ಮನೆಯಲ್ಲಿಯೇ ಕುಳಿತು mAadhaar ಮೂಲಕ ನೀವೂ ಮಾಡಬಹುದು ಈ ಕೆಲಸ

ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ(UIDAI) ಜಾರಿಗೊಳಿಸಿರುವ mAadhaar ಮೊಬೈಲ್ ಆಪ್ ಬಳಸಿ ನೀವು ಆಧಾರ್ ಕಾರ್ಡ್ ಗೆ ಸಂಬಂಧಿಸಿ ಎಲ್ಲ ಕೆಲಸಗಳನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲ ಇವುಗಳಲ್ಲಿನ ಕೆಲ ಕಾರ್ಯಗಳನ್ನು ನೀವು ಮನೆಯಲ್ಲಿಯೇ ಕುಳಿತು ಮಾಡಬಹುದಾಗಿದೆ.

Last Updated : Jan 12, 2020, 06:51 PM IST
ಮನೆಯಲ್ಲಿಯೇ ಕುಳಿತು mAadhaar ಮೂಲಕ ನೀವೂ ಮಾಡಬಹುದು ಈ ಕೆಲಸ title=

ನವದೆಹಲಿ: ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ(UIDAI) ಜಾರಿಗೊಳಿಸಿರುವ mAadhaar ಮೊಬೈಲ್ ಆಪ್ ಬಳಸಿ ನೀವು ಆಧಾರ್ ಕಾರ್ಡ್ ಗೆ ಸಂಬಂಧಿಸಿ ಎಲ್ಲ ಕೆಲಸಗಳನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲ ಇವುಗಳಲ್ಲಿನ ಕೆಲ ಕಾರ್ಯಗಳನ್ನು ನೀವು ಮನೆಯಲ್ಲಿಯೇ ಕುಳಿತು ಮಾಡಬಹುದಾಗಿದೆ.

ಗೂಗಲ್ ಪ್ಲೇ ಸ್ಟೋರ್ ನಿಂದ ನೀವು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಲ್ಲಿ mಆಧಾರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದಾಗಿದೆ. ಈ ಆಪ್ ಒಟ್ಟು 12 ಭಾಷೆಗಳ ಸಪೋರ್ಟ್ ಹೊಂದಿದೆ. ಅವುಗಳಲ್ಲಿ ಹಿಂದಿ, ಬಂಗಾಳಿ, ಓಡಿಯಾ, ಉರ್ದು, ತೆಲುಗು, ತಮಿಳು, ಮಲಯಾಳಂ, ಕನ್ನಡ, ಗುಜರಾತಿ, ಪಂಜಾಬಿ ಹಾಗೂ ಅಸ್ಸಾಮಿಯಾ ಭಾಷೆಗಳು ಶಾಮೀಲಾಗಿವೆ.

ಇತ್ತೀಚೆಗಷ್ಟೇ ಆಧಾರ್ ಗೆ ಸಂಬಂಧಿಸಿದ ವಿವರಗಳನ್ನು ಡೌನ್ಲೋಡ್ ಮಾಡಲು UIDAI, mAadhaar ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು. ಈ ಆಪ್ ನಲ್ಲಿ ಕಾರ್ಡ್ ಧಾರಕರ ಆಧಾರ್ ಸಂಖ್ಯೆ, ಹೆಸರು, ಜನ್ಮದಿನಾಂಕ, ಲಿಂಗ, ವಿಳಾಸ ಹಾಗೂ ಭಾವಚಿತ್ರಗಳಂತಹ ಡೇಟಾ ಇದೆ.

ಈ mAadhaar ವಿಶೇಷತೆ ಎಂದರೆ, ಆಧಾರ್ ಗೆ ಸಂಬಂಧಿಸಿದ ಯಾವುದೇ ಸೇವೆಯನ್ನು ಪಡೆಯಲು ನೀವು ಈ ಆಪ್ ಅನ್ನು ಬಳಸಬಹುದು. ಇದನ್ನು ಬಳಸಿ ನೀವು ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಲಾಕ್ ಮತ್ತು ಅನ್ಲಾಕ್ ಕೂಡ ಮಾಡಬಹುದಾಗಿದೆ.

ಯಾವುದೇ ಕಾರಣದಿಂದ ಒಂದು ವೇಳೆನಿಮಗೆ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಬರದೆಹೋದಲ್ಲಿ, ನೀವು mAadhaar ನ TOTP ಬಳಸಬಹುದಾಗಿದೆ. ಇದರಿಂದ ನಿಮ್ಮ ಮಾಹಿತಿ ಲೀಕ್ ಆಗುವ ಸಾಧ್ಯತೆ ಕೂಡ ಕಡಿಮೆ.

 mAadhaar ಆಪ್ ನಲ್ಲಿಯೇ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. ಅಷ್ಟೇ ಅಲ್ಲ ನಿಮ್ಮ ಆಧಾರ್ ಕಾರ್ಡ್ ನ  ಪ್ರಿಂಟ್ ಗಾಗಿ ಕೂಡ ಅಪ್ಲೈ ಮಾಡಬಹುದು. ಈ ಆಪ್ ಬಳಸಿ ನೀವು ಯಾವಾಗ ಬೇಕಾದರೂ ಕೂಡ ಇ-ಕೆವೈಸಿ ಡೌನ್ಲೋಡ್ ಮಾಡಬಹುದಾಗಿದೆ. ಈ ಆಪ್ ಮೂಲಕ ನೀವು ನಿಮ್ಮ ಆಧಾರ್ ನ ಸತ್ಯಾಸತ್ಯತೆಯನ್ನು ಕೂಡ ತಿಳಿಯಬಹುದು.

 mAadhaar ಆಪ್ ಬಳಸಿ ನೀವು ನಿಮ್ಮ QR ಕೋಡ್ ಸ್ಕ್ಯಾನ್ ಮಾಡಬಹುದು, UID ಪಡೆದುಕೊಳ್ಳಬಹುದು. ನಿಮ್ಮ ವಿಳಾಸದ ವ್ಯಾಲಿಡೆಶನ್ ಲೆಟರ್ ಗಾಗಿ ಕೂಡ ನೀವು ಅಪ್ಲೈ ಮಾಡಬಹುದು. ಅಷ್ಟೇ ಅಲ್ಲ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಲಾಕ್ ಮತ್ತು ಅನ್ಲಾಕ್ ಕೂಡ ಮಾಡಬಹುದು.

ಆಧಾರ್ ಗೆ ಸಂಬಂಧಿಸಿದ ಯಾವುದೇ ಸೇವೆಗೂ ಕೂಡ ನೀವು mAadhaar ಬಳಸಬಹುದು. ಹೊಸ mAadhaar ಆಪ್ ಮೂಲಕ ನೀವು ನಿಮ್ಮ ಮೇಲ್/ಇಮೇಲ್ ಕೂಡ ವೆರಿಫೈ ಮಾಡಬಹುದು. ಇದರಿಂದ ನೀವು ನಿಮ್ಮ ವಿಳಾಸ ಕೂಡ ಚೇಂಜ್ ಮಾಡಬಹುದು.

ಇದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಕೂಡ ಡೌನ್ಲೋಡ್ ಮಾಡಬಹುದು. ಇದಕ್ಕಾಗಿ ನಿಮ್ಮ ಬಳಿ ನಿಮ್ಮ ಆಧಾರ್ ಸಂಖ್ಯೆ ಇರುವುದು ಅಗತ್ಯವಾಗಿದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿ mAadhaar ಆಪ್ ಮೂಲಕ uidai.gov.in ಗೆ ಭೇಟಿ ನೀಡಿ, ಡೌನ್ಲೋಡ್ ಆಧಾರ್ ಮೇಲೆ ಕ್ಲಿಕ್ಕಿಸಬೇಕು.

Trending News