Haveri Assembly Election Result 2023: ಏಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆ ‘ಹಸ್ತ’ಮಯ!

Haveri Assembly Election Result 2023: ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿಯೇ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ. 2018ರ ಚುನಾವಣೆಯಲ್ಲಿ ಒಟ್ಟು 6 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

Written by - Puttaraj K Alur | Last Updated : May 13, 2023, 04:32 PM IST
  • ಏಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆ ‘ಹಸ್ತ’ಮಯವಾಗಿದೆ
  • ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 5 ‘ಕೈ’ ತೆಕ್ಕೆಗೆ ಸೇರಿವೆ
  • ಸಿಎಂ ಬೊಮ್ಮಾಯಿ ಕ್ಷೇತ್ರ ಶಿಗ್ಗಾಂವಿ ಬಿಟ್ಟು ಉಳಿದ 5 ಕ್ಷೇತ್ರದಲ್ಲಿ ‘ಕೈ’ಹಿಡಿದ ಜನರು
Haveri Assembly Election Result 2023: ಏಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆ ‘ಹಸ್ತ’ಮಯ! title=
ಹಾವೇರಿ ಜಿಲ್ಲೆ ‘ಹಸ್ತ’ಮಯ!

ಹಾವೇರಿ: ಏಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆ ಹಸ್ತಮಯವಾಗಿದೆ. ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳು ‘ಕೈ’ ತೆಕ್ಕೆಗೆ ಸೇರಿವೆ. ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರ ಶಿಗ್ಗಾಂವಿ ಬಿಟ್ಟು ಉಳಿದ 5 ಕ್ಷೇತ್ರದಲ್ಲಿ ಜನರು ‘ಕೈ’ ಹಿಡಿದಿದ್ದಾರೆ. ಇದರಿಂದ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳಿವೆ. ಹಾವೇರಿ ಮೀಸಲು ಕ್ಷೇತ್ರ, ಹಾನಗಲ್, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು ಹಾಗೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳನ್ನು ಹಾವೇರಿ ಹೊಂದಿದೆ. ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿಯೇ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ. 2018ರ ಚುನಾವಣೆಯಲ್ಲಿ ಒಟ್ಟು 6 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: Karnataka Election Results 2023: ಕರ್ನಾಟಕ ಚುನಾವಣೆ ಮೇಲೆ BSY ಮೊದಲ ಪ್ರತಿಕ್ರಿಯೆ, ಹೇಳಿದ್ದೇನು?

ಹಾವೇರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಫಲಿತಾಂಶದ ವಿವರ:

ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ – ಬಿಜೆಪಿ – ಬಸವರಾಜ ಬೊಮ್ಮಾಯಿ

ಹಾವೇರಿ ಮೀಸಲು ವಿಧಾನಸಭೆ ಕ್ಷೇತ್ರ- ಕಾಂಗ್ರೆಸ್ - ರುದ್ರಪ್ಪ ಲಮಾಣಿ  

ಬ್ಯಾಡಗಿ ವಿಧಾನಸಭೆ ಕ್ಷೇತ್ರ – ಕಾಂಗ್ರೆಸ್ - ಬಸವರಾಜ್ ಶಿವಣ್ಣನವರ  

ಹಿರೇಕೆರೂರು ವಿಧಾನಸಭೆ ಕ್ಷೇತ್ರ – ಕಾಂಗ್ರೆಸ್ - ಯುಬಿ ಬಣಕಾರ  

ರಾಣೇಬೆನ್ನೂರು ವಿಧಾನಸಭೆ ಕ್ಷೇತ್ರ - ಕಾಂಗ್ರೆಸ್ - ಪ್ರಕಾಶ ಕೋಳಿವಾಡ

ಹಾನಗಲ್ ವಿಧಾನಸಭೆ ಕ್ಷೇತ್ರ – ಕಾಂಗ್ರೆಸ್ - ಶ್ರೀನಿವಾಸ್ ಮಾನೆ  

ಮೇ 10ರಂದು ಬುಧವಾರ ನಡೆದ ಮತದಾನದ ವೇಳೆ ಹಾವೇರಿಯಲ್ಲಿ ಶೇ.81.17ರಷ್ಟು ಮತದಾನವಾಗಿತ್ತು. 6 ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ ಶೇ.84.89ರಷ್ಟು ಮತದಾನವಾಗಿತ್ತು.

ಇದನ್ನೂ ಓದಿ: ಸೋಮಣ್ಣ ಕೈಯಲ್ಲೂ ಆಗದ ಪುಟ್ಟರಂಗಶೆಟ್ಟಿ ಸೋಲು... ಕೈ ಭದ್ರ- ಕಮಲ ಛಿದ್ರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News