ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆಯೇ? ಇಲ್ಲಿದೆ ಆರೋಗ್ಯ ಸಚಿವರ ಮಹತ್ವದ ಹೇಳಿಕೆ

ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.  

Last Updated : Jun 12, 2020, 02:52 PM IST
ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆಯೇ? ಇಲ್ಲಿದೆ ಆರೋಗ್ಯ ಸಚಿವರ ಮಹತ್ವದ ಹೇಳಿಕೆ title=

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೋನಾವೈರಸ್ (Coronavirus) ಶೀಘ್ರವಾಗಿ ಹರಡುತ್ತಿದೆ. ಏತನ್ಮಧ್ಯೆ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ಬಗ್ಗೆಯೂ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ರಾಜ್ಯದಲ್ಲಿ ಲಾಕ್‌ಡೌನ್ (Lockdown) ಮುಂದುವರೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.  ದೆಹಲಿಯಲ್ಲಿ ಕರೋನಾ ವೈರಸ್‌ನಿಂದಾಗಿ ಸಾವಿನ ಸರಿಯಾದ ಅಂಕಿ ಅಂಶಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈನ್ ಅವರು ಸಾವಿನ ಅಂಕಿ ಅಂಶಗಳ ಬಗ್ಗೆ ಎಂಸಿಡಿ ಗೊಂದಲವನ್ನು ಹರಡುತ್ತಿದ್ದಾರೆ ಎಂದು ಹೇಳಿದರು.

ಮುಂದಿನ ವರ್ಷ ಲಭ್ಯವಾಗಲಿದೆಯಂತೆ ಕರೋನಾ ಲಸಿಕೆ

ದೆಹಲಿಯಲ್ಲಿ ಕರೋನಾ ಸೋಂಕಿನಿಂದಾಗಿ 2098 ಜನರು ಸಾವನ್ನಪ್ಪಿದ್ದಾರೆ ಎಂದು ಎಂಸಿಡಿ ನೀಡಿರುವ ಅಂಕಿ ಅಂಶಗಳ ಬಗ್ಗೆ ಪ್ರತಿಕ್ರಿಯಿಸಿರುವ ಜೈನ್ ಕರೋನಾವೈರಸ್ ಕೋವಿಡ್ -19 (Covid-19)  ಸೋಂಕಿನಿಂದಾಗಿ ಅವರು ಸಾವಿನ ಮಾಹಿತಿಯನ್ನು ನಮಗೆ ಏಕೆ ಕಳುಹಿಸಲಿಲ್ಲ? ಹೆಸರು, ವಯಸ್ಸು ಮತ್ತು ವರದಿಯಂತಹ ಎಲ್ಲಾ ಮಾಹಿತಿಯ ಅಗತ್ಯವಿದೆ. ಕೋವಿಡ್ ಧನಾತ್ಮಕ ವರದಿಯೊಂದಿಗೆ ಸತ್ತವರ ಪಟ್ಟಿಯನ್ನು ಕೇಳಿ ಎಂದರು.

ದೆಹಲಿ-ಎನ್‌ಸಿಆರ್‌ನಲ್ಲಿ ಭೂಕಂಪದ ಆಘಾತ: ಎನ್‌ಸಿಎಸ್ ಹೇಳಿದ್ದೇನು?

1918 ರ ಬಳಿಕ ಸಂಭಿವಿಸಿರುವ ದೊಡ್ಡ ಸಾಂಕ್ರಾಮಿಕ ರೋಗ ಇದಾಗಿದೆ. ಕರೋನಾ ವೈರಸ್ ಬಹಳ ಬೇಗನೆ ಹರಡುತ್ತದೆ. ಮುಂಬರುವ ದಿನಗಳಿಗೆ ನಾವೇ ತಯಾರಿ ನಡೆಸುತ್ತಿದ್ದೇವೆ ಮತ್ತು ನಾವು ಕೇಂದ್ರ ಸರ್ಕಾರದ ಸಹಾಯವನ್ನೂ ಕೋರಿದ್ದೇವೆ. ಕೋವಿಡ್-19 ಅನ್ನು ಎದುರಿಸಲು ನಾವು ವ್ಯಾಪಕ ಸಿದ್ಧತೆಗಳನ್ನು ಮಾಡುತ್ತಿದ್ದೇವೆ ಎಂದವರು ಮಾಹಿತಿ ನೀಡಿದರು.

ಕರೋನಾ ಕಂಟಕ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 25 ನಿಮಿಷಕ್ಕೆ ಒಂದು ಸಾವು

ಕರೋನಾ ಸೋಂಕಿನಿಂದ ದೆಹಲಿಯ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿದೆ. ಇಲ್ಲಿಯವರೆಗೆ 34687 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. 20871 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 12731 ಜನರು ಚೇತರಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಈ ಕಾಯಿಲೆಯಿಂದ ಇದುವರೆಗೆ 1085 ಸಾವುಗಳು ಸಂಭವಿಸಿವೆ. ದೆಹಲಿಯ ಪರಿಸ್ಥಿತಿ ಎಷ್ಟು ಭೀಕರವಾಗಿದೆಯೆಂದರೆ, ಪ್ರತಿ 25 ನಿಮಿಷಗಳಿಗೊಮ್ಮೆ ಕರೋನಾ ಸೋಂಕಿನಿಂದ ರೋಗಿಯು ಸಾಯುತ್ತಿದ್ದಾನೆ.
 

Trending News