ನಿಮ್ಮದೇಕೆ ಇಷ್ಟು ತಡವಾಯಿತು ? ರಾಕೇಶ್ ಅಸ್ತಾನಾ ವಕೀಲರಿಗೆ 'ಸುಪ್ರಿಂ' ಪ್ರಶ್ನೆ

ಸುಪ್ರೀಂಕೋರ್ಟ್ ಸಿಬಿಐ ನ ರಾಕೇಶ್ ಅಸ್ತಾನಾ ಅವರ ಕೊನೆಯ ವೇಳೆಯಲ್ಲಿ  ರಜೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ನಿರಾಕರಿಸಿತು. 

Last Updated : Oct 26, 2018, 07:59 PM IST
ನಿಮ್ಮದೇಕೆ ಇಷ್ಟು ತಡವಾಯಿತು ? ರಾಕೇಶ್ ಅಸ್ತಾನಾ ವಕೀಲರಿಗೆ 'ಸುಪ್ರಿಂ' ಪ್ರಶ್ನೆ title=

ನವದೆಹಲಿ: ಸುಪ್ರೀಂಕೋರ್ಟ್ ಸಿಬಿಐ ನ ರಾಕೇಶ್ ಅಸ್ತಾನಾ ಅವರ ಕೊನೆಯ ವೇಳೆಯಲ್ಲಿ  ರಜೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ನಿರಾಕರಿಸಿತು. 

ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾರನ್ನು ಒತ್ತಾಯದ ರಜೆಗೆ ಕಳುಹಿಸುವ ಮೊದಲು ಸಿಬಿಐ ನ ವಿಶೇಷ ನಿರ್ದೇಶಕರಾಗಿರುವ ರಾಕೇಶ್ ಅಸ್ತಾನಾ ಕೂಡ ರಜೆಗೆ ತೆರಳಿದ್ದರು.ಈಗ ಇದನ್ನು ಪ್ರಶ್ನಿಸಿ ಅವರು ಸುಪ್ರಿಂಕೋರ್ಟ್ ಮೊರೆಹೊದಾಗ "ನಿಮ್ಮದೇಕೆ ಇಷ್ಟು ತಡವಾಯಿತು ? ನಾವು ಈಗ ಈ ಕೇಸ್ ನ್ನು ವಿಚಾರಣೆ ನಡೆಸುವುದಿಲ್ಲ, ಅದು ನಮ್ಮ ಪಟ್ಟಿಯಲ್ಲಿ ಇಲ್ಲ" ಎಂದು ಅಸ್ತಾನಾ  ಪರ ವಾದಿಸುತಿದ್ದ ವಕೀಲ ಮುಕುಲ್ ರೋಹಟಗಿ ಅವರಿಗೆ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್  ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ  ವಕೀಲ ರೋಹಟಗಿ ಅಸ್ತಾನಾ ಅವರು ಪ್ರತ್ಯೇಕವಾದ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಉತ್ತರಿಸಿದರು. ಇನ್ನೊಂದೆಡೆ ಕೇಂದ್ರ ಸರ್ಕಾರವು  ವಿಚಾರಣೆಯನ್ನು ಕೇವಲ ವರ್ಮಾ ಮೇಲೆ ಅಲ್ಲದೆ ಅಸ್ತಾನಾ ಅವರ ಮೇಲೆಯೂ ಕೂಡ ನಡೆಸಬೇಕು ಎಂದು ಹೇಳಿದೆ.ಆದರೆ ಇದಕ್ಕೆ ಉತ್ತರಿಸಿರುವ ಸುಪ್ರಿಂಕೋರ್ಟ್ ಈಗ ನಾವು ವರ್ಮಾ ಅವರ ವಿಚಾರಕ್ಕೆ ಮಾತ್ರ ಸಂಬಂಧಪಟ್ಟಿದ್ದೇವೆ ಎಂದು ತಿಳಿಸಿದೆ.

Trending News