Wife Swapping Racket: ಪತ್ನಿಯರ ಅದಲು-ಬದಲು ರ‍್ಯಾಕೆಟ್ ಬಹಿರಂಗ, 2000ಕ್ಕೂ ಅಧಿಕ ಜೋಡಿಗಳು ಜಾಲದಲ್ಲಿ ಭಾಗಿ

Wife Swapping Racket - ಕೇರಳದಲ್ಲಿ (Kerala) ಒಂದು ಭಾರೀ ಪತ್ನಿ ವಿನಿಮಯ ದಂಧೆಯ (Wife Swapping Racket) ಬಣ್ಣ ಬಯಲಾಗಿದೆ. ಈ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ಪೊಲೀಸರು (Kerala Police) ಕೇವಲ ಒಂದೆರಡು ಪದರುಗಳನ್ನು  ಮಾತ್ರ ಬಿಚ್ಚಿದ್ದರು. ಆದರೆ ನಂತರ ಈ ವೈಫ್ ಸ್ವಾಪಿಂಗ್ ದಂಧೆಯಲ್ಲಿ ಕೇರಳದ ಸುಮಾರು ಮೂರು ಜಿಲ್ಲೆಗಳ ಒಂದಲ್ಲ ಎರಡಲ್ಲ ಸುಮಾರು 2000 ಜೋಡಿಗಳು ಭಾಗಿಯಾಗಿರುವುದು ಪತ್ತೆಯಾಗಿದೆ.

Written by - Nitin Tabib | Last Updated : Jan 18, 2022, 05:01 PM IST
  • ಕೇರಳದಲ್ಲಿ ಒಂದು ಭಾರಿ ಪತ್ನಿ ವಿನಿಮಯ ದಂಧೆಯ ಬಣ್ಣ ಬಯಲು ಮಾಡಿದ ಪೊಲೀಸರು.
  • ಈ ಪ್ರಕರಣದಲ್ಲಿ ಸುಮಾರು 2000 ಜೋಡಿಗಳು ಶಾಮೀಲಾಗಿವೆ ಎಂದ ಪೊಲೀಸರು.
  • ಪ್ರಕರಣದಲ್ಲಿ ಇದುವರೆಗೆ 7 ಜನರನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Wife Swapping Racket: ಪತ್ನಿಯರ ಅದಲು-ಬದಲು ರ‍್ಯಾಕೆಟ್ ಬಹಿರಂಗ, 2000ಕ್ಕೂ ಅಧಿಕ ಜೋಡಿಗಳು ಜಾಲದಲ್ಲಿ ಭಾಗಿ title=
Wife Swapping Racket (Representational Image)

Wife Swapping Racket - ಕೇರಳದಲ್ಲಿ (Kerala) ಒಂದು ಭಾರೀ ಪತ್ನಿ ವಿನಿಮಯ ದಂಧೆಯ (Wife Swapping Racket) ಬಣ್ಣ ಬಯಲಾಗಿದೆ. ಈ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ಪೊಲೀಸರು (Kerala Police) ಕೇವಲ ಒಂದೆರಡು ಪದರುಗಳನ್ನು  ಮಾತ್ರ ಬಿಚ್ಚಿದ್ದರು. ಆದರೆ ನಂತರ ಈ ವೈಫ್ ಸ್ವಾಪಿಂಗ್ ದಂಧೆಯಲ್ಲಿ ಕೇರಳದ ಸುಮಾರು ಮೂರು ಜಿಲ್ಲೆಗಳ ಒಂದಲ್ಲ ಎರಡಲ್ಲ ಸುಮಾರು 2000 ಜೋಡಿಗಳು ಭಾಗಿಯಾಗಿರುವುದು ಪತ್ತೆಯಾಗಿದೆ.

ಕೊಟ್ಟಾಯಮ್ (Kottayam) ಮೂಲದ 27 ವರ್ಷದ ಮಹಿಳೆಯೊಬ್ಬರು ಪೋಲೀಸರ ಬಳಿ ಬಂದು, ತನ್ನ ಪತಿ ಇತರರ ಜೊತೆಗೆ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದಾನೆ ಎಂದು ದೂರು ನೀಡಿದ ಬಳಿಕ ಈ ಪ್ರಕರಣ ಬಯಲಿಗೆ ಬಂದಿದೆ. ಮಹಿಳೆಯ ದೂರನ್ನು ದಾಖಲಿಸಿಕೊಂಡು ಆಕ್ಷನ್ ಮೋಡ್ ನಲ್ಲಿ ಕಾರ್ಯನಿರ್ವಹಿಸಿದ ಪೊಲೀಸರು ಈ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ಒಟ್ಟು 7 ಜನರನ್ನು ಬಂಧಿಸಿದ್ದಾರೆ. 

ಈ 7 ಜನರನ್ನು ಮತ್ತು ಅವರ ಮೊಬೈಲ್ ಫೋನ್ ಅನ್ನು ವಿಚಾರಣೆ ಮತ್ತು ತನಿಖೆಗೆ ಒಳಪಡಿಸಿದಾಗ ಈ ಎಲ್ಲರು ಒಟ್ಟು 14 ಸಾಮಾಜಿಕ ಮಾಧ್ಯಮ ಗುಂಪುಗಳೊಂದಿಗೆ (Social Media Groups) ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಈ ಸಾಮಾಜಿಕ ಮಾಧ್ಯಮ ಗುಂಪುಗಳು ವಿಶೇಷವಾಗಿ ವೈಫ್ ಸರ್ಫಿಂಗ್ ಉದ್ದೇಶವನ್ನು ಹೊಂದಿದ್ದವು ಹಾಗೂ ಈ 14 ಗುಂಪುಗಳ ಮೂಲಕ ಸುಮಾರು 2000 ಜೋಡಿಗಳು ಪರಸ್ಪರ ಸಂಪರ್ಕ ಹೊಂದಿದ್ದವು ಎನ್ನಲಾಗಿದೆ. ಈ ಗುಂಪುಗಳಲ್ಲಿ ವಿವಾಹಿತರಷ್ಟೇ ಅಲ್ಲ, ಅವಿವಾಹಿತರೂ ಕೂಡ ಶಾಮೀಲಾಗಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ-Bumper Lottery:ಲಕ್ಕಿ ಡ್ರಾನಲ್ಲಿ ಜಾಕ್‌ಪಾಟ್, 12 ಕೋಟಿ ರೂ. ಲಾಟರಿ ಗೆದ್ದ ಪೇಂಟರ್

ಈ ಕುರಿತು ಪೊಲೀಸರು ವಿಚಾರಣೆ ನಡೆಸಿದಾಗ ಆರಂಭದಲ್ಲಿ ಈ ಗುಂಪಿನಲ್ಲಿ ಕೇವಲ 3 ರಿಂದ 4 ಜನರನ್ನು ಮಾತ್ರ ಸೇರಿಸಲಾಗುತ್ತದೆ ಎನ್ನಲಾಗಿದೆ. ನಂತರ ಕ್ರಮೇಣ ಈ ಗುಂಪಿನ ವ್ಯಾಪ್ತಿಯನ್ನು ಹೆಚ್ಚಿಸಿ, ಪ್ರತಿಯೊಂದು ಗುಂಪಿನಲ್ಲಿ ಮತ್ತಷ್ಟು  ಜನರನ್ನು ಸೇರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಈ ರ‍್ಯಾಕೆಟ್ ನಲ್ಲಿ ಶಾಮೀಲಾಗಿರುವ ಜನರು ಎಷ್ಟೊಂದು ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸುತ್ತಿದ್ದರು ಎಂದರೆ,  ಕೊವಿಡ್-19 (Covid-19) ಕಾರಣ ಘೋಷಿಸಲಾಗಿದ್ದ ಲಾಕ್ಡೌನ್ (Lockdown)  ಅವಧಿಯಲ್ಲಿಯೂ ಕೂಡ ಪತ್ನಿಯರ ವಿನಿಮಯ ನಡೆಸಲಾಗಿದೆ. ಪೊಲೀಸರಿಂದ ಪಾರಾಗಲು ಮತ್ತು ಯಾರಿಗೂ ಕೂಡ ತಮ್ಮ ಮೇಲೆ ಸಂಶಯ ಬಾರದಿರಲಿ ಎಂಬ ಉದ್ದೇಶಕ್ಕೆ ಈ ರ‍್ಯಾಕೆಟ್ ನಲ್ಲಿ ಶಾಮೀಲಾಗಿದ್ದ ಎಲ್ಲ ಜನರು ಸಂಬಂಧ ಬೆಳೆಸಲು ತಮ್ಮ ತಮ್ಮ ಮನೆಗಳನ್ನೇ ಬಳಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೆರೆಹೊರೆಯವರಿಗೆ ಈ ಜನರು ತಮ್ಮ ಮನೆಗೆ ಬಂದ ಮಹಿಳೆ ಅತಿಥಿಯಾಗಿದ್ದಾರೆ ಎಂದು ಹೇಳಿ ದಾರಿ ತಪ್ಪಿಸಿ ಈ ದಂಧೆ ಮುನ್ನಡೆಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ-Watch:ಬೃಹತ್ ಗಾತ್ರದ ಹೆಬ್ಬಾವು ರಸ್ತೆ ದಾಟುವ ವಿಡಿಯೋ ವೈರಲ್

ಕೇರಳ ಪೊಲೀಸರು ಈ ಪ್ರಕರಣದಲ್ಲಿ ಇದುವರೆಗೆ ಸುಮಾರು 7 ಜನರನ್ನು ಬಂಧನಕ್ಕೋಳಪಡಿಸಿದ್ದಾರೆ. ಆದರೆ, ಯಾವ ಮಹಿಳೆಯ ಕಾರಣ ಈ ಪ್ರಕರಣ ಬಯಲಿಗೆ ಬಂದಿದೆಯೋ ಆಕೆಯ ಪತಿ ಮಾತ್ರ ವಿದೇಶಕ್ಕೆ ಪರಾರಿಯಾಗುವಲ್ಲಿ  ಯಶಸ್ವಿಯಾಗಿದ್ದಾನೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಮಹಿಳೆಯ ಪತಿಯೇ ಈ ಸಂಪೂರ್ಣ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲ ಶೀಘ್ರದಲ್ಲಿಯೇ ಇನ್ನೂ ಹಲವರನ್ನು ಈ ಪ್ರಕರಣದಲ್ಲಿ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಅದೇನೇ ಇರಲಿ ಕೇರಳದಂತಹ ರಾಜ್ಯದಲ್ಲಿ ಈ ರೀತಿಯ ವೈಫ್ ಸ್ವಾಪಿಂಗ್ ರ‍್ಯಾಕೆಟ್ ಪತ್ತೆಯಾಗಿರುವು ಮಾತ್ರ ಶಾಕಿಂಗ್ ಆಗಿದೆ ಎಂಬುದು ಮಾತ್ರ ನಿಜ.

ಇದನ್ನೂ ಓದಿ-ದೌರ್ಜನ್ಯದ 5 ವರ್ಷಗಳ ನಂತರ ತಾವು ಎದುರಿಸಿದ ಅವಮಾನದ ಬಗ್ಗೆ ಬಿಚ್ಚಿಟ್ಟ ನಟಿ ಭಾವನಾ ಮೆನನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News