ಚಿಕ್ಕೋಡಿ : ನಾಳೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ದೊಡ್ಡದಾದ ಹಬ್ಬವಾದ ಮತದಾನ ಪ್ರಕ್ರಿಯೆ ಆರಂಭಕ್ಕೆ ಬೆಳಗಾವಿ ಜಿಲ್ಲಾ ಆಡಳಿತ ಈಗಾಗಲೇ ಸಕಲ ಸಿದ್ಧತೆ ಪಡೆದುಕೊಂಡಿದೆ.
ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲಿ 20,424 ಸೇವಾ ಮತದಾರರು ಸೇರಿದಂತೆ ಒಟ್ಟು 39,67,574 ಜನರು ಮತ ಚಲಾಯಿಸಲಿದ್ದಾರೆ. 18 ರಿಂದ 19 ವಯೋಮಾನದ 94,652 ಯುವ ಮತದಾರರು ಜಿಲ್ಲೆಯಲ್ಲಿ ದಾಖಲಾಗಿದ್ದಾರೆ. 42,761 ವಿಕಲಚೇತನ ಮತದಾರರು, 80 ವರ್ಷ ಮೇಲ್ಪಟ್ಟಿರುವ 1,00,095 ಹಾಗೂ 151 ಇತರೆ ಮತದಾರರಿದ್ದಾರೆ.
ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲಿರುವ ಮತದಾರರ ಸಂಖ್ಯೆಗೆ ಅನುಗುಣವಾಗಿ 4,434 ಸಾಮಾನ್ಯ ಮತಗಟ್ಟೆಗಳು ಮತ್ತು 5 ಹೆಚ್ಚುವರಿ(ಆಗ್ಸಿಲರಿ) ಮತಗಟ್ಟೆಗಳು ಸೇರಿದಂತೆ ಒಟ್ಟು 4439 ಮತಗಟ್ಟೆಗಳನ್ನು ರಚಿಸಲಾಗಿದೆ.
ಇದನ್ನೂ ಓದಿ: ಮತದಾರರನ್ನು ಮತದಾನಕ್ಕಾಗಿ ವಾಹನಗಳಲ್ಲಿ ಕರೆ ತರುವುದು ಅಪರಾಧ!
ಒಟ್ಟು ಮತಗಟ್ಟೆಗಳ ಪೈಕಿ 300 ಸೂಕ್ಷ್ಮ (ಕ್ರಿಟಿಕಲ್) ಬೂತ್, 701 ವಲ್ನರೇಬಲ್ ಹಾಗೂ ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಿ ವಿಶೇಷ ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಚುನಾವಣೆಯಲ್ಲಿ ಮತದಾನ ನಿರ್ವಹಣೆಗಾಗಿ ಒಟ್ಟು 21,688 ಮತ್ತು ಮತ ಎಣಿಕೆ ನಿರ್ವಹಣೆಗಾಗಿ 1,188 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ.
ಮತದಾನ ದಿನದಂದು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅಧಿಕಾರಿಗಳ ಸಹಿತ ಒಟ್ಟು 10,113 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಆ ಪೈಕಿ 4,803 ಸಿವಿಲ್ ಪೊಲೀಸ್, 1,354 ಗೃಹ ರಕ್ಷಕ ದಳ, 19 ಕೆಎಸ್‌ಆರ್‌ಪಿ ತುಕಡಿ, 249 ಮೀಸಲು ಪಡೆಗಳು ಮತ್ತು 53 ಅರೆಸೇನಾ ತುಕಡಿಗಳು ಈಗಾಗಲೇ ಜಿಲ್ಲೆಗೆ ಆಗಮಿಸಿವೆ.
ಬೆಳಗಾವಿ, ಚಿಕ್ಕೋಡಿ ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ 18 ಮತಕ್ಷೇತ್ರಗಳನ್ನು ಪ್ರತಿನಿಧಿಸಿ ಒಟ್ಟು 187 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 174 ಪುರುಷರು ಹಾಗೂ 13 ಮಹಿಳೆಯರಿದ್ದಾರೆ. ಒಟ್ಟು 360 ಜನರು ನಾಮಪತ್ರ ಸಲ್ಲಿಸಿದ್ದು, 25 ನಾಮಪತ್ರಗಳು ತಿರಸ್ಕೃತಗೊಂಡಿರುತ್ತವೆ. 47 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ಚಿಕ್ಕೋಡಿಯಲ್ಲಿ ಭರ್ಜರಿ ಕ್ಯಾಂಪೇನ್
ಜಿಲ್ಲೆಯಲ್ಲಿ ಒಟ್ಟು ತಲಾ 5,328 ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್ ಯುನಿಟ್ ಮತ್ತು 5,774 ವಿವಿಪ್ಯಾಟ್ ಯಂತ್ರಗಳು ಬಳಕೆಯಾಗಲಿವೆ.ಸರ್ಕಾರಿ ಬಸ್ ಸಹಿತ 1400 ವಾಹನಗಳನ್ನು ಚುನಾವಣೆಗಾಗಿ ಮೀಸಲಿರಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.