ಇನ್ನು ಕೇವಲ 20 ದಿನಗಳಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಕೊನೆಯಾಗಲಿದೆ: ಕಾಂಗ್ರೆಸ್

Karnataka Assembly Election 2023: ಸರ್ಕಾರಿ ಹುದ್ದೆಗಳ ಮಾರಾಟದ ಅಕ್ರಮ, 40% ಕಮಿಷನ್ ಲೂಟಿ, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ, ಶಾಸಕರನ್ನು ಖರೀದಿಸುವ ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಮತ್ತು ಭರವಸೆಗಳನ್ನು ಈಡೇರಿಸದ ವಚನ ಭ್ರಷ್ಟತೆ. ಇವೆಲ್ಲವೂ ಬಿಜೆಪಿ ಸರ್ಕಾರದ ಹೈಲೈಟ್ಸ್‌ಗಳು ಎಂದು ಕಾಂಗ್ರೆಸ್ ಕುಟುಕಿದೆ.

Written by - Puttaraj K Alur | Last Updated : Apr 19, 2023, 05:17 PM IST
  • ಸರ್ಕಾರಿ ಹುದ್ದೆಗಳ ಮಾರಾಟ, 40% ಕಮಿಷನ್ ಲೂಟಿ, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ
  • ಶಾಸಕರನ್ನು ಖರೀದಿಸುವ ಪ್ರಜಾಪ್ರಭುತ್ವ ವಿರೋಧಿ ಕೃತ್ಯ & ಭರವಸೆ ಈಡೇರಿಸದ ವಚನ ಭ್ರಷ್ಟತೆ
  • ಇವೆಲ್ಲವೂ ಭ್ರಷ್ಟ ಬಿಜೆಪಿ ಸರ್ಕಾರದ ಹೈಲೈಟ್ಸ್‌ಗಳು ಎಂದು ಟೀಕಿಸಿದ ಕಾಂಗ್ರೆಸ್
ಇನ್ನು ಕೇವಲ 20 ದಿನಗಳಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಕೊನೆಯಾಗಲಿದೆ: ಕಾಂಗ್ರೆಸ್ title=
ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಇನ್ನು ಕೇವಲ 20 ದಿನಗಳಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಕೊನೆಯಾಗಲಿದೆ ಎಂದು ಕಾಂಗ್ರೆಸ್ ಟೀಕಿಸಿದೆ. #End40PercentSarkara ಹ್ಯಾಶ್‍ಟ್ಯಾಗ್ ಬಳಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

‘ಸರ್ಕಾರಿ ಹುದ್ದೆಗಳ ಮಾರಾಟದ ಅಕ್ರಮ, 40% ಕಮಿಷನ್ ಲೂಟಿ, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ, ಶಾಸಕರನ್ನು ಖರೀದಿಸುವ ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಮತ್ತು ಭರವಸೆಗಳನ್ನು ಈಡೇರಿಸದ ವಚನ ಭ್ರಷ್ಟತೆ. ಇವೆಲ್ಲವೂ ಬಿಜೆಪಿ ಸರ್ಕಾರದ ಹೈಲೈಟ್ಸ್‌ಗಳು’ ಎಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: Karnataka Election 2023: ನಾನು ಓಡಿ ಹೋಗುವ ಸಿಎಂ ಅಲ್ಲ ಎಂದ ಬೊಮ್ಮಾಯಿ

ಇನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರ ಕೊಡಗಿನಲ್ಲಿದ್ದ 11 ಕೋಟಿ ರೂ. ಮೌಲ್ಯದ ಆಸ್ತಿ ವಶಪಡಿಸಿಕೊಂಡಿದ್ದಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ‘ಬಿಜೆಪಿಯ ಐಟಿ, ಇಡಿ ಮೋರ್ಚಾಗಳು ಈಗ ತಮ್ಮ ಫಿರಂಗಿಯನ್ನು ಕರ್ನಾಟಕದ ಕಡೆ ತಿರುಗಿಸಿವೆ. ಚುನಾವಣೆ ಸಮಯದಲ್ಲಿ ಇದು ನಿರೀಕ್ಷಿತವೇ! ಕಾರ್ತಿ ಚಿದಂಬರಂ ಅವರ ಪೂರ್ವಜರು ಸಂಪಾದಿಸಿದ ಆಸ್ತಿಯನ್ನು ಸೀಜ್ ಮಾಡಿದಾಕ್ಷಣ ಕಾಂಗ್ರೆಸ್ ಕಟ್ಟಿ ಹಾಕುತ್ತೇವೆ ಎನ್ನುವ ಭ್ರಮೆಯಲ್ಲಿದೆ ಬಿಜೆಪಿ. ಐಟಿ, ಇಡಿಗಳಿಗೆ ಮಾಡಾಳ್ ವಿರೂಪಾಕ್ಷಪ್ಪ ಮನೆ ಅಡ್ರೆಸ್‌ ತಿಳಿಯದೆ ಬಿಜೆಪಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಬಿಜೆಪಿಗರು ಹೋದಲ್ಲೆಲ್ಲ ಜನಾಕ್ರೋಶದ ದರ್ಶವಾಗುತ್ತಿದೆ. ವರುಣ ಕ್ಷೇತ್ರಕ್ಕೆ ಕಾಲಿಟ್ಟ ದಿನವೇ ಸೋಮಣ್ಣ & ಸಂಸದ ಪ್ರತಾಪ್ ಸಿಂಹ ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರದುದ್ದಕ್ಕೂ ಒಂದೇ ಒಂದು ಜನೋಪಯೋಗಿ ಕೆಲಸ ಮಾಡಿದ್ದಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿತ್ತೇ ಬಿಜೆಪಿ? ಈ ಚುನಾವಣೆಯಲ್ಲಿ ಬಿಜೆಪಿಗೆ ಸಿಗುವುದು ತಿರಸ್ಕಾರ!’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಅಭಿವೃದ್ಧಿಗೆ ಇನ್ನೊಂದು ಬಾರಿ ಬೊಮ್ಮಾಯಿಗೆ ಮತ ನೀಡಿ: ನಟ ಕಿಚ್ಚ ಸುದೀಪ್

ಕರ್ನಾಟಕದ ಜನತೆ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತದಿಂದ ಆಕ್ರೋಶಭರಿತರಾಗಿದ್ದಾರೆ. ಕಾಂಗ್ರೆಸ್‌ನ ಸುಭದ್ರ, ಸುಸ್ಥಿರ ಆಡಳಿತಕ್ಕೆ ಕಾಯುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಹಾಗೂ ಜನಪರ ಆಡಳಿತಕ್ಕೆ ಕಾಂಗ್ರೆಸ್ ಪಕ್ಷವೇ ನಮ್ಮ ಆಯ್ಕೆ ಎನ್ನುತ್ತಿದ್ದಾರೆ ಕನ್ನಡಿಗರು’ ಎಂದು ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News