Karnataka Assembly Election: ಮಗನಿಗೆ ‘ಜಾಗ’ ಮಾಡಿಕೊಡುವ ಉದ್ದೇಶಕ್ಕೆ BSY ಸ್ವಾಭಿಮಾನ ಅಡ ಇಡಬಾರದಿತ್ತು- ಕಾಂಗ್ರೆಸ್

‘ಕರ್ನಾಟಕಕ್ಕೆ ಬರುವ ಪ್ರಧಾನಿ ಮೋದಿ, ಅಮಿತ್ ಶಾ ಅಪ್ಪಿತಪ್ಪಿಯೂ "ಬೊಮ್ಮಾಯಿ ಸರ್ಕಾರ" ಎಂದು ಸಂಬೋಧಿಸುವುದಿಲ್ಲ ಏಕೆ? ಬೊಮ್ಮಾಯಿ ಸರ್ಕಾರದ ಸಾಧನೆಗಳ ಪಟ್ಟಿ ಹೇಳುತ್ತಿಲ್ಲವೇಕೆ? ಬಿಜೆಪಿಗೆ ಬೊಮ್ಮಾಯಿ ಮುಗಿದ ಅಧ್ಯಾಯವೇ?

Written by - Puttaraj K Alur | Last Updated : Mar 26, 2023, 05:17 PM IST
  • ಬಿ.ಎಸ್.ಯಡಿಯೂರಪ್ಪಗೆ ಹೆಡ್ ಮಾಸ್ಟರ್ ಎದುರು ಕೈಕಟ್ಟಿ ನಿಲ್ಲುವ ಮಗುವಿನಂತಹ ಪರಿಸ್ಥಿತಿ ಬರಬಾರದಿತ್ತು
  • BSY ಹಾಗೂ ಅಮಿತ್ ಶಾರ ದೇಹಭಾಷೆಯೇ ಅವರ ದುಃಸ್ಥಿತಿಯ ಕತೆ ಹೇಳುತ್ತಿದೆ
  • ಮಗನಿಗೆ "ಜಾಗ" ಮಾಡಿಕೊಡುವ ಒಂದೇ ಉದ್ದೇಶಕ್ಕೆ ಸ್ವಾಭಿಮಾನ ಅಡ ಇಡಬಾರದಿತ್ತು
Karnataka Assembly Election: ಮಗನಿಗೆ ‘ಜಾಗ’ ಮಾಡಿಕೊಡುವ ಉದ್ದೇಶಕ್ಕೆ BSY ಸ್ವಾಭಿಮಾನ ಅಡ ಇಡಬಾರದಿತ್ತು- ಕಾಂಗ್ರೆಸ್ title=
BSY ಬಗ್ಗೆ ಕಾಂಗ್ರೆಸ್ ವ್ಯಂಗ್ಯ!

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರ ಮುಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೈಕಟ್ಟಿ ಕುಳಿತಿರುವ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ವಯಸ್ಸಿನಲ್ಲೂ, ಪಕ್ಷದಲ್ಲೂ, ರಾಜಕೀಯದಲ್ಲೂ ಅಮಿತ್ ಶಾಗಿಂತಲೂ ಹಿರಿಯರಾಗಿರುವ ಬಿ.ಎಸ್.ಯಡಿಯೂರಪ್ಪನವರಿಗೆ ಹೆಡ್ ಮಾಸ್ಟರ್ ಎದುರು ಕೈಕಟ್ಟಿ ನಿಲ್ಲುವ ಮಗುವಿನಂತಹ ಪರಿಸ್ಥಿತಿ ಬರಬಾರದಿತ್ತು. BSY ಹಾಗೂ ಅಮಿತ್ ಶಾರ ದೇಹಭಾಷೆಯೇ BSY ಅವರ ದುಃಸ್ಥಿತಿಯ ಕತೆ ಹೇಳುತ್ತಿದೆ. ಮಗನಿಗೆ "ಜಾಗ" ಮಾಡಿಕೊಡುವ ಒಂದೇ ಉದ್ದೇಶಕ್ಕೆ ಸ್ವಾಭಿಮಾನ ಅಡ ಇಡಬಾರದಿತ್ತು’ ಎಂದು ಟೀಕಿಸಿದೆ.

ಇದನ್ನೂ ಓದಿ: "ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ": ಡಿ.ಕೆ. ಶಿವಕುಮಾರ್

ಬೊಮ್ಮಾಯಿ ಮುಗಿದ ಅಧ್ಯಾಯವೇ?

‘ಕರ್ನಾಟಕಕ್ಕೆ ಬರುವ ಪ್ರಧಾನಿ ಮೋದಿ, ಅಮಿತ್ ಶಾ ಅಪ್ಪಿತಪ್ಪಿಯೂ "ಬೊಮ್ಮಾಯಿ ಸರ್ಕಾರ" ಎಂದು ಸಂಬೋಧಿಸುವುದಿಲ್ಲ ಏಕೆ? ಬೊಮ್ಮಾಯಿ ಸರ್ಕಾರದ ಸಾಧನೆಗಳ ಪಟ್ಟಿ ಹೇಳುತ್ತಿಲ್ಲವೇಕೆ? ಬಿಜೆಪಿಗೆ ಬೊಮ್ಮಾಯಿ ಮುಗಿದ ಅಧ್ಯಾಯವೇ? ಅಥವಾ ಜೋಶಿ, ಸಂತೋಷರನ್ನು ಹಿಂಬಾಗಿಲಿನಿಂದ ಮುಂಬಾಗಿಲಿಗೆ ತಂದು ಬಿಡುವ ಪ್ರಕ್ರಿಯೆಯ ಆರಂಭವೇ ಬಿಜೆಪಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಮೀಸಲಾತಿಯನ್ನು ಕಲಸುಮೇಲೋಗರ ಮಾಡಿದೆ

‘ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು & ಸಮುದಾಯಗಳ ಕಣ್ಣಿಗೆ ಮಣ್ಣೆರಚಲು ಬಿಜೆಪಿ ಸರ್ಕಾರ ಮೀಸಲಾತಿಯನ್ನು ಕಲಸುಮೇಲೋಗರ ಮಾಡಿಟ್ಟಿದೆ. ಮುಸ್ಲಿಮರನ್ನು ಹಿಂದುಳಿದ ವರ್ಗದಿಂದ ಹೊರಗಿಟ್ಟು ದ್ರೋಹವೆಸಗಿದ್ದು, ಕಾನೂನಾತ್ಮಕ ಕಗ್ಗಂಟು ಸೃಷ್ಟಿಸುವುದು ನಿಶ್ಚಿತ. ಬಿಜೆಪಿಯ ಅಪ್ರಬುದ್ದ ನಿರ್ಧಾರಗಳು ಸಮಸ್ಯೆಗಳಿಗೆ ಕಾರಣವಾಗುವುದು ನಿಶ್ಚಿತ’ವೆಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದು ಕ್ರಮ ಸಮರ್ಥಿಸಿಕೊಂಡ ಅಮಿತ್ ಶಾ 

ಕ್ಷೀರ ಭಾಗ್ಯಕ್ಕೂ ಕಲ್ಲು!

‘ಬಿಜೆಪಿಯ ಹತಭಾಗ್ಯದ ಸರ್ಕಾರ ಕ್ಷೀರ ಭಾಗ್ಯಕ್ಕೂ ಕಲ್ಲು ಹಾಕಿದೆ. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಕಾಂಗ್ರೆಸ್ ಜಾರಿಗೊಳಿಸಿದ್ದ ಕ್ಷೀರಭಾಗ್ಯ ಯೋಜನೆಯನ್ನೂ ಹಳ್ಳ ಹಿಡಿಸಿದೆ ಬಿಜೆಪಿ ಸರ್ಕಾರ. ಕಳೆದ ಜನವರಿಯಿಂದ ಮಕ್ಕಳಿಗೆ ಹಾಲು ಪೂರೈಕೆ ಸ್ಥಗಿತವಾಗಿದೆ. ಸಿಎಂ ಬೊಮ್ಮಾಯಿಯವರೇ, ಮಕ್ಕಳಿಗೆ ಹಾಲು ನೀಡದಷ್ಟು ದಿವಾಳಿ ಆಗಿಯೇ ನಿಮ್ಮ ಸರ್ಕಾರ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News