ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಸರಕಾರದ ನಗರಗಳ ಮರುನಾಮಕರಣ ರಾಜಕೀಯ ಮುಂದುವರೆದಿದೆ ಆದರ ಭಾಗವಾಗಿ ಈಗ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ್ದಾರೆ.

Last Updated : Nov 6, 2018, 06:20 PM IST
ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ ಯೋಗಿ ಆದಿತ್ಯನಾಥ್ title=
file photo

ನವದೆಹಲಿ: ಉತ್ತರ ಪ್ರದೇಶ ಸರಕಾರದ ನಗರಗಳ ಮರುನಾಮಕರಣ ರಾಜಕೀಯ ಮುಂದುವರೆದಿದೆ ಆದರ ಭಾಗವಾಗಿ ಈಗ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ್ದಾರೆ.
 
ಅಯೋಧ್ಯಾ ನಗರದಲ್ಲಿ ದೀಪಾವಳಿ ಆಚರಣೆ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಯೋಗಿ "ಅಯೋಧ್ಯಾ ನಮ್ಮ ಹೆಮ್ಮೆಯ ಸಂಕೇತವಾಗಿದೆ. ಆದ್ದರಿಂದ ಇಂದಿನಿಂದ   ಫೈಝಾಬಾದ್ ಜಿಲ್ಲೆಯನ್ನು ಅಯೋಧ್ಯಾ ಎಂದು ನಾಮಕರಣಮಾಡಲಾಗುವುದು" ಎಂದು ಅವರು ಹೇಳಿದರು.

ಕೇವಲ ಜಿಲ್ಲೆ ಹೆಸರನ್ನು ಬದಲಿಸುವುದಲ್ಲದೆ ಅಯೋಧ್ಯಾ ನಗರದಲ್ಲಿ  ಶೀಘ್ರದಲ್ಲೇ ಲಾರ್ಡ್ ರಾಮ್ ಹೆಸರಿನ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಗುವುದು ಮತ್ತು ವೈದ್ಯಕೀಯ ಕಾಲೇಜನ್ನು ನಿರ್ಮಿಸಿ ಇದನ್ನು ದಶರಥ ಮಹರಾಜರ ಹೆಸರಿಡಲಾಗುವುದು ಎಂದು ಅವರು ತಿಳಿಸಿದರು.

ಈ ಹಿಂದೆ, ಯೋಗಿ ಆದಿತ್ಯನಾಥ್ ಸರ್ಕಾರ ಮುಘಲ್ ಸರಾಯ್ ರೈಲ್ವೆ ಜಂಕ್ಷನ್ನನ್ನು ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಘೋಷಣೆ ಮಾಡಿತ್ತು . 

Trending News