1.50 ಲಕ್ಷ ರೂ. ಖರ್ಚು ಮಾಡಿ ಮತ ಹಾಕಲು ಬಂದ ವ್ಯಕ್ತಿಗೆ ನಿರಾಸೆ..! ವೋಟರ್‌ ಲಿಸ್ಟ್‌ನಿಂದ ಹೆಸರೆ ಡಿಲೀಟ್‌

Karnataka Vidhansabha Chunav Latest Updates : ಚುನಾವಣಾ ಅಧಿಕಾರಿಗಳ ಯಡವಟ್ಟಿನಿಂದಾಗಿ ಅಮೇರಿಕದಿಂದ ಮತ ಚಲಾಯಿಸಲು ಬಂದಿದ್ದ ವ್ಯಕ್ತಿಯೊಬ್ಬರು ನಿರಾಸೆಗೊಳಗಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ವ್ಯಕ್ತಿಯು ಸುಮಾರು 1.50 ಲಕ್ಷ ರೂ. ಖರ್ಚು ಮಾಡಿ ಮತ ಚಲಾಯಿಸಲು ಬಂದಿದ್ದರು.

Written by - Krishna N K | Last Updated : May 10, 2023, 03:17 PM IST
  • ಅಮೇರಿಕದಿಂದ ಮತ ಚಲಾಯಿಸಲು ದಾವಣಗೆರೆಗೆ ಬಂದ ವ್ಯಕ್ತಿಗೆ ನಿರಾಸೆ.
  • ಸುಮಾರು 1.50 ಲಕ್ಷ ರೂ. ಖರ್ಚು ಮಾಡಿ ಮತ ಚಲಾಯಿಸಲು ಬಂದಿದ್ದ ಮತದಾರ.
  • ಚುನಾವಣಾ ಅಧಿಕಾರಿಗಳ ಯಡವಟ್ಟಿನಿಂದಾಗಿ ಮತದಾರರ ಪಟ್ಟಿಯಿಂದ ವ್ಯಕ್ತಿಯ ಹೆಸರು ಡಿಲೀಟ್‌.
1.50 ಲಕ್ಷ ರೂ. ಖರ್ಚು ಮಾಡಿ ಮತ ಹಾಕಲು ಬಂದ ವ್ಯಕ್ತಿಗೆ ನಿರಾಸೆ..! ವೋಟರ್‌ ಲಿಸ್ಟ್‌ನಿಂದ ಹೆಸರೆ ಡಿಲೀಟ್‌ title=

Karnataka Assembly Election 2023 Latest Updates (ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ 2023 ಲೇಟೆಸ್ಟ್ ಅಪ್ಡೇಟ್) : ಮತದಾನ ಪ್ರತಿಯೊಬ್ಬರ ಹಕ್ಕು, ಎಲ್ಲರೂ ತಪ್ಪದೇ ಮತದಾನ ಮಾಡಲೇಬೇಕು. ಇದೀಗ 1.50 ಲಕ್ಷ ರೂ. ಖರ್ಚು ಮಾಡಿ ಅಮೇರಿಕದಿಂದ ಹಕ್ಕು ಚಲಾಯಿಸಲು ಬಂದ ವ್ಯಕ್ತಿಯೊಬ್ಬನಿಗೆ ನಿರಾಸೆ ಉಂಟಾಗಿರುವ ಘಟನೆ ದಾವಣಗೆರೆಯಯಲ್ಲಿ ನಡೆದಿದೆ.

ಹೌದು.. ದಾವಣಗೆರೆಯ ನಿವಾಸಿ ರಾಘವೇಂದ್ರ ಶೇಠ್‌ ಅವರು ಅಮೇರಿಕದ ಟೆಕ್ಸಾಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಬಾರಿ ಮತ ಹಾಕುವ ರಾಘವೇಂದ್ರ ಅವರು ಈ ಬಾರಿಯೂ ತಮ್ಮ ಹಕ್ಕನ್ನು ಚಲಾಯಿಸಲು ಒಂದು ವಾರದ ಹಿಂದೆಯೇ ನಗರಕ್ಕೆ ಬಂದಿದ್ದರು. ಸುಮಾರು 1.50 ಲಕ್ಷ ರೂ. ಖರ್ಚು ಮಾಡಿ ಮತ ಹಾಕಲು ಬಂದಿದ್ದರು. ಆದ್ರೆ, ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲದ್ದನ್ನು ಕಂಡು ನಿರಾಸೆಗೊಳಗಾಗಿದ್ದಾರೆ.

ಇದನ್ನೂ ಓದಿ : Karnataka Election 2023: ತಮ್ಮ ಓಟನ್ನು ತಾವೇ ಹಾಕಿಕೊಳ್ಳದ ಅಭ್ಯರ್ಥಿಗಳು!

ರಾಘವೇಂದ್ರ ಅವರು ಕಳೆದ 15 ವರ್ಷದಿಂದ ದಾವಣಗೆರೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಪ್ರತಿಬಾರಿ ಚುನಾವಣೆಯಲ್ಲಿ ದಾವಣಗೆರೆಯಲ್ಲಿಯೇ ಮತ ಹಾಕುತ್ತಿದ್ದರು. ಈ ಬಾರಿ ಮತದಾನಕ್ಕೆ ಹೋದರೆ ಮತದಾರರ ಪಟ್ಟಿಯಲ್ಲಿ ರಾಘವೇಂದ್ರ ಹೆಸರೆ ಇಲ್ಲ. ಚುನಾವಣಾ ಅಧಿಕಾರಿಗಳ ಯಡವಟ್ಟಿನಿಂದಾಗಿ ಸದ್ಯ ರಾಘವೇಂದ್ರ ಅವರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಒಂದು ವಾರದ ಹಿಂದೆಯೇ ರಜೆ ಹಾಕಿ ಮತದಾನ ಮಾಡಲು ರಾಘವೇಂದ್ರ ಅವರು ಬಂದಿದ್ದದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News