ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಭೂಮಿ ನೀಡಿದ್ದೇಕೆ ? ತೀರ್ಪು ಹೇಳಿದ್ದೇನು?

ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳವನ್ನು ಷರತ್ತುಗಳಿಗೆ ಒಳಪಟ್ಟು ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ. 

Last Updated : Nov 9, 2019, 04:50 PM IST
ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಭೂಮಿ ನೀಡಿದ್ದೇಕೆ ? ತೀರ್ಪು ಹೇಳಿದ್ದೇನು? title=

ನವದೆಹಲಿ: ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳವನ್ನು ಷರತ್ತುಗಳಿಗೆ ಒಳಪಟ್ಟು ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.ಇದೇ ವೇಳೆ ನೂತನ ಮಸೀದಿ ನಿರ್ಮಿಸಲು ನಗರದಲ್ಲಿ ಪ್ರತ್ಯೇಕ ಭೂಮಿಯನ್ನು ಮುಸ್ಲಿಂರಿಗೆ ನೀಡಲಾಗುವುದು ಎಂದು ಹೇಳುವ ಮೂಲಕ ಹಲವು ದಶಕಗಳ ಕಾಲ ವಿವಾದವಾಗಿದ್ದ ಪ್ರಕರಣಕ್ಕೆ ಕೊನೆಗೂ ತೆರೆಎಳೆದಿದೆ. 

ಸುಪ್ರೀಂಕೋರ್ಟ್ ತನ್ನ ಅಂತಿಮ ತೀರ್ಪಿಗೂ ಮೊದಲು ಸುಮಾರು 40 ದಿನಗಳ ಕಾಲ ವಿಚಾರಣೆಯನ್ನು ನಡೆಸಿ ದಶಕಗಳ ಹಿಂದಿನ ಕಾನೂನು ವಿವಾದವನ್ನು ಕೊನೆಗೊಳಿಸುವ ಗುರಿಯನ್ನು ಕೋರ್ಟ್ ಹೊಂದಿದೆ ಎಂದು ಹೇಳಿದೆ. "ಈ ನ್ಯಾಯಾಲಯವು ವಿವಾದದ ಪರಿಹಾರದ ಜವಾಬ್ದಾರಿಯನ್ನು ಹೊಂದಿದೆ, ಇದರ ಮೂಲವು ಭಾರತದ ಕಲ್ಪನೆಯಷ್ಟೇ ಹಳೆಯದು. ವಿವಾದಿತ ತಾಣವು ದಶಕಗಳಿಂದಲೂ ನಿರಂತರವಾಗಿ ಘರ್ಷಣೆಗೆ ಕಾರಣವಾಗಿದೆ" ಎಂದು ಐದು ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿತ್ತು.  

ನ್ಯಾಯಾಧೀಶರು ನೀಡಿದ ಪ್ರಮುಖ ಅಂಶಗಳು ಇಲ್ಲಿವೆ:  

ವಿವಾದಿತ ಭೂಮಿಯನ್ನು ದೇವಾಲಯಕ್ಕೆ ಹಸ್ತಾಂತರಿಸಿದ್ದೇಕೆ ?

'ಸಾಕ್ಷ್ಯಗಳು ವಿವಾದಾಸ್ಪದ ಸಂಪೂರ್ಣ ಆಸ್ತಿಯ ಹಿಂದೂಗಳ ಸ್ವಾಮ್ಯದ ಹಕ್ಕಿಗೆ ಸಂಬಂಧಿಸಿದಂತೆ, ಮುಸ್ಲಿಮರು ನೀಡಿದ ಸಾಕ್ಷ್ಯಗಳಿಗಿಂತ ಸೂಕ್ತ ಆಧಾರವನ್ನು ಹೊಂದಿವೆ.

ಮುಸ್ಲಿಮರಿಗೆ ಪ್ರತ್ಯೇಕ ಭೂಮಿಯನ್ನು ನೀಡುತ್ತಿರುವುದೇಕೆ?

'1949 ರ ಡಿಸೆಂಬರ್ 22/23 ರಂದು ಮಸೀದಿಯನ್ನು ಅಪವಿತ್ರಗೊಳಿಸಿದ ನಂತರ ಮುಸ್ಲಿಮರನ್ನು ಹೊರಹಾಕಲಾಯಿತು, ಅದು ಅಂತಿಮವಾಗಿ 6 ​​ಡಿಸೆಂಬರ್ 1992 ರಂದು ನಾಶವಾಯಿತು. ಮುಸ್ಲಿಮರು ಮಸೀದಿಯನ್ನು ತ್ಯಜಿಸಲಿಲ್ಲ. ಇನ್ನೂ ಮಸೀದಿ ರಚನೆಯಿಂದ ವಂಚಿತರಾದ ಮುಸ್ಲಿಂರನ್ನು ನ್ಯಾಯಾಲಯವು ಕಡೆಗಣಿಸಿದರೆ ನ್ಯಾಯ ಮೇಲುಗೈ ಸಾಧಿಸುವುದಿಲ್ಲ.

ಭೂಮಿಯನ್ನು ವಿಭಜಿಸುವುದೇಕೆ ಸೂಕ್ತವಲ್ಲ ಮತ್ತು ಅದು ಶಾಶ್ವತ ಶಾಂತಿಯನ್ನು ಖಚಿತಪಡಿಸುವುದಿಲ್ಲವೇಕೆ?

ಹೈಕೋರ್ಟ್‌ನ ಮೂರು ಭಾಗವಾಗಿ ವಿಭಜಿಸುವುದು ಕಾನೂನು ಬದ್ಧವಾಗಿ ಸಮರ್ಥನೀಯವಲ್ಲ. ಸಾರ್ವಜನಿಕ ಶಾಂತಿಯನ್ನು ಕಾಪಾಡುವ ವಿಷಯವಾಗಿದ್ದರೂ, ಹೈಕೋರ್ಟ್‌ಗೆ ತನ್ನನ್ನು ತಾನೇ ಶ್ಲಾಘಿಸಿದ ಪರಿಹಾರವು ಕಾರ್ಯ ಸಾಧ್ಯವಲ್ಲ. ಭೂಮಿಯನ್ನು ವಿಭಜಿಸುವುದರಿಂದ ಎರಡೂ ಪಕ್ಷಗಳ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಿಲ್ಲ ಅಥವಾ ಶಾಂತಿ ಮತ್ತು ಶಾಶ್ವತ ನೆಮ್ಮದಿ ಪ್ರಜ್ಞೆಯನ್ನು ಪಡೆಯಲಸಾಧ್ಯ.

ಬಾಬ್ರಿ ಮಸೀದಿ ಧ್ವಂಸ ಕಾನೂನು ಉಲ್ಲಂಘನೆಯಾಗಿದೆ? 

ಮಸೀದಿಯ ಸಂಪೂರ್ಣ ರಚನೆಯನ್ನು ಸಾರ್ವಜನಿಕ ಪೂಜಾ ಸ್ಥಳದ ಲೆಕ್ಕಾಚಾರದ ಭಾಗವಾಗಿ ನಾಶಪಡಿಸಲಾಯಿತು. 450 ವರ್ಷಗಳ ಹಿಂದೆ ನಿರ್ಮಿಸಲಾದ ಮಸೀದಿಯಿಂದ ಮುಸ್ಲಿಮರು ವಂಚಿತರಾಗಿದ್ದಾರೆ ಎಂದು ತಪ್ಪಾಗಿ ಭಾವಿಸಲಾಗಿದೆ.

Trending News