ನ. 30ರ ನಂತರ ಈ ಸರ್ಕಾರಿ ಯೋಜನೆಯ ಲಾಭ ಸಿಗಲ್ಲ, ಶೀಘ್ರದಲ್ಲೇ ಲಾಭ ಪಡೆಯಿರಿ

ಪ್ರಧಾನಿ ನರೇಂದ್ರ ಮೋದಿ ಪಿಎಂಜಿಕೆಎ ಅಡಿಯಲ್ಲಿ ಉಚಿತ ಧಾನ್ಯ ವಿತರಣಾ ಯೋಜನೆಯನ್ನು 2020 ಜೂನ್ 30ರಿಂದ ನವೆಂಬರ್ 30ರವರೆಗೆ ವಿಸ್ತರಿಸುವುದಾಗಿ ಘೋಷಿಸಿದ್ದರು. ಜುಲೈನಿಂದ ಜಾರಿಗೆ ಬಂದ ಪಿಎಂಜಿಕೆಎಯ ಎರಡನೇ ಹಂತದಲ್ಲಿ, ಪ್ರತಿ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ 1 ಕೆಜಿ ದ್ವಿದಳ ಧಾನ್ಯಗಳ ಬದಲಿಗೆ 1 ಕೆಜಿ ಸಂಪೂರ್ಣ ಗ್ರಾಂ ನೀಡಲು ಅವಕಾಶ ಕಲ್ಪಿಸಲಾಗಿತ್ತು.

Last Updated : Nov 27, 2020, 08:52 AM IST
  • ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಿಎಂಜಿಕೆಎವೈ (PMGKY) ಯೋಜನೆಯನ್ನು ಘೋಷಿಸಿದರು.
  • ಈ ಯೋಜನೆ ಇದೇ ನವೆಂಬರ್ 30ಕ್ಕೆ ಕೊನೆಗೊಳ್ಳುತ್ತಿದೆ.
  • ಕೇಂದ್ರ ಸರ್ಕಾರದ ಮುಂದೆ ಈ ಯೋಜನೆಯನ್ನು ಮುಂದುವರೆಸುವ ಕುರಿತಾದ ಆಲೋಚನೆ ಇಲ್ಲ.
ನ. 30ರ ನಂತರ ಈ ಸರ್ಕಾರಿ ಯೋಜನೆಯ ಲಾಭ ಸಿಗಲ್ಲ, ಶೀಘ್ರದಲ್ಲೇ ಲಾಭ ಪಡೆಯಿರಿ title=

ನವದೆಹಲಿ: ಲಾಕ್‌ಡೌನ್‌ (Lockdown) ಸಮಯದಲ್ಲಿ ಕೇಂದ್ರ ಸರ್ಕಾರವು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯನ್ನು (Prdhan mantri Gareeb Kalyan Yojana) ದೇಶದಲ್ಲಿ ಸುಮಾರು 80 ಕೋಟಿ ಪಡಿತರ ಚೀಟಿ ಹೊಂದಿರುವವರಿಗೆ ಪ್ರಾರಂಭಿಸಿತ್ತು. ಈ ಯೋಜನೆಯಡಿ ಬಡ ಜನರಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಈ ಯೋಜನೆ ಇದೇ ನವೆಂಬರ್ 30ಕ್ಕೆ  ಕೊನೆಗೊಳ್ಳುತ್ತಿದೆ. ನೀವು ಇನ್ನೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳದಿದ್ದರೆ ಬೇಗ ಪಡೆದುಕೊಳ್ಳಬೇಕು.

ಪಡಿತರ ಪ್ರತಿ ತಿಂಗಳು ಉಚಿತವಾಗಿ ಲಭ್ಯವಿತ್ತು:
ಯೋಜನೆಯಡಿ ಪ್ರತಿ ತಿಂಗಳು 5 ಕೆಜಿ ಗೋಧಿ ಅಥವಾ ಅಕ್ಕಿಯನ್ನು ಉಚಿತವಾಗಿ ವಿತರಿಸುವ ಯೋಜನೆ ನವೆಂಬರ್ 30ಕ್ಕೆ ಕೊನೆಗೊಳ್ಳುತ್ತದೆ. ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ಕೇಂದ್ರ ಸರ್ಕಾರದ (Central Government) ಮುಂದೆ ಈ ಉಚಿತ ಆಹಾರ ವಿತರಣೆಯ ಯೋಜನೆಯನ್ನು ಮುಂದುವರೆಸುವ ಕುರಿತಾದ ಆಲೋಚನೆ ಇಲ್ಲ.

ನಿಮಿಷಗಳಲ್ಲಿ ಆಧಾರ್‌ಗೆ ಒನ್ ನೇಷನ್-ಒನ್ ರೇಷನ್ ಕಾರ್ಡ್ ಲಿಂಕ್ ಮಾಡಲು ಇಲ್ಲಿದೆ ಪ್ರಕ್ರಿಯೆ

ಈ ಯೋಜನೆ ಬಡವರಿಗೆ ವರದಾನ ಎಂದು ಸಾಬೀತಾಗಿದೆ. ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು  ಪಿಎಂಜಿಕೆಎವೈ (PMGKAY) ಯೋಜನೆಯನ್ನು ಘೋಷಿಸಿದರು. ಆರಂಭದಲ್ಲಿ ಪಿಎಂಜಿಕೆಎ ಅಡಿಯಲ್ಲಿ ಪ್ರತಿ ಪಡಿತರ ಚೀಟಿ ಹೊಂದಿರುವವರಿಗೆ 5 ಕೆಜಿ ಧಾನ್ಯ (ಗೋಧಿ / ಅಕ್ಕಿ) ಮತ್ತು 1 ಕೆಜಿ ದ್ವಿದಳ ಧಾನ್ಯಗಳನ್ನು ಪ್ರತಿ ತಿಂಗಳು ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ ನೀಡುವ ಅವಕಾಶವಿತ್ತು. ನಂತರ ಇದನ್ನು ನವೆಂಬರ್ ವರೆಗೆ ವಿಸ್ತರಿಸಲಾಗಿತ್ತು.

ಈ ರೀತಿಯಾಗಿ ನಿಮ್ಮ ಕುಟುಂಬದ ಹೊಸ ಸದಸ್ಯರ ಹೆಸರನ್ನು ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಸೇರಿಸಿ

ಉಚಿತ ಆಹಾರ ವಿತರಣೆಯ ಈ ಯೋಜನೆಯ ವೆಚ್ಚವನ್ನು ಕೇಂದ್ರ ಸರ್ಕಾರವು ಭರಿಸಿದೆ ಮತ್ತು ಈ ಯೋಜನೆಯು ಕರೋನಾ (COVID 19) ಅವಧಿಯಲ್ಲಿ ದೇಶದ ಬಡವರಿಗೆ ವರದಾನವಾಗಿದೆ ಎನ್ನಲಾಗಿದೆ.

Trending News