ನಾನು ಪೂಜೆ-ಪುನಸ್ಕಾರ ಎಲ್ಲಾ ಮಾಡಬೇಕಿದೆ: ಡಿ.ಕೆ.ಶಿವಕುಮಾರ್

Karnataka Elections 2023: ಸದ್ಯ ನನಗೆ ರೆಸ್ಟ್ ಬೇಕಿದೆ, ಆರೋಗ್ಯದಲ್ಲಿ ಏರುಪೇರಾಗಿದೆ. ಹೊಟ್ಟೆಯಲ್ಲಿ ಇಂಪೆಕ್ಷನ್ ಆಗಿದೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ನಾನು ಪೂಜೆ-ಪುನಸ್ಕಾರ ಮಾಡಬೇಕು ಎಂದು ಡಿಕೆಶಿ ಹೇಳಿದ್ದಾರೆ.

Written by - Puttaraj K Alur | Last Updated : May 15, 2023, 07:39 PM IST
  • ನನ್ನತ್ರ ನಂಬರ್ ಇಲ್ಲ. ನಾನು ಪಕ್ಷ ಪೂಜೆ ಮಾಡ್ತೀನಿ ಹೊರತು ವ್ಯಕ್ತಿ ಪೂಜೆಯಲ್ಲ
  • ನನ್ನನ್ನು ನೀವೆಲ್ಲಾ ಬಂಡೆ ಅಂತಾ ಕರೆದಿದ್ದೀರಾ, ಆ ಬಂಡೆನಾ ಹೊಡೆದಾಕಿ, ಬಂಡೆ, ನೇಣಾಕು ಕಂಬ ಮಾಡಿಕೊಳ್ಳಿ
  • ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ನಾನು ಪೂಜೆ-ಪುನಸ್ಕಾರ ಮಾಡಬೇಕೆಂದ ಡಿ.ಕೆ.ಶಿವಕುಮಾರ್
ನಾನು ಪೂಜೆ-ಪುನಸ್ಕಾರ ಎಲ್ಲಾ ಮಾಡಬೇಕಿದೆ: ಡಿ.ಕೆ.ಶಿವಕುಮಾರ್ title=
ನಾನು ಪೂಜೆ ಮಾಡಬೇಕೆಂದ ಡಿಕೆಶಿ

ಬೆಂಗಳೂರು: ಸಿಎಂ ಆಯ್ಕೆ ವಿಚಾರ ಕಗ್ಗಂಟಾಗಿರುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೇಸರದಲ್ಲಿದ್ದಾರೆ. ನನಗೆ ಯಾರ ಬೆಂಬಲವೂ ಬೇಡ, ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಎಂದು ಹೇಳಿದ್ದಾರೆ. ‘ನನ್ನ ಯಾವ ಶಾಸಕರನ್ನೂ ಕರೆದುಕೊಂಡು ಹೋಗಲ್ಲ, ನನಗೆ ಯಾರ ಬೆಂಬಲವು ಬೇಡ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೀನಿ. ನನ್ನನ್ನು ಬಂಡೆ ಎಂದು ಕರೆದಿದ್ದೀರಾ. ಆಕೃತಿಯಾದ್ರೂ ಮಾಡಿ, ವಿಧಾನಸೌಧಕ್ಕೆ ಚಪ್ಪಡಿಯಾದ್ರೂ ಮಾಡಿ, ಮರಳಾದ್ರೂ ಮಾಡಿ ಅಥವಾ ಗರುಡು ಗಂಬವಾದ್ರೂ ಮಾಡಿ. ಒಟ್ನಲ್ಲಿ ವಿಧಾನಸೌಧಕ್ಕೆ ಚಪ್ಪಡಿ ಮಾಡಿ ಅಂತಾ ಹೇಳಿದ್ದೆ ಎಂದು ಹೇಳಿದ್ದಾರೆ.

ನನ್ನತ್ರ ನಂಬರ್ ಇಲ್ಲ. ನಾನು ಪಕ್ಷ ಪೂಜೆ ಮಾಡ್ತೀನಿ ಹೊರತು ವ್ಯಕ್ತಿ ಪೂಜೆಯಲ್ಲ. ಸಿಎಂ ಸ್ಥಾನ ಕೊಡಿ ಇಲ್ಲಾಂದ್ರೆ ಬೇರೆ ಹುದ್ದೆ ಬೇಡವೆಂಬ ವಿಚಾರಕ್ಕೆ ಡಿಕೆಶಿ ಪ್ರತಿಕ್ರಿಯಿಸಿದ್ದು, ‘ಯಾವ ಪ್ರಶ್ನೆಗೂ ಉತ್ತರ ಕೊಡಲ್ಲ. ನನಗೆ ತಾಳ್ಮೆ-ಸಮಯ ಪ್ರಜ್ಞೆ ಹೋರಾಟ ಮನೋಭಾವವಿದೆ. ಪಾಂಡವರ ಸೂತ್ರ ಅನುಸರಿಸ್ತೇವೆ ಅಂತಾ ವಿಧಾನಸಭೆಯಲ್ಲಿ ಹೇಳಿದ್ದೆ. ನನ್ನಲ್ಲಿರುವ ತಂತ್ರಗಳಿಂದ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಇಷ್ಟು ಸಾಕು ನನಗೆ ಎಂದು  ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Karnataka Elections 2023: ಬಿಜೆಪಿ ಸೋಲಿಗೆ ನಳೀನ್, ಸಂತೋಷ್ ಹೊಣೆಗಾರರಲ್ಲ- ವಿಜಯೇಂದ್ರ

‘ನನ್ನನ್ನು ನೀವೆಲ್ಲಾ ಬಂಡೆ ಅಂತಾ ಕರೆದಿದ್ದೀರಾ. ಆ ಬಂಡೆನಾ ಹೊಡೆದಾಕಿ, ಬಂಡೆ, ನೇಣಾಕು ಕಂಬ ಮಾಡಿಕೊಳ್ಳಿ ಅಥವಾ ಏನಾರ ಮಾಡಿಕೊಳ್ಳಿ. ಶಿಲೆ ಆದ್ರು ಮಾಡೊಕೊಳ್ಳಿ, ಗರುಡಗಂಬ ಆದ್ರೂ ಮಾಡಿ, ಇಲ್ಲ ಏನ ಬೇಕಾದ್ರು ಮಾಡಿ. ನನ್ನತ್ರ ಇರೋದು 135 ಸೀಟ್, 3 ತಿಂಗಳಿಂದಲೂ ಹೇಳ್ತಾನೆ ಬಂದಿದ್ದೇನೆ. ಎಲ್ಲಿ ಬೇಕಾದ್ರೂ ನೋಡಿ ನನ್ನ ಲೆಕ್ಕ 136 ಇದೆ. ನಾನು ಯಾರ ಬಳಿಯೂ ಚರ್ಚೆ ಮಾಡುವ ಅವಶ್ಯಕತೆ ಇಲ್ಲ, ಯಾರ ಬಳಿಯೂ ಹೋಗುವ ಅವಶ್ಯಕತೆ ಇಲ್ಲವೆಂದು ಹೇಳಿದ್ದಾರೆ.

ಸದ್ಯ ನನಗೆ ರೆಸ್ಟ್ ಬೇಕಿದೆ, ಆರೋಗ್ಯದಲ್ಲಿ ಏರುಪೇರಾಗಿದೆ. ಹೊಟ್ಟೆಯಲ್ಲಿ ಇಂಪೆಕ್ಷನ್ ಆಗಿದೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ನಾನು ಪೂಜೆ-ಪುನಸ್ಕಾರ ಮಾಡಬೇಕು ಎಂದು ಡಿಕೆಶಿ ಹೇಳಿದ್ದಾರೆ. ಶಾಸಕಾಂಗ ನಾಯಕನಾಗಿ ಡಿಕೆಶಿ ಹೆಸರು ಘೋಷಣೆ ಮಾಡುವಂತೆ ಒತ್ತಡ ಹಿನ್ನೆಲೆ ಅವರು ದಿಢೀರ್ ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು

ಸಿದ್ದರಾಮಯ್ಯ ಹಾಗೂ ಬಣದ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಮತ್ತು ಸೋನಿಯಾ ಗಾಂಧಿ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ. ಹೊಟ್ಟೆ ಉರಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ನೇರ ಸಂದೇಶ ರವಾನಿಸಿದ್ದಾರೆಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News