Karnataka Election 2023: JDS ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ, ಭವಾನಿಗೆ ಕೈತಪ್ಪಿದ ಟಿಕೆಟ್!

Karnataka Assembly Election 2023: ಹಾಸನ ನಗರ ಟಿಕೆಟ್ ಕುರಿತ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಎಚ್‍ಡಿಕೆ, ಭವಾನಿ ರೇವಣ್ಣರಿಗೆ ಟಿಕೆಟ್ ನಿರಾಕರಿಸಿದ್ದಾರೆ. ತಾವು ಬಯಸಿದಂತೆ ಎಚ್‍.ಪಿ.ಸ್ವರೂಪ್ ಪ್ರಕಾಶ್ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ​

Written by - Puttaraj K Alur | Last Updated : Apr 14, 2023, 08:26 PM IST
  • ಮೇ 10ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
  • ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣರಿಗೆ ಟಿಕೆಟ್ ಕೈತಪ್ಪಿದೆ
  • 2ನೇ ಪಟ್ಟಿ ಘೋಷಿಸುವ ಮುನ್ನವೇ ಸ್ವರೂಪ್‍ ಪ್ರಕಾಶ್‍ಗೆ ಬಿ ಫಾರಂ ನೀಡಿದ HDK
Karnataka Election 2023: JDS ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ, ಭವಾನಿಗೆ ಕೈತಪ್ಪಿದ ಟಿಕೆಟ್! title=
ಭವಾನಿ ರೇವಣ್ಣರಿಗೆ ಕೈತಪ್ಪಿದ ಟಿಕೆಟ್!

ಬೆಂಗಳೂರೂ: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣರಿಗೆ ಟಿಕೆಟ್ ಕೈತಪ್ಪಿದೆ.

ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ 49 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದರು. ಹಾಸನ ನಗರ ಟಿಕೆಟ್ ಕುರಿತ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಎಚ್‍ಡಿಕೆ, ಭವಾನಿ ರೇವಣ್ಣ ಅವರಿಗೆ ಟಿಕೆಟ್ ನಿರಾಕರಿಸಿದ್ದಾರೆ. ತಾವು ಬಯಸಿದಂತೆ ಎಚ್‍.ಪಿ.ಸ್ವರೂಪ್ ಪ್ರಕಾಶ್ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದರು. ಅಧಿಕೃತ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಿಸುವ ಮುನ್ನವೇ ಎಚ್‍ಡಿಕೆ ಸ್ವರೂಪ್‍ಗೆ ಬಿ ಫಾರಂ ನೀಡಿದ್ದಾರೆ.

ಇದನ್ನೂ ಓದಿ: Karnataka Election 2023: ʻಕಮಲʼ ತೊರೆದು ʻಕೈʼ ಹಿಡಿದ ಲಕ್ಷ್ಮಣ ಸವದಿ.. ಕಾಂಗ್ರೆಸ್‌ಗೆ ಆನೆಬಲ!

ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ

ಕುಡುಚಿ- ಆನಂದ್ ಮಾಳಗಿ

ರಾಯಭಾಗ- ಪ್ರದೀಪ್ ಮಾಳಗಿ

ಸವದತ್ತಿ- ಸೌರಭ್ ಆನಂದ್ ಚೋಪ್ರಾ

ಅಥಣಿ- ಶಶಿಕಾಂತ್ ಪಡಸಲಗಿ ಗುರುಗಳು

ಹುಬ್ಬಳ್ಳಿ- ಧಾರವಾಡ ಪೂರ್ವ- ವೀರಭದ್ರಪ್ಪ ಹಾಲರವಿ

ಕುಮುಟ- ಸೂರಜ್ ಸೋನಿ ನಾಯಕ್

ಹಳಿಯಾಳ- ಎಸ್.ಎಲ್.ಘೋಟ್ನೇಕರ್

ಭಟ್ಕಳ- ನಾಗೇಂದ್ರ ನಾಯಕ್

ಯಲ್ಲಾಪುರ- ನಾಗೇಶ್ ನಾಯ್ಕ್

ಶಿರಸಿ-ಸಿದ್ದಾಪುರ- ಉಪೇಂದ್ರ ಪೈ

ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್

ಬಳ್ಳಾರಿ- ಅಲ್ಲಾಪಕ್ಷ್ ಆಲಿಯಾಸ್ ಮುನ್ನ

ಕಲ್ಬುರ್ಗಿ ಉತ್ತರ- ನಾಸೀರ್ ಉಸೇನ್ ಉಸ್ತಾದ್

ಹರಪನಹಳ್ಳಿ- ಎಮ್.ಎನ್.ನೂರ್ ಅಹ್ಮದ್

ಹಗರಿಬೊಮ್ಮನಹಳ್ಳಿ- ಪರಮೇಶ್ವರಪ್ಪ

ಸಿರಗುಪ್ಪ- ಪರಮೇಶ್ವರ್ ನಾಯ್ಕ್

ಕಂಪ್ಲಿ- ರಾಜೂ ನಾಯ್ಕ್

ಕೊಳ್ಳೆಗಾಲ- ನಿವೃತ್ತ ಪೊಲೀಸ್ ಎನ್.ಎಂ.ಪುಟ್ಟಸ್ವಾಮಿ

ಗುಂಡ್ಲುಪೇಟೆ- ಕಡಬೂರ್ ಮಂಜುನಾಥ್

ಕಾಪು- ಕುಮಾರಿ ಸಬೀನ ಸಮದ್

ಕಾರ್ಕಳ- ಶ್ರೀಕಾಂತ್ ಕೊಚ್ಚೂರ್

ಉಡುಪಿ- ದಕ್ಷತ್ ಆರ್.ಶೆಟ್ಟಿ

ಕುಂದಾಪುರ- ರಮೇಶ್ ಕುಂದಾಪುರ

ಬೈಂದೂರು- ಮನ್ಸೂರ್ ಇಬ್ರಾಹಿಂ

ಮಂಗಳೂರು ದಕ್ಷಿಣ- ಸುಮತಿ ಹೆಗ್ಡೆ

ಕನಕಪುರ- ನಾಗರಾಜು

ಸರ್ವಜ್ಞ ನಗರ- ಮಹಮದ್ ಮುಸ್ತಾಫದ

ಯಲಹಂಕ- ಮುನೇಗೌಡ

ಯಶವಂತಪುರ- ಜವರಾಯೀಗೌಡ

ತಿಪಟೂರು- ಶಾಂತಕುಮಾರ್

ಶಿರಾ- ಆರ್.ರುದ್ರೇಶ್

ಹಾನಗಲ್- ಮನೋಹರ್ ತಹಶೀಲ್ದಾರ್

ಸಿಂದಗಿ- ವಿಶಾಲಾಕ್ಷಿ ಶಿವಾನಂದ್

ಗಂಗಾವತಿ- ಚನ್ನಕೇಶವ

ಶಹಪೂರ- ಗುರುಲಿಂಗಪ್ಪ ಗೌಡ

ಕಾರವಾರ- ಚೈತ್ರ ಕೋಟೆಕಾರ್

ಇದನ್ನೂ ಓದಿ: ಭ್ರಷ್ಟರೆಂದರೆ ಬಿಜೆಪಿಗೆ ಇಷ್ಟೊಂದು ಪ್ರೀತಿ ಏಕೆ?: ಕಾಂಗ್ರೆಸ್ ಪ್ರಶ್ನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News