ಸ್ನೇಹಿತೆ ಅಪ್ಪನಿಂದಲೇ ಯುವತಿ ಮೇಲೆ ಅತ್ಯಾಚಾರ!

ಸ್ನೇಹಿತೆಯ ತಂದೆಯಿಂದಲೇ 18 ವರ್ಷದ ಯುವತಿಯೊಬ್ಬಳು ಅತ್ಯಾಚಾರಕ್ಕೊಳಗಾದ ಘಟನೆ ಗುರುಗ್ರಮದ ಬೆಲೀರಿಯಾದ ಅಪಾರ್ಟ್'ಮೆಂಟ್ ನಲ್ಲಿ ನಡೆದಿದೆ.

Last Updated : Jul 8, 2018, 12:48 PM IST
ಸ್ನೇಹಿತೆ ಅಪ್ಪನಿಂದಲೇ ಯುವತಿ ಮೇಲೆ ಅತ್ಯಾಚಾರ! title=

ಗುರುಗ್ರಾಮ: ತನ್ನ ಸ್ನೇಹಿತೆಯ ತಂದೆಯಿಂದಲೇ 18 ವರ್ಷದ ಯುವತಿಯೊಬ್ಬಳು ಅತ್ಯಾಚಾರಕ್ಕೊಳಗಾದ ಘಟನೆ ಗುರುಗ್ರಾಮದ ಬೈಲರಿ ಪ್ರದೇಶದ ಅಪಾರ್ಟ್'ಮೆಂಟ್ ನಲ್ಲಿ ನಡೆದಿದೆ.

ತನ್ನ ಸ್ನೇಹಿತೆ ಮತ್ತು ಆಕೆಯ ತಂದೆಯೊಂದಿಗೆ ಸೈಬರ್ ಹಬ್'ಗೆ ಊಟಕ್ಕೆಂದು ತೆರಳಿದ್ದಾಗ ಸ್ನೇಹಿತೆ ತಂದೆ ಇಬ್ಬರಿಗೂ ಮದ್ಯಪಾನ ಮಾಡುವಂತೆ ಹೇಳಿದ್ದಾನೆ. ಹಿಂದೆದೂ ಆಲ್ಕೋಹಾಲ್ ಸೇವಿಸದ ಯುವತಿ ಅಂದು ಸೇವಿಸಿದ್ದಾಳೆ. ನಂತರ ಎಲ್ಲರು ಮನೆಗೆ ತೆರಳಿ ಮಲಗಿದ್ದಾರೆ. ಆದರೆ ಸ್ನೇಹಿತೆಯ ತಂದೆ ತನ್ನ ಮಗಳೊಂದಿಗೆ ಮಲಗಿದ್ದ ಆಕೆಯನ್ನು ಬೆಳಗಿನ ಜಾವ 4ರಿಂದ 5 ಗಂಟೆ ಸುಮಾರಿಗೆ ತನ್ನ ಕೊಠಡಿಗೆ ಹೊತ್ತೊಯ್ದು ಅತ್ಯಾಚಾರ ಮಾಡಿರುವುದಾಗಿ ಸಂತ್ರಸ್ಥೆ ದೂರಿನಲ್ಲಿ ತಿಳಿಸಿದ್ದಾರೆ. 

"ತನ್ನ ಸ್ನೇಹಿತೆಯ ತಂದೆ ಜೊತೆಯಲ್ಲಿ ಬರುತ್ತಾರೆ ಎಂಬ ಒಂದೇ ಕಾರಣಕ್ಕೆ ತನ್ನ ತಾಯಿ ಹೊರಗಡೆ ಊಟಕ್ಕೆ ಹೋಗಲು ಅನುಮತಿ ನೀಡಿದ್ದರು. ಆದರೆ ಅದೇ ನನ್ನ ಜೀವನಕ್ಕೆ ಮುಳುವಾಗುತ್ತದೆ ಎಂದು ತಿಳಿದಿರಲಿಲ್ಲ. ಆತ ನನ್ನ ಮೇಲೆ ಅತ್ಯಾಚಾರ ಮಾಡಲು ಮೊದಲೇ ಪ್ಲಾನ್ ಮಾಡಿದ್ದರು ಅನಿಸುತ್ತದೆ. ಹಾಗಾಗಿ ಆಲ್ಕೋಹಾಲ್ ಕುಡಿಯಲು ಹೇಳಿದರು. ಅತ್ಯಾಚಾರದ ನಂತರ ವಿಚಾರ ಹೊರಗಡೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಸಿದರು" ಎಂದು ಅತ್ಯಾಚರಕ್ಕೊಳಗಾದ ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

45 ವರ್ಷದ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂದಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ. ಈಗಾಗಲೇ ಆರೋಪಿಯ ವಿರುದ್ಧ ಆತನ ಪತ್ನಿ ಕ್ರೌರ್ಯ ನಡವಳಿಕೆಗೆ ಸಂಬಂಧಿಸಿದಂತೆ ಸೆಕ್ಟರ್ 53ರ ಪೋಲಿಸ್ ಠಾಣೆಯಲ್ಲಿ ಕಳೆದ ತಿಂಗಳು ದೂರು ದಾಖಲಿಸಿರುವುದಾಗಿ ಮಹಿಳಾ ಪೋಲಿಸ್ ಅಧಿಕಾರಿ ಪೂನಂ ಹೂಡಾ ತಿಳಿಸಿದ್ದಾರೆ.

ಸಂತ್ರಸ್ತೆ ಕಾನೂನು ವಿದ್ಯಾರ್ಥಿಯಾಗಿದ್ದು, ಆಕೆ ಹಾಗೂ ಆರೋಪಿಯ ಮಗಳು ಶಾಳಾ ದಿನಗಳಿಂದಲೂ ಗೆಳೆತಿಯರು. 3ನೇ ತರಗತಿಯಿದ್ದಾಗಿನಿಂದಲೂ ಯುವತಿ ತನ್ನ ಸ್ನೇಹಿತೆಯ ತಂದೆಯನ್ನು ಅಂಕಲ್ ಎನ್ನುತ್ತಲೇ ಪ್ರೀತಿಯಿಂದ ಕಾಣುತ್ತಿದ್ದಳು. ಆದರೆ ಆತ ಮಗಳಂತವಳ ಮೇಲೆಯೇ ಅಟ್ಟಹಾಸ ಮೆರೆದಿದ್ದಾನೆ. 

Trending News