ಕೇರಳದ ತಿರುವನಂತಪುರಮ್ ನಲ್ಲಿ ಜಿಕಾ ವೈರಸ್ ಪ್ರಕರಣ .!

ತಿರುವನಂತಪುರಂನ ಪರಸ್ಸಲ ಮೂಲದ 24 ವರ್ಷದ ಯುವತಿಗೆ ಜಿಕಾ ವೈರಸ್ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಗುರುವಾರ ತಿಳಿಸಿದ್ದಾರೆ.

Last Updated : Jul 8, 2021, 09:02 PM IST
  • ತಿರುವನಂತಪುರಂನ ಪರಸ್ಸಲ ಮೂಲದ 24 ವರ್ಷದ ಯುವತಿಗೆ ಜಿಕಾ ವೈರಸ್ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಗುರುವಾರ ತಿಳಿಸಿದ್ದಾರೆ.
  • ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಜೂನ್ 28 ರಿಂದ ರೋಗಲಕ್ಷಣಗಳನ್ನು ತೋರಿಸಲಾರಂಭಿಸಿದಳು.ಗರ್ಭಿಣಿಯಾಗಿದ್ದ ಮಹಿಳೆ ಜೂನ್ 7 ರಂದು ಮಗುವನ್ನು ಹೆರಿಗೆ ಮಾಡಿದ್ದಾಳೆ.ಆಕೆಯ ಸ್ಥಿತಿ ಈಗಿನಂತೆ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಕೇರಳದ ತಿರುವನಂತಪುರಮ್ ನಲ್ಲಿ ಜಿಕಾ ವೈರಸ್ ಪ್ರಕರಣ .!  title=
ಸಾಂದರ್ಭಿಕ ಚಿತ್ರ

ನವದೆಹಲಿ: ತಿರುವನಂತಪುರಂನ ಪರಸ್ಸಲ ಮೂಲದ 24 ವರ್ಷದ ಯುವತಿಗೆ ಜಿಕಾ ವೈರಸ್ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಗುರುವಾರ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಗೆ ಜೂನ್ 28 ರಿಂದ ರೋಗಲಕ್ಷಣಗಳು ಕಂಡು ಬಂದಿವೆ.ಗರ್ಭಿಣಿಯಾಗಿದ್ದ ಮಹಿಳೆ ಜೂನ್ 7 ರಂದು ಮಗುವನ್ನು ಹೆರಿಗೆ ಮಾಡಿದ್ದಾಳೆ.ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಲೈಂಗಿಕ ಸಂಬಂಧದಿಂದಲೂ ಕೂಡ ಹರಡುತ್ತಂತೆ ಈ ವೈರಸ್, ಬೆಚ್ಚಿಬೀಳಿಸುವ ಸಂಗತಿ ಹೊರಹಾಕಿದ ಅಧ್ಯಯನ

ಆಕೆಗೆ ರಾಜ್ಯದ ಹೊರಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲದಿದ್ದರೂ,ಆಕೆಯ ಮನೆ ತಮಿಳುನಾಡು ಗಡಿಯಲ್ಲಿದೆ.ಒಂದು ವಾರದ ಹಿಂದೆ, ತಾಯಿ ಕೂಡ ಇದೇ ರೀತಿಯ ರೋಗಲಕ್ಷಣಗಳನ್ನು ತೋರಿಸಿದ್ದರು.ಜಿಕಾ ರೋಗಲಕ್ಷಣಗಳು (Zika virus) ಜ್ವರ, ಚರ್ಮದ ದದ್ದುಗಳು ಮತ್ತು ಕೀಲು ನೋವು ಸೇರಿದಂತೆ ಡೆಂಗ್ಯೂಗೆ ಹೋಲುತ್ತವೆ.

ಇದನ್ನೂ ಓದಿ: ರಾಜಸ್ತಾನದಲ್ಲಿ ಭಯ ಹುಟ್ಟಿಸಿದ 29 ಜಿಕಾ ವೈರಸ್ ಪ್ರಕರಣ

ಇನ್ನೂ 13 ಮಂದಿ ವೈರಸ್‌ಗೆ ತುತ್ತಾಗಿರಬಹುದು ಎಂದು ಶಂಕಿಸಲಾಗಿದೆ.ಆದಾಗ್ಯೂ, ರಾಜ್ಯ ಸರ್ಕಾರವು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಿಂದ ಧೃಡಿಕರಣಕ್ಕಾಗಿ ಕಾಯುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News