ಕಳೆದ ಬಾರಿಯಂತೆ ಈ ಬಾರಿಯೂ ಕೆ ಆರ್ ಪೇಟೆಯನ್ನು ಗೆದ್ದು ಇತಿಹಾಸ ನಿರ್ಮಿಸುವೆವು- ಬಿ.ವೈ. ವಿಜಯೇಂದ್ರ

Karnataka Assembly Elections 2023: ಬಿ‌ಎಸ್‌ವೈ ಪುತ್ರ ಬಿ.ವೈ. ವಿಜಯೇಂದ್ರ ಅವರು 2019 ರ ಉಪಚುನಾವಣೆಯಲ್ಲಿ ಕೆ ಆರ್ ಪೇಟೆಯನ್ನ ಗೆಲ್ಲಲೇಬೇಕೆಂಬ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಈ ಸಂದರ್ಭದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಕೆ. ಆರ್. ಪೇಟೆಯಲ್ಲೇ ನೆಲೆಸಿ ಚುನಾವಣ ತಂತ್ರ ರೂಪಿಸಿ ಗೆಲುವು ಸಾಧಿಸೊ ಮೂಲಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನ ಗೆಲ್ಲಿಸಿದ ಕೀರ್ತಿ ಪಡೆದುಕೊಂಡಿದ್ದರು.   

Written by - Yashaswini V | Last Updated : Apr 14, 2023, 05:10 PM IST
  • ಇನ್ನು ಕಳೆದ ಹಲವು ದಿನಗಳಿಂದಲೂ ಸಚಿವ ನಾರಾಯಣಗೌಡ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಕ್ಷೇತ್ರಾ ದ್ಯಂತ ಹರಡಿ ಬಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು.
  • ಎಲ್ಲಾ ಗೊಂದಲಗಳ ನಡುವೆ ಕಡೆಗೂ ಬಿಜೆಪಿಯಿಂದಲೇ ಸ್ಪರ್ಧೆ ಮಾಡ್ತಿರುವ ನಾರಾಯಣಗೌಡ ಈಗ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
  • ಇಂದು ವಿಜಯೇಂದ್ರರನ್ನ ಕೆ ಆರ್ ಪೇಟೆಗೆ ಕರೆಸಿ ಲಿಂಗಾಯಿತ ಸಮುದಾಯದವರನ್ನೇ ಒಂದೆಡೆ ಸೇರಿಸಿ ಸಭೆ ಆಯೋಜನೆ ಮಾಡೋ ಮೂಲಕ ಕ್ಷೇತ್ರದಲ್ಲಿರೊ ಲಿಂಗಾಯಿತ ಸಮುದಾಯದ ಮನಗೆಲ್ಲಲು ನಾರಾಯಣಗೌಡ ಮುಂದಾಗಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿಯೂ ಕೆ ಆರ್ ಪೇಟೆಯನ್ನು ಗೆದ್ದು ಇತಿಹಾಸ ನಿರ್ಮಿಸುವೆವು- ಬಿ.ವೈ. ವಿಜಯೇಂದ್ರ  title=

Karnataka Assembly Election: 2019ರಲ್ಲಿ ನಡೆದ ಕೆ ಆರ್ ಪೇಟೆಯ ಉಪ ಚುನಾವಣೆಯ ನೇತೃತ್ವ ವಹಿಸಿಕೊಂಡು ಮಂಡ್ಯ ಜಿಲ್ಲೆಯಲ್ಲೇ ಮೊದಲ ಬಾರಿಗೆ ಬಿಜೆಪಿ ಪಕ್ಷವನ್ನ ಗೆಲ್ಲಿಸಿದ ಖ್ಯಾತಿಗೆ ಪಾತ್ರವಾಗಿದ್ದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮಗ ಬಿ. ವೈ.  ವಿಜಯೇಂದ್ರ  ಇದೀಗ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತ್ತೆ ಕೆ. ಆರ್. ಪೇಟೆ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ. 

ರಾಜ್ಯ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಕೆ ಆರ್ ಪೇಟೆಗೆ ಆಗಮಿಸಿದ ಬಿ. ವೈ. ವಿಜಯೇಂದ್ರೆಗೆ ಪುಷ್ಪಾರ್ಚನೆ ಮಾಡಿ ಭಾರೀ ಗಾತ್ರದ ಸೇಬಿನ ಹಣ್ಣಿನ ಹಾರ ಹಾಕೋ ಮೂಲಕ ಕಾರ್ಯಕರ್ತರು  ಅದ್ದೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಬಿ. ವೈ. ವಿಜಯೇಂದ್ರ ಕಳೆದ ಬಾರಿಯಂತೆ ಈ ಬಾರಿಯೂ ಕೆ ಆರ್ ಪೇಟೆಯನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸೋದಾಗಿ ಪುನರುಚ್ಚರಿಸಿದರು.

ಮಂಡ್ಯ ಜಿಲ್ಲೆ ಅಂದ್ರೆ ಜೆಡಿಎಸ್ ಭದ್ರಕೋಟೆ ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದ ಕಾಲದಲ್ಲಿ ಮಂಡ್ಯದಂತಹ ಜಿಲ್ಲೆಯಲ್ಲೂ ಕಮಲ ಅರಳಿಸಬಹುದು ಎಂಬುದನ್ನೂ ಸಾಧಿಸಿ ತೋರಿಸಿದ್ದು ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ. 
ಬಿ‌ಎಸ್‌ವೈ ಪುತ್ರ ಬಿ.ವೈ. ವಿಜಯೇಂದ್ರ ಅವರು 2019 ರ ಉಪಚುನಾವಣೆಯಲ್ಲಿ ಕೆ ಆರ್ ಪೇಟೆಯನ್ನ ಗೆಲ್ಲಲೇಬೇಕೆಂಬ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಈ ಸಂದರ್ಭದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಕೆ. ಆರ್. ಪೇಟೆಯಲ್ಲೇ ನೆಲೆಸಿ ಚುನಾವಣ ತಂತ್ರ ರೂಪಿಸಿ ಗೆಲುವು ಸಾಧಿಸೊ ಮೂಲಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನ ಗೆಲ್ಲಿಸಿದ ಕೀರ್ತಿ ಪಡೆದುಕೊಂಡಿದ್ದರು. 

ಇದನ್ನೂ ಓದಿ- Karanataka Assembly Election: ಶಿಡ್ಲಘಟ್ಟದ ಸಿಡಿಲ ನಾಯಕ ಸೀಕಲ್ ರಾಮಚಂದ್ರಗೌಡ ಬಿಜೆಪಿಯಿಂದ ಕಣಕ್ಕೆ

ಇದೀಗ 2023ರ ವಿಧಾನಸಭಾ ಚುನಾವಣೆಯಲ್ಲೂ ಕೆ ಆರ್ ಪೇಟೆಗೆ ಎಂಟ್ರಿಕೊಟ್ಟಿರೂವ ಬಿ.ವೈ. ವಿಜಯೇಂದ್ರ ಹಿಂದಿನ ಗೆಲುವನ್ನ ಪುನರಾವರ್ತಿಸುವುದಾಗಿ ಹೇಳಿಕೊಂಡಿದ್ದಾರೆ. ತಾವು ಶಿಕಾರಿಪುರದಲ್ಲಿ ಚುನಾವಣೆಗೆ ನಿಂತಿದ್ದರೂ ಕೆ ಆರ್ ಪೇಟೆಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ವಿಜಯೇಂದ್ರರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದ ಸಚಿವ ನಾರಾಯಣಗೌಡ, ಹಿಂದಿನಂತೆ ಈ ಬಾರಿಯೂ ಕೆ ಆರ್ ಪೇಟೆಯಲ್ಲಿ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಕಳೆದ ಹಲವು ದಿನಗಳಿಂದಲೂ ಸಚಿವ ನಾರಾಯಣಗೌಡ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಕ್ಷೇತ್ರಾ ದ್ಯಂತ ಹರಡಿ ಬಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಎಲ್ಲಾ ಗೊಂದಲಗಳ ನಡುವೆ ಕಡೆಗೂ ಬಿಜೆಪಿಯಿಂದಲೇ ಸ್ಪರ್ಧೆ ಮಾಡ್ತಿರುವ ನಾರಾಯಣಗೌಡ ಈಗ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇಂದು ವಿಜಯೇಂದ್ರರನ್ನ ಕೆ ಆರ್ ಪೇಟೆಗೆ ಕರೆಸಿ ಲಿಂಗಾಯಿತ ಸಮುದಾಯದವರನ್ನೇ ಒಂದೆಡೆ ಸೇರಿಸಿ ಸಭೆ ಆಯೋಜನೆ ಮಾಡೋ ಮೂಲಕ ಕ್ಷೇತ್ರದಲ್ಲಿರೊ ಲಿಂಗಾಯಿತ ಸಮುದಾಯದ ಮನಗೆಲ್ಲಲು ನಾರಾಯಣಗೌಡ ಮುಂದಾಗಿದ್ದಾರೆ. ಸಭೆಯನ್ನ ಉದ್ಘಾಟಿಸಿ ಮಾತನಾಡಿದ ನಾರಾಯಣಗೌಡ  ತಾವು ಈ ಹಿಂದೆ ಇದ್ದ ಪಕ್ಷವನ್ನ ಯಾಕೆ ಬಿಡಬೇಕಾಗಿ ಬಂತು ನಂತ್ರ ಆಗಿನ ಸಿ ಎಂ ಯಡಿಯೂರಪ್ಪ ಅವರು ಹೇಗೆ ನನ್ನ ನಡೆಸಿಕೊಂಡರು ಹಿಂದೆ ನಡೆದ ಉಪ ಚುನಾವಣೆಯಲ್ಲಿ ವಿಜಯೇಂದ್ರ ಅವರು ಕೆ ಆರ್ ಪೇಟೆಯಲ್ಲೇ ಇದ್ದು ತಮಗೆ ಗೆಲುವು ತಂದು ಕೊಟ್ಟಂತೆ ಈ ಬಾರಿಯೂ ತನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು. 

ಇದನ್ನೂ ಓದಿ- ಕೈತಪ್ಪಿದ ಬಿಜೆಪಿ ಟಿಕೆಟ್: ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹೂಡಿ ವಿಜಯ್ ಕುಮಾರ್

ಒಟ್ಟಾರೆ ಚುನಾವಣೆ ಹತ್ತಿರವಾಗುತ್ತಿರುವಂತೆ ಕೆ ಆರ್ ಪೇಟೆ ಕ್ಷೇತ್ರ ಕಾವು ಪಡೆದುಕೊಳ್ಳುತ್ತಿದೆ. ಬರುವ ಸೋಮವಾರದಂದು ನಾರಾಯಣಗೌಡ ಅಪಾರ ಬೆಂಬಲಿಗರ ಜೊತೆಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೇ ಬಿರುಸು ಪಡೆದುಕೊಂಡಿರೊ ಕ್ಷೇತ್ರದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಂತ್ರ ಮತ್ತಷ್ಟು ಬಿರುಸು ಪಡೆದುಕೊಳ್ಳಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News