ಗಂಗಾವತಿ: ಚುನಾವಣಾ ಮೆರವಣಿಗೆಯಲ್ಲಿ ಮಕ್ಕಳ ಬಳಕೆ; ಪ್ರಕರಣ ದಾಖಲು

ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಮೆರವಣಿಗೆಯಲ್ಲಿ ಮಕ್ಕಳನ್ನು ಬಳಸಿಕೊಂಡಿದ್ದಕ್ಕೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

Written by - Zee Kannada News Desk | Last Updated : Apr 21, 2023, 11:11 AM IST
  • ಏಪ್ರೀಲ್ 19ರಂದು ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಮತ್ತು ನಾಮಪತ್ರ ಸಲ್ಲಿಸುವ ಜಾಥಾದಲ್ಲಿ ಮಕ್ಕಳು ಭಾಗವಹಿಸಿದ್ದು ಕಂಡುಬಂದಿರುತ್ತದೆ
  • ರಾಜಕೀಯ ಜಾಥಾ, ಪ್ರಚಾರ ಯಾತ್ರೆ ಮತ್ತು ಸಭೆಗಳಲ್ಲಿ ಬಳಸಿಕೊಳ್ಳಲು ಅಥವಾ ಭಾಗವಹಿಸಲು ಸಂಪೂರ್ಣ ನಿಷೇಧಿಸಿರುತ್ತದೆ
ಗಂಗಾವತಿ: ಚುನಾವಣಾ ಮೆರವಣಿಗೆಯಲ್ಲಿ ಮಕ್ಕಳ ಬಳಕೆ; ಪ್ರಕರಣ ದಾಖಲು title=
ಸಾಂದರ್ಭಿಕ ಚಿತ್ರ

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಮೆರವಣಿಗೆಯಲ್ಲಿ ಮಕ್ಕಳನ್ನು ಬಳಸಿಕೊಂಡಿದ್ದಕ್ಕೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಮಕ್ಕಳನ್ನು ರಾಜಕೀಯ ಜಾಥಾ, ಪ್ರಚಾರ ಯಾತ್ರೆ ಮತ್ತು ಸಭೆಗಳಲ್ಲಿ ಬಳಸಿಕೊಳ್ಳಲು ಅಥವಾ ಭಾಗವಹಿಸಲು ಸಂಪೂರ್ಣ ನಿಷೇಧಿಸಿರುತ್ತದೆ.ಆದಾಗ್ಯೂ ಏಪ್ರಿಲ್ 18 ಮತ್ತು ಏಪ್ರೀಲ್ 19ರಂದು ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಮತ್ತು ನಾಮಪತ್ರ ಸಲ್ಲಿಸುವ ಜಾಥಾದಲ್ಲಿ ಮಕ್ಕಳು ಭಾಗವಹಿಸಿದ್ದು ಕಂಡುಬಂದಿರುತ್ತದೆ.

ಇದನ್ನೂ ಓದಿ: ವರುಣ ಬಳಿಕ ಚಾಮರಾಜನಗರದಲ್ಲಿ 2ನೇ ಸುತ್ತಿನ ಮತಬೇಟೆ

ಈ ಪ್ರಯುಕ್ತ ಅನುಮತಿ ಪಡೆದ ಅಯಾ ಪಕ್ಷಗಳ ಘಟಕಗಳ ಮುಖ್ಯಸ್ಥರು, ಚುನಾವಣಾಧಿಕಾರಿಗಳ ಅನುಮತಿ ಪತ್ರದ ಆದೇಶವನ್ನು ಉಲ್ಲಂಘಿಸಿ ಚಿಕ್ಕ ಮಕ್ಕಳನ್ನು ಚುನಾವಣಾ ಮೆರವಣಿಗೆಯಲ್ಲಿ ಬಳಸಿಕೊಂಡ ಅಪರಾಧಕ್ಕೆ ಕಲಂ 14 ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1986ರ ಹಾಗೂ ವಿವಿಧ ಕಲಂಗಳಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ದರ್ಜೆ ಮಾಡಿದ್ದು, ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರ ಮಾಹಿತಿಗಾಗಿ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ ಎಂದು 62-ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಾದ ಬಸವಣ್ಣಪ್ಪ ಕಲಶೆಟ್ಟಿ ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News