ನವದೆಹಲಿ:ಕೊರೊನಾ ಮಹಾಮಾರಿಯ ಪ್ರಕೋಪದ ನಡುವೆ ಝೀಕಾ ವೈರಸ್ ಕುರಿತಾದ ಮಹತ್ವದ ಮಾಹಿತಿಯೊಂದು ಬಹಿರಂಗಗೊಂಡಿದೆ. ಈ ವೈರಸ್ ಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿರುವ ಸಂಶೋಧಕರು ಲೈಂಗಿಕ ಸಂಬಂಧವೂ ಕೂಡ ಈ ವೈರಸ್ ಹರಡುವುದಕ್ಕೆ ಕಾರಣವಾಗಬಹುದು ಎಂದು ಹೇಳಿದೆ. ಈ ಕುರಿತು ಅಧ್ಯಯನ ನಡೆಸಿರುವ ಸಂಶೋಧಕರು ಝೀಕಾ ವೈರಸ್ ಯೋನಿ ಮಾರ್ಗದ ಎಲ್ಲಕ್ಕಿಂತ ಹೊರಭಾಗದಲ್ಲಿರುವ ಕೋಶಗಳ ಲೋಅಗೆ ಸೋಂಕಿನ ಕಣಗಳನ್ನು ಮರು ಉತ್ಪತ್ತಿಸುವ ಮತ್ತು ಪಸರಿಸುವ ಶಕ್ತಿ ಹೊಂದಿದೆ ಎಂದಿದ್ದಾರೆ. ಆದರೆ, ಮುಖ್ಯವಾಗಿ ಈ ವೈರಸ್ ಸೊಳ್ಳೆಗಳಿಂದ ಹರಡುತ್ತದೆ. ಲೈಂಗಿಕ ಸಂಪರ್ಕದಿಂದ ಝೀಕಾ ವೈರಸ್ ಹರದುತ್ತದೆಯೋ ಅಥವಾ ಇಲ್ಲವೋ ಎಂಬುದರ ಕುರಿತು ವಿಜ್ಞಾನಿಗಳು ದೀರ್ಘಕಾಲದಿಂದ ಅಧ್ಯಯನ ನಡೆಸುತ್ತಿದ್ದರು. ಅವರು ಇಂತಹ ಸಾಕಷ್ಟ್ರು ಪ್ರಕರಣಗಳನ್ನು ಗಮನಿಸಿದ್ದು, ಈ ಪ್ರಕರಣಗಳಲ್ಲಿ ಜ್ಹೀಕಾ ವೈರಸ್ ಪ್ರಭಾವಿತ ಕ್ಷೇತ್ರದ ಯಾವುದೇ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಬಂಧ ಬೆಳೆಸುವ ವ್ಯಕ್ತಿಗಳಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಇದಕ್ಕೂ ಮೊದಲು ನಡೆಸಲಾಗಿರುವ ಅಧ್ಯಯನದಲ್ಲಿಯೂ ಕೂಡ ಸೋಂಕಿಗೆ ಗುರಿಯಾದ ವ್ಯಕ್ತಿಗಳ ವೀರ್ಯ ಅಥವಾ ಯೋನಿದ್ರವದಲ್ಲಿ ಜ್ಹೀಕಾ ವೈರಸ್ ಕಣಗಳು ಇರುವುದು ಪತ್ತೆಯಾಗಿತ್ತು. ಆದರೆ, ವರ್ತಮಾನದಲ್ಲಿ ನಡೆಸಲಾಗಿರುವ ಅಧ್ಯಯನದಲ್ಲಿ ಇತರೆ ಕೆಲವು ಅಂಶಗಳು ಹಾಗೂ ಸಂಭವನೀಯತೆಗಳ ಮೇಲೆ ಗಮನ ಕೆಂದ್ರೀಕರಿಸಲಾಗಿತ್ತು. FASAB ಜರ್ನಲ್ ನಲ್ಲಿ ಪ್ರಕಟಗೊಂಡ ಈ ಅಧ್ಯಯನದಲ್ಲಿ ಸಂಶೋಧಕರು ಜ್ಹೀಕಾ ವೈರಸ್ ಹ್ಯೂಮನ್ ಎಪಿಥಿಲಿಯಲ್ ಸೆಲ್ ಗಳಲ್ಲಿ ಹೇಗೆ ವ್ಯವಹರಿಸಿದೆ ಹಾಗೂ ಅವು ಕೋಶಗಳ ಮೇಲ್ಮೈ ಪ್ರೋಟೀನ್ ನಲ್ಲಿ ವೈರಸ್ ನ ಪ್ರವೇಶದ ಸಂಭವನೀಯತೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಬಹಿರಂಗಗೊಂಡ ಅಂಶಗಳ ಪ್ರಕಾರ ಜ್ಹೀಕಾ ವೈರಸ್ ಕಣಗಳು UFO ರಿಸೆಪ್ಟರ್ ಮಾಧ್ಯಮದ ಮೂಲಕ ವೆಜಾಯಿನ್ ಎಪಿಥೀಲಿಯಲ್ ಸೆಲ್ ನಲ್ಲಿ ಪ್ರವೇಶ ಪಡೆಯುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಪತ್ತೆಯಾಗಿದೆ.