ಕೇರಳದ ಪ್ರವಾಹ 1924ರ ಪ್ರವಾಹಕ್ಕಿಂತಲೂ ಭೀಕರ ಹೇಗೆ?

ಈ ಬಾರಿ ಸುರಿದ ಮಳೆ ಪ್ರಮಾಣ 2378ಮಿಮಿ ಆದರೆ ಇದು ಉಂಟು ಮಾಡಿರುವ ಅನಾಹುತಕ್ಕೆ ಕೇರಳ ಮತ್ತೆ ಚೇತರಿಸಿಕೊಳ್ಳಲು ಸಾಕಷ್ಟು ವರ್ಷಗಳೆ ಬೇಕು. ಇಂತಹ ಭೀಕರತೆ ಪರಿಸರ ತಜ್ಞರು ಪಟ್ಟಿ ಮಾಡಿರುವ ಅಂಶಗಳೆಂದರೆ ನದಿ ಪಕ್ಕ ಮರಳು ಗಣಿಗಾರಿಕೆ,ಅರಣ್ಯ ಮತ್ತು ಹುಲ್ಲುಗಾವಲುಗಳ ನಾಶ ಎಂದು ಪಟ್ಟಿ ಮಾಡಿದ್ದಾರೆ.

Last Updated : Aug 26, 2018, 01:02 PM IST
ಕೇರಳದ ಪ್ರವಾಹ 1924ರ ಪ್ರವಾಹಕ್ಕಿಂತಲೂ ಭೀಕರ ಹೇಗೆ? title=

ನವದೆಹಲಿ: ಈ ಬಾರಿ ಕೇರಳದಲ್ಲಿನ ಪ್ರವಾಹ 1924 ರಲ್ಲಿ ಉಂಟಾದ ಪ್ರವಾಹಕ್ಕಿಂತಲೂ ಭೀಕರ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹಾಗಾದರೆ ತಜ್ಞರು ಈ ಭೀಕರತೆಯ ಕುರಿತಾಗಿ ಪಟ್ಟಿ ಮಾಡಿರುವ ವಿಷಯಗಳತ್ತ ನಾವು ಈಗ ಗಮನ ಹರಿಸಬೇಕಾಗಿದೆ. 

ಹೌದು, 2018 ರ ಕೇರಳದ ಮಹಾ ಪ್ರವಾಹ ನಿಜಕ್ಕೂ ಇಡೀ ಕೇರಳವನ್ನೇ ಆವರಿಸಿದೆ ಆ ಮೂಲಕ ಕೇರಳ ಈಗ ಸಂಪೂರ್ಣ ದ್ವೀಪದಂತಾಗಿದೆ.ಆದರೆ ಈಗ ಒಮ್ಮೆಗೆ ರೀತಿ ಪ್ರವಾಹ ಉಂಟಾಗಲು ಕಾರಣಗಳನ್ನು ಹುಡುಕುತ್ತಾ ಹೋದಾಗ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

1924 ರಲ್ಲಿ ಅಂದರೆ 94 ವರ್ಷಗಳ ಹಿಂದೆ 3368 ಮಿಮಿ ನಷ್ಟು ಮಳೆ ಆಗ ಕೇರಳದಲ್ಲಿ ಸುರಿದಿತ್ತು. ಆದರೆ ಈಗ ಸಂಬವಿಸಿರುವಷ್ಟು ಸಾವು ನೋವು ಅಥವಾ ಆಸ್ತಿಪಾಸ್ತಿಯ ಹಾನಿ ಆಗ ಉಂಟಾಗಿರಲಿಲ್ಲ, ಆದರೆ ಈ ಬಾರಿ ಸುರಿದ ಮಳೆ ಪ್ರಮಾಣ 2378ಮಿಮಿ ಆದರೆ ಇದು ಉಂಟು ಮಾಡಿರುವ ಅನಾಹುತಕ್ಕೆ ಕೇರಳ ಮತ್ತೆ ಚೇತರಿಸಿಕೊಳ್ಳಲು ಸಾಕಷ್ಟು ವರ್ಷಗಳೆ ಬೇಕು. ಇಂತಹ ಭೀಕರತೆ ಪರಿಸರ ತಜ್ಞರು ಪಟ್ಟಿ ಮಾಡಿರುವ ಅಂಶಗಳೆಂದರೆ ನದಿ ಪಕ್ಕ ಮರಳು ಗಣಿಗಾರಿಕೆ,ಅರಣ್ಯ ಮತ್ತು ಹುಲ್ಲುಗಾವಲುಗಳ ನಾಶ ಎಂದು ಪಟ್ಟಿ ಮಾಡಿದ್ದಾರೆ.

ಪರಿಸರ ತಜ್ಞ ಮಾಧವ್ ಗಾಡ್ಗೀಲ್ ಹೇಳುವಂತೆ " ವ್ಯಾಪಕ ಪ್ರಮಾಣದಲ್ಲಿ  ಕಲ್ಲುಗಳನ್ನು ಕೊರೆದಿರುವುದು ಮತ್ತು ತಗ್ಗುಗಳನ್ನುತೊಡಿರುವುದು ಭೂಕುಸಿತಕ್ಕೆ ಕಾರಣವಾಗಿ ಕೇರಳದ ಪ್ರವಾಹವನ್ನು ಹದಗೆಡುವಂತೆ ಮಾಡಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಮಾಧವ್ ಗಾಡ್ಗೀಲ್ ಅವರು 2011ರಲ್ಲಿ ಸರ್ಕಾರವು  ಪಶ್ಚಿಮ ಘಟ್ಟಗಳ ಕುರಿತಾಗಿ ಅಧ್ಯಯನ ಮಾಡಲು ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು, ಆದರೆ ಸರ್ಕಾರಗಳು ಮಾತ್ರ ಅವರ ವರದಿಯನ್ನು ಜಾರಿಗೆ ತಂದಿರಲಿಲ್ಲ. ಅಲ್ಲದೆ ಪಶ್ಚಿಮ ಘಟ್ಟದ ರಾಜ್ಯಗಳು ಕೂಡ ಈ ವರದಿಯನ್ನು ಅಲ್ಲಗಳೆದಿದ್ದವು.ಆದ್ದರಿಂದ ಇದು ಈ ಭಾಗದ ಅರಣ್ಯ ನಾಶಕ್ಕೆ ಇನ್ನಷ್ಟು ಅನುವುಮಾಡಿಕೊಟ್ಟಿತ್ತು. 

Trending News