World's Tallest Railway Bridge: ಮಣಿಪುರದಲ್ಲಿ ನಿರ್ಮಾಣವಾಗುತ್ತಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ

ಮಣಿಪುರದಲ್ಲಿ ವಿಶ್ವದ ಅತಿ ಎತ್ತರದ ಸೇತುವೆಯ  ಕಂಬವನ್ನು ನಿರ್ಮಿಸಲಾಗುತ್ತಿದೆ. 141 ಮೀಟರ್‌ಗಳ (462 ಅಡಿ) ಎತ್ತರದಲ್ಲಿ ನಿರ್ಮಿಸಲಾಗುತ್ತಿರುವ ಈ ಸೇತುವೆಯ ಕಂಬವು ಯುರೋಪಿನ ಮಾಂಟೆನೆಗ್ರೊದ ಮಾಲಾ-ರಿಜೆಕಾ ವಯಾಡಕ್ಟ್ ಪಿಯರ್‌ ಬ್ರಿಡ್ಜ್‌ನ ಎತ್ತರದ ದಾಖಲೆಯನ್ನು ಮೀರಿಸುತ್ತಿದೆ. 

Written by - Zee Kannada News Desk | Last Updated : Nov 28, 2021, 01:23 PM IST
  • ಮಣಿಪುರದಲ್ಲಿ ನಿರ್ಮಾಣವಾಗುತ್ತಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ
  • 111 ಕಿ. ಮೀ ಉದ್ದದ ಈ ರೈಲ್ವೆ ಮಾರ್ಗ ಸುಮಾರು 61 ಸುರಂಗಗಳನ್ನು ಒಳಗೊಂಡಿದೆ
  • ಅಂದಾಜು 374 ಕೋಟಿ ರೂ. ವೆಚ್ಚದ ಈ ಸೇತುವೆಯ ನಿರ್ಮಾಣ ಕಾರ್ಯ 2023ರ ವೇಳೆಗೆ ಪೂರ್ಣಗೊಳ್ಳಲಿದೆ
World's Tallest Railway Bridge: ಮಣಿಪುರದಲ್ಲಿ ನಿರ್ಮಾಣವಾಗುತ್ತಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ title=
ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ

ಇಂಫಾಲ್: ಭಾರತೀಯ ರೈಲ್ವೆಯು ಈಶಾನ್ಯ ರಾಜ್ಯ ಮಣಿಪುರದಲ್ಲಿ ವಿಶ್ವದ ಅತಿ ಎತ್ತರದ ಸೇತುವೆಯ  ಕಂಬವನ್ನು (World's tallest railway bridge pier) ನಿರ್ಮಿಸುತ್ತಿದೆ. ಇದು 111 ಕಿ.ಮೀ ಉದ್ದದ ಜಿರಿಬಾಮ್-ಇಂಫಾಲ್ ರೈಲ್ವೆ ಯೋಜನೆಯ(Jiribam-Imphal project) ಭಾಗವಾಗಿದೆ.

ಮಣಿಪುರದ ಮಹತ್ವಾಕಾಂಕ್ಷೆಯ ಯೋಜನೆಯು ಮಣಿಪುರದ ರಾಜಧಾನಿಯನ್ನು ದೇಶದ ಬ್ರಾಡ್ ಗೇಜ್ ಜಾಲದೊಂದಿಗೆ (broad gauge network)ಸಂಪರ್ಕಿಸಲು 111 ಕಿಮೀ ಉದ್ದದ ಜಿರಿಬಾಮ್-ಇಂಫಾಲ್ ರೈಲು ಮಾರ್ಗದ ಭಾಗವಾಗಿದೆ. 141 ಮೀಟರ್‌ಗಳ (462 ಅಡಿ) ಎತ್ತರದಲ್ಲಿ ನಿರ್ಮಿಸಲಾಗುತ್ತಿರುವ ಈ ಸೇತುವೆಯ ಕಂಬವು ಯುರೋಪಿನ ಮಾಂಟೆನೆಗ್ರೊದ ಮಾಲಾ-ರಿಜೆಕಾ ವಯಾಡಕ್ಟ್ ಪಿಯರ್‌ ಬ್ರಿಡ್ಜ್‌ನ (Mala-Rijeka viaduct) ಎತ್ತರದ ದಾಖಲೆಯನ್ನು ಮೀರಿಸುತ್ತಿದೆ. ಮಾಂಟೆನೆಗ್ರೊದ ಮಾಲಾ-ರಿಜೆಕಾ ವಯಾಡಕ್ಟ್ ಪಿಯರ್‌ ಬ್ರಿಡ್ಜ್‌ ನ ಎತ್ತರ 139 ಮೀಟರ್ ಇದೆ.

ಇದನ್ನೂ ಓದಿ: ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ವಾಹನಕ್ಕೆ ಟ್ರಕ್ ಡಿಕ್ಕಿ , 18 ಜನರ ದುರ್ಮರಣ

ಪ್ರಪಂಚದಲ್ಲಿಯೇ ಅತಿ ಎತ್ತರದ ರೈಲು ಸೇತುವೆ ನಿರ್ಮಾಣ(Railway Bridge Pier) ಕಾರ್ಯವನ್ನು ಈಶಾನ್ಯ ಗಡಿ ರೈಲ್ವೆ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿದೆ. ಈ ಯೋಜನೆಯ ಪೂರ್ಣಗೊಳ್ಳುವಿಕೆಯೊಂದಿಗೆ 111 ಕಿಮೀ ದೂರವನ್ನು 2 ರಿಂದ 2.5 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಪ್ರಸ್ತುತ ಜಿರಿಬಾಮ್-ಇಂಫಾಲ್ (NH-37) ನಡುವಿನ ಅಂತರವು 220 ಕಿಮೀ ಆಗಿದ್ದು, ಇದು ಸುಮಾರು 10 ರಿಂದ 12 ಗಂಟೆ ತೆಗೆದುಕೊಳ್ಳುತ್ತದೆ. ನಿರ್ಮಾಣ ಪೂರ್ಣಗೊಂಡ ನಂತರ ನೋನಿ ಕಣಿವೆಯನ್ನು ದಾಟುವ ಈ ಸೇತುವೆಯು ವಿಶ್ವದ ಅತಿ ಎತ್ತರದ ಕಂಬವಿರುವ ಸೇತುವೆಯಾಗಲಿದೆ ಎಂದು ಯೋಜನೆಯ ಮುಖ್ಯ ಇಂಜಿನಿಯರ್ ಸಂದೀಪ್ ಶರ್ಮಾ ತಿಳಿಸಿದರು.

ಈಗಾಗಲೇ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, 2ನೇ ಹಂತದ ಕೆಲಸ ಸುಮಾರು ಶೇ.98ರಷ್ಟು ಪೂರ್ಣಗೊಂಡಿದೆ. ಫೆಬ್ರವರಿ 2022ರ ವೇಳೆಗೆ ಅದೂ ಸಹ ಮುಕ್ತಾಯವಾಗಲಿದೆ. 3ನೇ ಹಂತವು ನವೆಂಬರ್ 2022ರೊಳಗೆ ಪೂರ್ಣಗೊಳ್ಳಲಿದೆ. ಪುಲ್‌ನಿಂದ ಇಂಫಾಲ್ ಕಣಿವೆಯವರೆಗೆ ಸೇತುವೆ ವಿಸ್ತರಿಸಿರುವ 4ನೇ ಮತ್ತು ಕೊನೆಯ ಹಂತದ ಕಾರ್ಯ ಡಿಸೆಂಬರ್ 2023 ವೇಳೆಗೆ ಮುಗಿಯಲಿದೆ ಎಂದು  ಸಂದೀಪ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ರೂಪ ಬದಲಿಸುವ ಮೂಲಕ ವಿನಾಶವನ್ನುಂಟು ಮಾಡುತ್ತಿರುವ ಕೊರೊನಾ ವೈರಸ್!: ಕೇಂದ್ರದ ಸಿದ್ಧತೆ ಹೇಗಿದೆ..?

ಸೇತುವೆಯ ನಿರ್ಮಾಣದಲ್ಲಿ ಎದುರಿಸುತ್ತಿರುವ ಅಡೆತಡೆಗಳ ಬಗ್ಗೆ ಮಾತನಾಡಿದ ಶರ್ಮಾ, ಮಳೆಗಾಲದಲ್ಲಿ NH-37 ನಲ್ಲಿ ಆಗಾಗ ಭೂಕುಸಿತಗಳು ಸಂಭವಿಸುತ್ತವೆ. ಇದು ಈ ಸ್ಥಳಕ್ಕೆ ಏಕೈಕ ಮಾರ್ಗವಾಗಿದೆ. ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಇಲ್ಲಿ ಹೆಚ್ಚು ಮಳೆಯಾಗುತ್ತದೆ. ಆ ಸಮಯದಲ್ಲಿ ಇಲ್ಲಿ ಕೆಲಸ ಮಾಡುವುದು ಕಷ್ಟ ಎಂದರು.  111 ಕಿ. ಮೀ ಉದ್ದದ ಈ ರೈಲ್ವೆ ಮಾರ್ಗ ಸುಮಾರು 61  ಸುರಂಗಗಳನ್ನು ಒಳಗೊಂಡಿದೆ. ಸೇತುವೆಯ ಅಂದಾಜು ವೆಚ್ಚ 374 ಕೋಟಿ ರೂ. ಆಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News