LIC ಮಾರಾಟವಾಗಲಿದೆಯೇ? ನಿಮ್ಮ ಬಳಿಯೂ ಪಾಲಸಿ ಇದೆಯೇ? ಇದನ್ನು ತಿಳಿಯಿರಿ

ಒಂದು ವೇಳೆ LIC ಕಂಪನಿ ಮಾರಾಟವಾದರೆ, ಪಾಲಸಿದಾರರ ಹಣ ಯಾರು ವಾಪಸ್ ನೀಡಲಿದ್ದಾರೆ?

Last Updated : Feb 3, 2020, 06:21 PM IST
LIC ಮಾರಾಟವಾಗಲಿದೆಯೇ? ನಿಮ್ಮ ಬಳಿಯೂ ಪಾಲಸಿ ಇದೆಯೇ? ಇದನ್ನು ತಿಳಿಯಿರಿ title=

ನವದೆಹಲಿ: ಫೆಬ್ರವರಿ 1, 2020ರಂದು ಬಜೆಟ್ ಮಂಡಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರ LIC ಕಂಪನಿಯಲ್ಲಿನ ಕೇಂದ್ರ ಸರ್ಕಾರದ ಪಾಲುದಾರಿಕೆಯನ್ನು ಮಾರಾಟ ಮಾಡುವುದಾಗಿ ಘೋಷಿಸಿದ್ದರು. ಈ ಸುದ್ದಿ ಹರಡುತ್ತಿದ್ದಂತೆ ಸಾಮಾನ್ಯ ಜನರ ಮಧ್ಯೆ ಪ್ರಶ್ನೆಯೊಂದು ಉದ್ಭವಿಸಿದೆ. LIC ಪಾಲಸಿ ಹೊಂದಿದವರ ವಿಮೆ ಏನಾಗಲಿದೆ? ಕಂಪನಿ ಮಾರಾಟವಾದ ಬಳಿಕ ಪಾಲಸಿ ಹಣ ಯಾರು ನೀಡಲಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

LIC ಕಂಪನಿಯಲ್ಲಿರುವ ಶೇ.5 ರಿಂದ ಶೇ.10ರಷ್ಟು ಪಾಲುದಾರಿಕೆಯನ್ನು ಸರ್ಕಾರ ಮಾರಾಟ ಮಾಡಲಿದೆ
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ಮಾರುಕಟ್ಟೆಯಿಂದ ಹಣ ಪಡೆಯಲು ಸರ್ಕಾರ ತನ್ನ ಯಾವುದಾದರೊಂದು ಕಂಪನಿಯ ಪಾಲುದಾರಿಕೆಯನ್ನು ಮಾರಾಟ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರ LICಯಲ್ಲಿನ ತನ್ನ ಪಾಲುದಾರಿಕೆಯ ಸ್ವಲ್ಪ ಭಾಗವನ್ನು ಮಾತ್ರ ಮಾರಾಟ ಮಾಡಲಿದೆ. ಇದರಿಂದ ಪಾಲಸಿ ಹೊಂದಿದವರಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.

ವಿಮಾಧಾರಕರಿಗೆ ಸಿಗಲಿದೆ ಸಂಪೂರ್ಣ ಹಣ
LIC ಪಾಲುದಾರಿಕೆಯನ್ನು ಮಾರಾಟ ಮಾಡುವ ಪ್ರಕ್ರಿಯೆಯಿಂದ ಜನಸಾಮಾನ್ಯರು ಹೆದರುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ನಿಮ್ಮ ಪಾಲಸಿಯ ಅಂತಿಮ ತಿಥಿ ಮುಗಿದ ಬಳಿಕ ನೀವು ಸಂಪೂರ್ಣ ಹಣವನ್ನು ಮರಳಿಪಡೆಯಬಹುದಾಗಿದೆ. ಸದ್ಯ ಚಾಲ್ತಿಯಲ್ಲಿರುವ ಯಾವುದೇ ಪಾಲಸಿಯ ಮೇಲೆ ಮಾರಾಟ ಪ್ರಕ್ರಿಯೆ ಪ್ರಭಾವ ಬೀರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

2020ನೇ ಸಾಲಿನ ಬಜೆಟ್ ನಲ್ಲಿ ಈ ಕುರಿತು ಘೋಷಣೆಯಾಗಿತ್ತು
2020ನೇ ಸಾಲಿನ ಬಜೆಟ್ ನಲ್ಲಿ ಈ ಕುರಿತು ಘೋಷಣೆ ಮಾಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸರ್ಕಾರ IPOಗಳನ್ನು ಆಹ್ವಾನಿಸುವ ಮೂಲಕ LICನಲ್ಲಿನ ತನ್ನ ಪಾಲುದಾರಿಕೆಯ ಸ್ವಲ್ಪ ಭಾಗವನ್ನು ಮಾರಾಟ ಮಾಡಲಿದೆ ಎಂದು ಹೇಳಿದ್ದರು.

ಸರ್ಕಾರದ ಈ ನಿರ್ಣಯಕ್ಕೆ ವಿರೋಧ ವ್ಯಕ್ತವಾಗುತ್ತಿದೆ
ಆದರೆ ಸರ್ಕಾರ ತೆಗೆದುಕೊಂಡಿರುವ ಈ ನಿರ್ಣಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಲ್ ಇಂಡಿಯಾ ಇನ್ಸುರೆನ್ಸ್ ಎಂಪ್ಲಾಯಿಜ್ ಅಸೋಸಿಯೇಷನ್, ಸರ್ಕಾರ ಕೈಗೊಂಡಿರುವ ಈ ನಿರ್ಣಯಕ್ಕೆ ಮುಂಬರುವ ದಿನಗಳಲ್ಲಿ ಆಂದೋಲನ ನಡೆಸಿ ವಿರೋಧ ವ್ಯಕ್ತಪಡಿಸಲಾಗುವುದು ಎಂದಿದೆ.

Trending News