ಪ್ರಧಾನಿ ಬಗ್ಗೆ ಏಕೆ ನಾಚಿಕೆ?: ಲಸಿಕೆ ಸರ್ಟಿಫಿಕೆಟ್‌ನಲ್ಲಿ ಮೋದಿ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಗೆ ಹೈಕೋರ್ಟ್ ಪ್ರಶ್ನೆ

ಕೊಟ್ಟಾಯಂನ ಪೀಟರ್ ಮಾಯಲಿಪರಂಬಿಲ್ ಎಂಬುವರು ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿರುವ ಪ್ರಧಾನಿ ಮೋದಿ ಫೋಟೋಗೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Written by - Zee Kannada News Desk | Last Updated : Dec 13, 2021, 08:15 PM IST
  • ಲಸಿಕೆ ಸರ್ಟಿಫಿಕೆಟ್‌ನಲ್ಲಿರುವ ಮೋದಿ ಭಾವಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ಗೆ ಅರ್ಜಿ
  • ಪ್ರಧಾನಿ ಬಗ್ಗೆ ನೀವು ಏಕೆ ನಾಚಿಕೆಪಡುತ್ತೀರಿ ಎಂದು ಅರ್ಜಿದಾರ ವ್ಯಕ್ತಿಗೆ ಕೇರಳ ಹೈಕೋರ್ಟ್ ಪ್ರಶ್ನೆ
  • ಪ್ರಧಾನಿ ಮೋದಿ ನಮ್ಮ ದೇಶದ ಪ್ರಧಾನಿಯೇ ಹೊರತು ಅಮೆರಿಕದ ಪ್ರಧಾನಿಯಲ್ಲವೆಂದ ನ್ಯಾಯಾಲಯ
ಪ್ರಧಾನಿ ಬಗ್ಗೆ ಏಕೆ ನಾಚಿಕೆ?: ಲಸಿಕೆ ಸರ್ಟಿಫಿಕೆಟ್‌ನಲ್ಲಿ ಮೋದಿ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಗೆ ಹೈಕೋರ್ಟ್ ಪ್ರಶ್ನೆ title=
ಲಸಿಕೆ ಸರ್ಟಿಫಿಕೆಟ್‌ನಲ್ಲಿರುವ ಮೋದಿ ಭಾವಚಿತ್ರಕ್ಕೆ ಆಕ್ಷೇಪ

 ಕೊಚ್ಚಿ: ಕೊರೊನಾ ಲಸಿಕೆ ಪ್ರಮಾಣ ಪತ್ರ(COVID-19 Vaccination Certificate)ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕಿರುವುದರಿಂದ ನಿಮಗೆ ಏನು ತೊಂದರೆ? ಪ್ರಧಾನಿ ಬಗ್ಗೆ ನೀವು ಏಕೆ ನಾಚಿಕೆಪಡುತ್ತೀರಿ? ಎಂದು ವ್ಯಕ್ತಿಯೊಬ್ಬರಿಗೆ ಕೇರಳ ಹೈಕೋರ್ಟ್ ಪ್ರಶ್ನಿಸಿದೆ. ಕೋವಿಡ್-19 ಲಸಿಕೆ ಸರ್ಟಿಫಿಕೆಟ್‌ನಲ್ಲಿ ಪ್ರಧಾನಿ ಮೋದಿ ಫೋಟೋ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಕೇರಳ ಹೈಕೋರ್ಟ್(Kerala High Court) ಈ ರೀತಿ ಪ್ರಶ್ನಿಸಿದೆ.

ಪ್ರಧಾನಿ ಮೋದಿ ಅಮೆರಿಕದ ಪ್ರಧಾನಿಯಲ್ಲ!

‘ಮೋದಿ(Narendra Modi)ಯವರು ನಮ್ಮ ದೇಶದ ಪ್ರಧಾನಿಯೇ ಹೊರತು ಅಮೆರಿಕದ ಪ್ರಧಾನಿಯಲ್ಲ. ಮೋದಿಯವರು ಅಧಿಕಾರಕ್ಕೆ ಬಂದದ್ದು ಜನಾದೇಶದಿಂದಲೇ ಹೊರತು ಯಾವುದೇ ಶಾರ್ಟ್‌ಕಟ್‌ಗಳ ಮೂಲಕವಲ್ಲ. ಪ್ರಧಾನಿಯನ್ನು ಈ ದೇಶದ ಜನರು ಆಯ್ಕೆ ಮಾಡಿದ್ದಾರೆ, ಹೀಗಾಗಿ ಅವರ ಚಿತ್ರವನ್ನು ಲಸಿಕೆ ಪ್ರಮಾಣ ಪತ್ರದಲ್ಲಿ ಹಾಕುವುದರಲ್ಲಿ ತಪ್ಪೇನಿದೆ ಅಂತಾ ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಕೇಳಿದ್ದಾರೆ.

ಇದನ್ನೂ ಓದಿ: Infringement Of Privacy:ಪತ್ನಿಯ ಕರೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡುವುದು "ಖಾಸಗಿತನದ ಉಲ್ಲಂಘನೆ"

‘ನೀವು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಹೆಸರಿನ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದೀರಿ. ಆ ಸಂಸ್ಥೆಯಿಂದ ನೆಹರೂ ಹೆಸರನ್ನು ತೆಗೆದುಹಾಕುವ ನಿಲುವನ್ನು ನೀವು ಏಕೆ ತೆಗೆದುಕೊಳ್ಳುತ್ತಿಲ್ಲ? ಮೋದಿ(PM Modi) ನಮ್ಮ ದೇಶದ ಪ್ರಧಾನಿ, ನಿಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸರ್ಟಿಫಿಕೇಟ್‌ನಲ್ಲಿ ಪ್ರಧಾನಿಯವರ ಫೋಟೋದಿಂದ ನಿಮೆಗ ಏನು ಸಮಸ್ಯೆ ಅಂತಾ ನನಗೆ ಅರ್ಥವಾಗುತ್ತಿಲ್ಲ’ವೆಂದು ಹೈಕೋರ್ಟ್ ಹೇಳಿದೆ.

ಮೋದಿ ಭಾವಚಿತ್ರವಿಲ್ಲದ ಪ್ರಮಾಣ ಪತ್ರ ನೀಡುವಂತೆ ಮನವಿ

ಕೊಟ್ಟಾಯಂನ ಪೀಟರ್ ಮಾಯಲಿಪರಂಬಿಲ್ ಎಂಬುವರು ಕೋವಿಡ್-19 ಲಸಿಕೆ ಪ್ರಮಾಣ ಪತ್ರ(COVID-19 Vaccination Certificate)ದಲ್ಲಿರುವ ಪ್ರಧಾನಿ ಮೋದಿ ಫೋಟೋಗೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮೋದಿ ಭಾವಚಿತ್ರ ಇಲ್ಲದ ಪ್ರಮಾಣ ಪತ್ರ ನೀಡುವಂತೆ ಅವರು ಮನವಿ ಮಾಡಿದ್ದರು. ಕೊರೊನಾ ಲಸಿಕಾ ಸರ್ಟಿಫಿಕೆಟ್‌ನಲ್ಲಿ ಪ್ರಧಾನಿಯವರ ಭಾವಚಿತ್ರ ಅಪ್ರಸ್ತುತ ಎಂದು ವಾದಿಸಿದ್ದ ಅರ್ಜಿದಾರರು, ಇತರ ದೇಶಗಳು ನೀಡಿದ ಲಸಿಕೆ ಪ್ರಮಾಣ ಪತ್ರಗಳನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Good News: ಶೀಘ್ರದಲ್ಲಿಯೇ ನೌಕರರಿಗೆ ಸಿಗಲಿದೆ ಹಳೆ ಪೆನ್ಷನ್ ಯೋಜನೆಯ ಲಾಭ! ಸರ್ಕಾರ ನಡೆಸುತ್ತಿದೆ ಈ ಸಿದ್ಧತೆ

ಇಂಡೋನೇಷಿಯಾ, ಇಸ್ರೇಲ್, ಜರ್ಮನಿ ಸೇರಿದಂತೆ ಇತರ ದೇಶಗಳಲ್ಲಿ ಲಸಿಕೆ ಪ್ರಮಾಣ ಪತ್ರದಲ್ಲಿ ಮಹತ್ವದ ಮಾಹಿತಿಗಳು ಇದೆ. ಆದರೆ ಅಲ್ಲಿನ ನಾಯಕರ ಫೋಟೋಗಳು ಇಲ್ಲ. ಹೀಗಾಗಿ ಭಾರತದಿಂದ ವಿದೇಶಕ್ಕೆ ತೆರಳುವ ವೇಳೆ ಮೋದಿ ಫೋಟೋ ಇರುವ ಪ್ರಮಾಣ ಪತ್ರ(Vaccination Certificate) ಕ್ಕಿಂತ ಯಾವುದೇ ಫೋಟೋ ಇಲ್ಲದ ಪ್ರಮಾಣ ಪತ್ರ ನೀಡುವಂತೆ ಪೀಟರ್ ಮನವಿ ಮಾಡಿಕೊಂಡಿದ್ದಾರೆ.

ರಾಜಕೀಯ ಪಕ್ಷದ ನಾಯಕನನ್ನು ವ್ಯಕ್ತಿಗತಗೊಳಿಸಬಾರದು

‘ಸರ್ಕಾರದ ಸಂದೇಶ ಕಳುಹಿಸುವಿಕೆ ಮತ್ತು ಪ್ರಚಾರಗಳು ವಿಶೇಷವಾಗಿ ಸರ್ಕಾರಿ ಹಣ ಬಳಸುವಾಗ ಯಾವುದೇ ರಾಜಕೀಯ ಪಕ್ಷದ ನಾಯಕನನ್ನು ವ್ಯಕ್ತಿಗತಗೊಳಿಸಬಾರದು. ಇದು ಅರ್ಜಿದಾರರ ಸ್ವತಂತ್ರ ಮತದಾನದ ಆಯ್ಕೆಯ ಮೇಲೆ ಪರಿಣಾಮ ಬೀರುತ್ತದೆ ಅಂತಾ ಪೀಟರ್ ವಾದಿಸಿದ್ದಾರೆ. ಬೇರೆ ದೇಶಗಳಲ್ಲಿ ಇಂತಹ ಪದ್ಧತಿ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಾಗ, ‘ಅವರು ತಮ್ಮ ಪ್ರಧಾನಿಯ ಬಗ್ಗೆ ಹೆಮ್ಮೆ ಪಡುವಂತಿಲ್ಲ. ನಮ್ಮ ಪ್ರಧಾನಿ ಬಗ್ಗೆ ನಮಗೆ ಹೆಮ್ಮೆ’ ಎಂದು ಮೌಖಿಕವಾಗಿ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿದರು.

‘ನಿಮಗೆ (ಅರ್ಜಿದಾರರಿಗೆ) ಪ್ರಧಾನ ಮಂತ್ರಿಯ ಬಗ್ಗೆ ಏಕೆ ನಾಚಿಕೆಯಾಗುತ್ತಿದೆ? ಅವರು ಜನಾದೇಶದಿಂದ ಅಧಿಕಾರಕ್ಕೆ ಬಂದವರು. ನಮ್ಮ ರಾಜಕೀಯ ದೃಷ್ಟಿಕೋನಗಳು ವಿಭಿನ್ನವಾಗಿರಬಹುದು, ಆದರೆ ಅವರು ಇನ್ನೂ ದೇಶದ ಪ್ರಧಾನಿ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ’ ಅಂತಾ ನ್ಯಾಯಾಲಯ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News