಮಚಂದ್ರ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. 

------------------------------------------
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ  (Srirangapatna Assembly Constituency):- 
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ರವೀಂದ್ರ ಶ್ರೀಕಂಠಯ್ಯ 101307 ಮತಗಳಿಂದ ಜಯಬೇರಿ ಬಾರಿಸಿದ್ದರು. 

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Srirangapatna Assembly Constituency Election Result 2023):- 
ಈ ಬಾರಿಯ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಕಣದಲ್ಲಿರುವ ಅಭ್ಯರ್ಥಿಗಳು 
* ಸಚ್ಚಿದಾನಂದ- ಬಿಜೆಪಿ 
* ರವೀಂದ್ರ ಶ್ರೀಕಂಠಯ್ಯ- ಜೆ‌ಡಿ‌ಎಸ್
* ರಮೇಶ್ ಬಾಬು- ಕಾಂಗ್ರೆಸ್ ಗೆಲುವು
* ತಗ್ಗಹಳ್ಳಿ ವೆಂಕಟೇಶ್  (ಜೆ‌ಡಿ‌ಎಸ್ ಬಂಡಾಯ)- ಪಕ್ಷೇತರ ಅಭ್ಯರ್ಥಿ 
* ಎಚ್.ಪಿ.ಚಂದ್ರಶೇಖರ್ (ಕಾಂಗ್ರೆಸ್ ಬಂಡಾಯ)- ಪಕ್ಷೇತರ ಅಭ್ಯರ್ಥಿ
------------------------------------------
ನಾಗಮಂಗಲ ವಿಧಾನಸಭಾ ಕ್ಷೇತ್ರ (Nagamangala Assembly Constituency):- 
2018ರ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುರೇಶ್ ಗೌಡ 112396 ಮತಗಳನ್ನು ಪಡೆದು ಜಯ ಸಾಧಿಸಿದ್ದರು. 

ನಾಗಮಂಗಲ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Nagamangala Assembly Constituency Election Result 2023):- 
ನಾಗಮಂಗಲ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸುತ್ತಿರುವ ಕಲಿಗಳು 
>> ಸಿ‌.ಆರ್.ಚಲುವರಾಯಸ್ವಾಮಿ-  ಕಾಂಗ್ರೆಸ್ (89801) ಗೆಲುವು
>> ಸುರೇಶ್ ಗೌಡ- ಜೆಡಿಎಸ್ (85688)
>> ಸುಧಾ ಶಿವರಾಮೇಗೌಡ- ಬಿ‌ಜೆ‌ಪಿ (7683)
>> ಫೈಟರ್ ರವಿ (ಬಿ‌ಜೆ‌ಪಿ ಬಂಡಾಯ)- ಪಕ್ಷೇತರ ಅಭ್ಯರ್ಥಿ 

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಚೆಲುವರಾಯಸ್ವಾಮಿ 4113 ಮತಗಳ ಅಂತರದಲ್ಲಿ  ಗೆಲುವು ದಾಖಲಿಸಿದ್ದಾರೆ. 
------------------------------------------
ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರ  (Krishnarajpet Assembly Constituency):- 
2018ರ ಚುನಾವಣೆಯಲ್ಲಿ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದ್ದ ಡಾ.ನಾರಾಯಣಗೌಡ ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ 2019ರ ಉಪ-ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 
66094 ಮತಗಳನ್ನು ಪಡೆದು ಜಯ ಸಾಧಿಸಿದ್ದರು. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳುವಂತೆ ಮಾಡಿದ್ದರು. 

ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Krishnarajpet Assembly Constituency Election Result 2023):- 
2023ರ ಚುನಾವಣೆಯಲ್ಲಿ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷಿಸುತ್ತಿರುವ ಅಭ್ಯರ್ಥಿಗಳೆಂದರೆ

* ಎಚ್.ಟಿ .ಮಂಜುನಾಥ್- ಜೆಡಿಎಸ್- (79844) ಗೆಲುವು
* ಡಾ.ಕೆ.ಸಿ.ನಾರಾಯಣಗೌಡ- ಬಿ‌ಜೆ‌ಪಿ-  (37793)
* ಬಿ.ಎಲ್.ದೇವರಾಜು- ಕಾಂಗ್ರೆಸ್-  (57939)

ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ ಕಳೆದ ಬಾರಿ 2019 ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಮೊಟ್ಟ ಮೊದಲ ಬಾರಿಗೆ ಮಂಡ್ಯದ ನೆಲದಲ್ಲಿ ಕಮಲ ಅರಳಿಸಿ ಸಚಿವರಾಗಿದ್ದ ನಾರಾಯಣಗೌಡ, 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News