CM Basavaraj Bommai: ಗಾಳಿಯಲ್ಲಿ ಗುಂಡು ಹೊಡೆದರೆ ಪ್ರಯೋಜನವಿಲ್ಲ: ಸಿಎಂ ಬೊಮ್ಮಾಯಿ ತಿರುಗೇಟು

CM Basavaraj Bommai: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ 40 ಪರ್ಸೆಂಟ್ ಕಮಿಷನ್ ತನಿಖೆ ಕೈಗೊಳ್ಳಲಾಗುವುದು ಎಂಬ ಲಕ್ಷ್ಮಣ್ ಸವದಿ ಅವರ  ಹೇಳಿಕೆಗೆ ಅವರು ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

Written by - Prashobh Devanahalli | Edited by - Bhavishya Shetty | Last Updated : Apr 26, 2023, 03:20 PM IST
    • ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ 40 ಪರ್ಸೆಂಟ್ ಕಮಿಷನ್ ತನಿಖೆ ಕೈಗೊಳ್ಳಲಾಗುವುದು ಎಂಬ ಲಕ್ಷ್ಮಣ್ ಸವದಿ ಹೇಳಿಕೆ
    • ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
    • ಇಲ್ಲಿ ಇದ್ದಾಗಲೇ ಹೇಳಬಹುದಿತ್ತಲ್ಲ, ಏಕೆ ಸುಮ್ಮನಿದ್ದರು? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನೆ
CM Basavaraj Bommai: ಗಾಳಿಯಲ್ಲಿ ಗುಂಡು ಹೊಡೆದರೆ ಪ್ರಯೋಜನವಿಲ್ಲ: ಸಿಎಂ ಬೊಮ್ಮಾಯಿ ತಿರುಗೇಟು title=
CM Bommai

ಬೆಳಗಾವಿ: ಯಾವ ನಿರ್ದಿಷ್ಟ ಪ್ರಕರಣದಲ್ಲಿ 40 ಪರ್ಸೆಂಟ್ ಹಣ ಪಡೆದಿದ್ದೇವೆ ಎಂದು ಸ್ಪಷ್ಟವಾಗಿ ಹೇಳಬೇಕು. ಈ ತರಹ ಗಾಳಿಯಲ್ಲಿ ಗುಂಡು ಹೊಡೆಯುವುದರಿಂದ ಪ್ರಯೋಜನ ಇಲ್ಲ. ಅವರು ಇಲ್ಲಿ ಇದ್ದಾಗಲೇ ಹೇಳಬಹುದಿತ್ತಲ್ಲ, ಏಕೆ ಸುಮ್ಮನಿದ್ದರು? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Virat-Anushka: ವಿರಾಟ್-ಅನುಷ್ಕಾ ಸೇವಿಸಿದ ಕಾರ್ನರ್ ಐಸ್ ಕ್ರೀಂ ಬೆಲೆ ಎಷ್ಟು ಗೊತ್ತಾ? ಬೆಂಗಳೂರಿನಲ್ಲಿ ಸಖತ್ ಫೇಮಸ್ ಇದು

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ 40 ಪರ್ಸೆಂಟ್ ಕಮಿಷನ್ ತನಿಖೆ ಕೈಗೊಳ್ಳಲಾಗುವುದು ಎಂಬ ಲಕ್ಷ್ಮಣ್ ಸವದಿ ಅವರ  ಹೇಳಿಕೆಗೆ ಅವರು ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದ ಮುಖ್ಯಮಂತ್ರಿಯನ್ನು ಗುರಿಯಾಗಿಸಿ ಬಿಜೆಪಿ ಇಮೇಜ್ ಕೆಡಿಸಬೇಕು ಅಂತಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಸಿದ್ದರಾಮಯ್ಯ ಅವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜನ ನಂಬುತ್ತಿಲ್ಲ, ಏಕೆಂದರೆ ಅವರೇ ದೊಡ್ಡ ಭ್ರಷ್ಟಾಚಾರಿಗಳು. ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗವಾಗಿದೆ. ಹೀಗಿರುವಾಗ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.

ಲಿಂಗಾಯತ ಲಡಾಯಿ ಇಲ್ಲ:

ನಿಮ್ಮ ಹಾಗೂ ಸಿದ್ದರಾಮಯ್ಯ ಮಧ್ಯೆ ಲಿಂಗಾಯತ ಲಡಾಯಿ ಜೋರಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಲಡಾಯಿ ಏನಿಲ್ಲ, ಅವರೇ ಮಾಡಿಕೊಂಡಿರೋದು. ಅವರೇ ಮಾಡಿಕೊಂಡು ಬೇರೆ ಬೇರೆ ಸ್ಪಷ್ಟೀಕರಣ ಕೊಡುತ್ತ ತಿರುಗುತ್ತಿದ್ದಾರೆ. ಜನ ಬಹಳ ಪ್ರಬುದ್ಧವಾಗಿದ್ದಾರೆ. ಯಾರಿಗೆ ಯಾವಾಗ ಹೇಗೆ ಬೆಂಬಲ ಮಾಡಬೇಕೆಂದು ಗೊತ್ತಿದೆ” ಎಂದರು.

ಇಂದು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿದ್ದು, ಎಲ್ಲ ಕಡೆ ರೋಡ್ ಷೋ, ಸಭೆಗಳಲ್ಲಿ ಜನರ ಉತ್ಸಾಹ ದೊಡ್ಡ ಪ್ರಮಾಣದಲ್ಲಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.

ಕೆಲವು ಬದಲಾವಣೆ ಮಾಡಿದ್ದಕ್ಕೂ ಜನ ಸ್ಪಂದಿಸಿದ್ದಾರೆ. ನಾನು ರಾಜ್ಯದ ಉದ್ದಗಲಕ್ಕೂ ಸುತ್ತುತ್ತಿದ್ದೇನೆ. ನಾಮಪತ್ರ ವಾಪಸ್ ಪ್ರಕ್ರಿಯೆ ಆದಮೇಲೆ ಬಿಜೆಪಿ ಸುನಾಮಿ ಇಡೀ ರಾಜ್ಯದಲ್ಲಿ ಇದೆ. ಬಿಜೆಪಿ ಸ್ಪಷ್ಟ ಬಹುಮತದಿಂದ ಬರಲಿದೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಮಾಹಿತಿ ವ್ಯವಸ್ಥೆ ಆಧಾರದ ಮೇಲೆ ರಣನೀತಿ:

ಸಂಖ್ಯೆ ಬಲದಷ್ಟೇ ಉತ್ಸಾಹ ಕೂಡ ದೊಡ್ಡ ಪ್ರಮಾಣದಲ್ಲಿ ಇದೆ. ಈಗ ಬಂದಿರುವುದೆಲ್ಲಾ  ಹಳೆಯ ಎಕ್ಸಿಟ್ ಪೋಲ್.  ನಮ್ಮದೇ ಆದಂತಹ ಮಾಹಿತಿ ವ್ಯವಸ್ಥೆ ಇದೆ, ಅದರ ಮೇಲೆ ರಣನೀತಿ ಇರುತ್ತದೆ ಎಂದರು.

ದಕ್ಷಿಣ ಕರ್ನಾಟಕದಿಂದ ಪ್ರಚಾರ ಶುರು ಮಾಡಿ ಉತ್ತರಕ್ಕೆ ಬಂದಿದ್ದು, ಎಲ್ಲಾ ಕಡೆ ಅಭೂತಪೂರ್ವ ಜನಬೆಂಬಲ ಇದೆ.  ವಿಶೇಷವಾಗಿ ಯುವಕರು, ಮಹಿಳೆಯರು ರೈತರು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಿದ್ದಾರೆ. ನಮ್ಮ ನಿರೀಕ್ಷೆ ಮೀರಿ ಜನಸ್ಪಂದನೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: Team Indiaಗೆ ಸಿಕ್ಕಾಯ್ತು ಬುಮ್ರಾ ತರಹದ ಬೌಲರ್! IPLನಲ್ಲಿ ಅಬ್ಬರಿಸುತ್ತಿರುವ ಈತ ಆಟೋ ಡ್ರೈವರ್’ನ ಮಗ

ಸ್ಪಷ್ಟ ಬಹುಮತ ಬರುವ ವಿಶ್ವಾಸ:

ತಳಮಟ್ಟದಲ್ಲಿ ನಿಜ ಚಿತ್ರಣವನ್ನು ನೋಡುತ್ತಿದ್ದು ಸ್ಪಷ್ಟ ಬಹುಮತ ಬರುವ ವಿಶ್ವಾಸ ಇದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News