ನವದೆಹಲಿ: ಕೊರೊನಾ ವೈರಸ್ (Corona Virus) ಬಿಕ್ಕಟ್ಟಿನ ಮಧ್ಯೆ, ಇಂದು (ಜನವರಿ 25 ರಂದು) ಬಹಳ ದಿನಗಳ ನಂತರ ನಿಟ್ಟುಸಿರು ಬಿಡುವ ಸುದ್ದಿ ಬಂದಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಇಂದು ಸುಮಾರು 50 ಸಾವಿರ ಕಡಿಮೆ ಪ್ರಕರಣಗಳು ವರದಿಯಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2 ಲಕ್ಷ 55 ಸಾವಿರದ 874 ಹೊಸ ಕೊರೊನಾ ವೈರಸ್ (Covid-19) ಪ್ರಕರಣಗಳು ವರದಿಯಾಗಿವೆ. 614 ಸೋಂಕಿತರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಆದರೆ, ಈ ಅವಧಿಯಲ್ಲಿ 2 ಲಕ್ಷದ 67 ಸಾವಿರದ 753 ರೋಗಿಗಳು ಚೇತರಿಸಿಕೊಂಡಿದ್ದಾರೆ.
#Unite2FightCorona#OmicronVariant
➡️ 2,55,874 New Cases reported in last 24 hours. pic.twitter.com/PJW5Kdl3t9
— Ministry of Health (@MoHFW_INDIA) January 25, 2022
ಪ್ರಸ್ತುತ ದೇಶದಲ್ಲಿ 22 ಲಕ್ಷ 36 ಸಾವಿರದ 842 ಸಕ್ರಿಯ ಕೊರೊನಾ ವೈರಸ್ ಪ್ರಕರಣಗಳಿವೆ. ಅದೇ ಸಮಯದಲ್ಲಿ, ದೇಶದಲ್ಲಿ ಸಕಾರಾತ್ಮಕತೆಯ ದರವು ಶೇಕಡಾ 15.52 ಕ್ಕೆ ಏರಿದೆ.
ಕೊರೊನಾ ವೈರಸ್ ಪರೀಕ್ಷೆ (Corona Test) ಕುರಿತು ಮಾತನಾಡುತ್ತಾ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 16 ಲಕ್ಷ 49 ಸಾವಿರದ 108 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತದಲ್ಲಿ ಇದುವರೆಗೆ 71 ಕೋಟಿ 88 ಲಕ್ಷ ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.
ಭಾರತದಲ್ಲಿಯೂ ಕೊರೊನಾ ವೈರಸ್ ವಿರುದ್ಧ ಲಸಿಕೆ (Corona Vaccine) ಅಭಿಯಾನವು ಅತ್ಯಂತ ವೇಗವಾಗಿ ನಡೆಯುತ್ತಿದೆ. ಇಲ್ಲಿಯವರೆಗೆ, ದೇಶದಲ್ಲಿ 162 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
ಇದನ್ನೂ ಓದಿ: Omicron Symptoms in Kids : ಮಕ್ಕಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ಅದು ಒಮಿಕ್ರಾನ್ ಆಗಿರಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.