ಕೈಬೀಸಿ ಹೋಗುವ ಶೋಕಿವಾಲನ ಶೋಕಿಗೆ ಜನರ ಜೇಬು ಬರಿದಾಗುತ್ತಿದೆ: ಕಾಂಗ್ರೆಸ್

Bengaluru-Mysuru expressway Toll hike: ಉದ್ಘಾಟನೆಯಾದ ಮರುದಿನವೇ ಟೋಲ್ ಸುಲಿಗೆ ಶುರುವಾಗಿತ್ತು, ಈಗ 20 ದಿನದಲ್ಲಿ ಸುಲಿಗೆಯ ದರ ಏರಿದೆ. #40PercentSarkaraದ ದರೋಡೆ 100% ಆಗಿದೆ! ಎಂದು ಕಾಂಗ್ರೆಸ್ ಟೀಕಿಸಿದೆ

Written by - Puttaraj K Alur | Last Updated : Apr 1, 2023, 01:09 PM IST
  • ಉದ್ಘಾಟನೆಯಾದ ಕೇವಲ 20 ದಿನಕ್ಕೆ ಬೆಂಗಳೂರು-ಮೈಸೂರು ಹೈವೇ ಟೋಲ್ ಏರಿಕೆ
  • ಕೈಬೀಸಿ ಹೋಗುವ ಶೋಕಿವಾಲನ ಶೋಕಿಗೆ ಜನರ ಜೇಬು ಬರಿದಾಗುತ್ತಿದೆ ಎಂದು ಟೀಕಿಸಿದ ಕಾಂಗ್ರೆಸ್
  • #40PercentSarkaraದ ದರೋಡೆ 100% ಆಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ
ಕೈಬೀಸಿ ಹೋಗುವ ಶೋಕಿವಾಲನ ಶೋಕಿಗೆ ಜನರ ಜೇಬು ಬರಿದಾಗುತ್ತಿದೆ: ಕಾಂಗ್ರೆಸ್ title=
ಟೋಲ್ ಏರಿಕೆ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ಉದ್ಘಾಟನೆಯಾದ ಕೇವಲ 20 ದಿನಕ್ಕೆ ಬೆಂಗಳೂರು-ಮೈಸೂರು ಹೈವೇ ಟೋಲ್ ಏರಿಕೆ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕೈಬೀಸಿ ಹೋಗುವ ಶೋಕಿವಾಲನ ಶೋಕಿಗೆ ಜನರ ಜೇಬು ಬರಿದಾಗುತ್ತಿದೆ. ಉದ್ಘಾಟನೆಯಾದ ಮರುದಿನವೇ ಟೋಲ್ ಸುಲಿಗೆ ಶುರುವಾಗಿತ್ತು, ಈಗ 20 ದಿನದಲ್ಲಿ ಸುಲಿಗೆಯ ದರ ಏರಿದೆ. #40PercentSarkaraದ ದರೋಡೆ 100% ಆಗಿದೆ! ಇದರೊಂದಿಗೆ ಬಸ್ ಪ್ರಯಾಣದ ದರವೂ ಏರಿಕೆಯಾಗಲಿದೆ, ಜನರ ಕಷ್ಟದ ಹೊಣೆ ಹೊರುವುದು ಯಾರು? ಸಂಸದ ಪ್ರತಾತ್ ಸಿಂಹ ಅವರೋ ಅತವಾ ಪ್ರಧಾನಿ ನರೇಂದ್ರ ಮೋದಿ ಅವರೋ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: "ವರುಣಾದಿಂದ ವಿಜಯೇಂದ್ರ‌ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ"

ಯುಪಿ ಮಾಡೆಲ್!

‘ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಘಟನೆ ಕರ್ನಾಟಕ ತಲೆತಗ್ಗಿಸುವಂತಹದ್ದು. ಉತ್ತರಪ್ರದೇಶದಲ್ಲಿ ಕೇಳಿಬರುತ್ತಿದ್ದ ಮಾದರಿಯಲ್ಲಿ ರಾಜ್ಯದಲ್ಲೂ ಹೇಯ ಕೃತ್ಯ ನಡೆದಿದೆ, ಇದೇನಾ ನೀವು ಹೇಳುವ ಯುಪಿ ಮಾಡೆಲ್ ಬಿಜೆಪಿ? ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಂತ್ರಸ್ತೆಯದ್ದೇ ತಪ್ಪು ಎಂದರೂ ಅಚ್ಚರಿ ಇಲ್ಲ!’ ಎಂದು ಟೀಕಿಸಿದೆ.

ಬಿಜೆಪಿಗರು ಕಾನೂನಿಗೆ ಅತೀತರೇ?

‘ಅಪರಾಧಿ ಎಂದು ಸಾಬೀತಾಗಿರುವ ಬಿಜೆಪಿ ಶಾಸಕ ನೆಹರೂ ಒಲೆಕಾರ್‌ರನ್ನು ಅನರ್ಹಗೊಳಿಸಿಲ್ಲ ಏಕೆ? ಎಂಬ ಹೈಕೋರ್ಟಿನ ಪ್ರಶ್ನೆಗೆ ಬಿಜೆಪಿ ಸರ್ಕಾರದ ಬಳಿ ಉತ್ತರವಿದೆಯೇ? ವಿಪಕ್ಷಗಳ ನಾಯಕರ ಮೇಲೆ ನಿಯಮಗಳನ್ನು ಮೀರಿ ಮುಗಿಬೀಳುವ ಬಿಜೆಪಿ ತಮ್ಮದೇ ಪಕ್ಷದ ನಾಯಕರ ಮೇಲೆ ನಿಯಮಗಳನ್ನು ಜಾರಿಗೊಳಿಸುವುದಿಲ್ಲ ಏಕೆ? ಬಿಜೆಪಿಗರು ಕಾನೂನಿಗೆ ಅತೀತರೇ ಸಿಎಂ ಬಸವರಾಜ್ ಬೊಮ್ಮಾಯಿಯವರೇ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.  

ಇದನ್ನೂ ಓದಿ:  "ವರುಣಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಆದರೂ ಬಿಜೆಪಿ ಗೆಲ್ಲುವ ಎಲ್ಲ ವಾತಾವರಣ ಇದೆ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News