ನಿಮ್ಮ ಕಠಿಣ ಪರಿಶ್ರಮ ಅನೇಕ ಬಾಹ್ಯಾಕಾಶಯಾನಕ್ಕೆ ಅಡಿಪಾಯ: ಇಸ್ರೋ ವಿಜ್ಞಾನಿಗಳಿಗೆ ರಾಹುಲ್ ಗಾಂಧಿ

ಚಂದ್ರಯಾನ್ -2 ಮೂನ್ ಮಿಷನ್ ಬಗ್ಗೆ ಉತ್ತಮ ಕಾರ್ಯಕ್ಕಾಗಿ ಇಸ್ರೋ ತಂಡಕ್ಕೆ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಸಮರ್ಪಣೆ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ ಎಂದು ರಾಹುಲ್ ಹೇಳಿದ್ದಾರೆ.  

Last Updated : Sep 7, 2019, 11:35 AM IST
ನಿಮ್ಮ ಕಠಿಣ ಪರಿಶ್ರಮ ಅನೇಕ ಬಾಹ್ಯಾಕಾಶಯಾನಕ್ಕೆ ಅಡಿಪಾಯ: ಇಸ್ರೋ ವಿಜ್ಞಾನಿಗಳಿಗೆ ರಾಹುಲ್ ಗಾಂಧಿ  title=

ನವದೆಹಲಿ: ಚಂದ್ರಯಾನ-2 ಮಿಷನ್ ನ ವಿಕ್ರಂ ಲ್ಯಾಂಡರ್ ಆರ್ಬಿಟರ್ ನಿಂದ ಸಂಪರ್ಕ ಕಳೆದುಕೊಂಡ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಸ್ರೋದ ಅದ್ಭುತ ಕಾರ್ಯಕ್ಕಾಗಿ ಅಭಿನಂದಿಸಿದ್ದು, ಈ ಪ್ರಯತ್ನ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಚಂದ್ರಯಾನ್ -2 ಮೂನ್ ಮಿಷನ್ ಬಗ್ಗೆ ಉತ್ತಮ ಕಾರ್ಯಕ್ಕಾಗಿ ಇಸ್ರೋ ತಂಡಕ್ಕೆ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಸಮರ್ಪಣೆ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ. ವಿಕ್ರಮ್‌ನನ್ನು ಚಂದ್ರನ ಮೇಲ್ಮೈನಲ್ಲಿ ಪಾದಾರ್ಪಣೆ ಮಾಡಿಸುವ ಇಸ್ರೋ ತಂಡದ ಪ್ರಯತ್ನ ವ್ಯರ್ಥವಾಗುವುದಿಲ್ಲ. ನಿಮ್ಮ ಕಠಿಣ ಪರಿಶ್ರಮ ಅನೇಕ ಮಹತ್ವಾಕಾಂಕ್ಷೆಯ ಭಾರತೀಯ ಬಾಹ್ಯಾಕಾಶಯಾನಕ್ಕೆ ಅಡಿಪಾಯ ಹಾಕಿದೆ" ಎಂದು ರಾಹುಲ್ ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಸಹ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಅಭಿನಂದಿಸಿದ್ದು, "ಚಂದ್ರಯಾನ-2 ಮಿಷನ್ ಇಸ್ರೋ ವಿಜ್ಞಾನಿಗಳು ಬಾಹ್ಯಾಕಾಶದ ಹೊಸ ಗಡಿಗಳನ್ನು ದಾಟಿ ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡುವಂತೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇಂತಹ ಪ್ರಯತ್ನಗಳು ಮತ್ತಷ್ಟು ಸಾಧನೆಗಳಿಗೆ ಅವಕಾಶ ನೀಡುತ್ತವೆ" ಎಂದು ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

Trending News