ದೆಹಲಿಯಲ್ಲಿ ಅಪಾಯದ ಮಟ್ಟ ಮೀರಿದ ಯಮುನಾ ನದಿ

ಯಮುನಾ ನದಿಯ ಅಪಾಯದ ಮಟ್ಟ 204.83 ಮೀಟರ್‌ ಆಗಿದ್ದರೆ, ಈಗ 204 ಮೀಟರ್‌ನಲ್ಲಿದೆ.

Last Updated : Sep 25, 2018, 09:31 PM IST
ದೆಹಲಿಯಲ್ಲಿ ಅಪಾಯದ ಮಟ್ಟ ಮೀರಿದ ಯಮುನಾ ನದಿ title=

ನವದೆಹಲಿ: ಉತ್ತರಾಖಂಡ್, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಹರಿಯಾಣದ ಹಾತ್ನಿಕುಂಡ್ ಬ್ಯಾರೇಜ್'ನಿಂದ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ ರಾಜಧಾನಿಯಲ್ಲಿ ಯಮುನಾ ನದಿ ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತಿದೆ.

ಯಮುನಾ ನದಿಯ ಅಪಾಯದ ಮಟ್ಟ 204.83 ಮೀಟರ್‌ ಆಗಿದ್ದರೆ, ಈಗ 204 ಮೀಟರ್‌ನಲ್ಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಅಧಿಕಾರಿಗಳ ತುರ್ತು ಸಭೆ ನಡೆಸಿದ ದೆಹಲಿ ಮುಖ್ಯ ಕಾರ್ಯದರ್ಶಿ ಆಶು ಪ್ರಕಾಶ್, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹತ್ನಿಕುಂಡ್ ಬ್ಯಾರೇಜ್ನಿಂದ ಹೊರಬರುವ ನೀರು, ರಾಷ್ಟ್ರೀಯ ರಾಜಧಾನಿಗೆ ಕುಡಿಯುವ ನೀರನ್ನು ಪೂರೈಸುತ್ತಿದ್ದು, ಸಾಮಾನ್ಯವಾಗಿ ನಗರವನ್ನು ತಲುಪಲು 72 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಇಂದು ಬೆಳಿಗ್ಗೆ 11 ಗಂಟೆ ಸಮಯದಲ್ಲಿ ದೆಹಲಿ ರೈಲ್ವೆ ಬ್ರಿಡ್ಜ್ ಬಳಿ ಯಮುನಾ ನದಿ ನೀರಿನ ಮಟ್ಟ 205.12 ಮೀಟರ್ ಇದ್ದು, ಅಪಾಯದ ಮಟ್ಟವನ್ನೂಮೀರಿತ್ತು ಎಂದು ಪ್ರವಾಹ ನಿಯಂತ್ರಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 1978 ರಲ್ಲಿ ದೆಹಲಿಯಲ್ಲಿ ಯಮುನಾ ನದಿ ನೀರಿನ ಮಟ್ಟ 207.49 ಮೀಟರುಗಳನ್ನು ತಲುಪಿದ ಸಂದರ್ಭದಲ್ಲಿ ಪ್ರವಾಹ ಉಂಟಾಗಿತ್ತು.

Trending News