ಯಾರು ಈ ಜಿಗ್ನೇಶ್ ಮೇವಾನಿ..?

    

Last Updated : Dec 19, 2017, 06:56 PM IST
  • ಗುಜರಾತ್ನ ಅಹ್ಮದಾಬಾದ್ ಜಿಲ್ಲೆಯಲ್ಲಿ ಡಿಸೆಂಬರ್ 11, 1982 ರಂದು ಜನಿಸಿದ ಜಿಗ್ನೇಶ್ ಮೇವಾನಿ ಸ್ವಸ್ತಿಕ್ ವಿದ್ಯಾಲಯ ಮತ್ತು ವಿಶ್ವವಿದ್ಯಾಲಯ ಮಾಧಯ್ಮಿಕ ಶಾಲಾ ಮೂಲಕ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು.
  • ಗುಜರಾತ್ನಲ್ಲಿ ಅಂಬೇಡ್ಕರ್ ಚಳವಳಿಯನ್ನು ಮೆವಾನಿ ಮುನ್ನಡೆಸುತ್ತಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಏಳರಷ್ಟು ಜನಸಂಖ್ಯೆಯನ್ನು ಹೊಂದಿರುವ ದಲಿತರಿಗೆ ಹೊಸ ಆಶಾಕಿರಣವಾಗಿದ್ದಾರೆ.
ಯಾರು ಈ  ಜಿಗ್ನೇಶ್ ಮೇವಾನಿ..? title=

2016 ರಲ್ಲಿ ನಡೆದ ಉನಾ ದಲಿತರ ಘಟನೆಯಿಂದಾಗಿ ಅವರ ಹಕ್ಕುಗಳ ಹೋರಾಟಕ್ಕಾಗಿ ಮುಖ್ಯ ಪರದೆಗೆ ಬಂದ 36 ವರ್ಷ ವಯಸ್ಸಿನ ದಲಿತ ಕಾರ್ಯಕರ್ತ ಮತ್ತು ಗುಜರಾತ್ನ ವಕೀಲರಾದ ಜಿಗ್ನೇಶ್ ಮೇವಾನಿ. ನಂತರ ದಲಿತರ ಹಕ್ಕು ಮತ್ತು ಅಶ್ಮಿತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ  ಉನಾ ದಲಿತ ಅತ್ಯಾಚಾರ್ ಲಧಾಯಿ ಸಮಿತಿ ಮತ್ತು ರಾಷ್ಟ್ರೀಯ ದಲಿತ ಅತಿಕಾರ್ ಮಂಚ್ ಸಂಘಟನೆಯ ಮೂಲಕ  ಮೂಲಕ ಅಹ್ಮದಾಬಾದ್ನಿಂದ ಉನಾಕ್ಕೆ ದಲಿತ ಅಸ್ಮಿತಾ ಯಾತ್ರೆ (ಸ್ವಾಭಿಮಾನಕ್ಕಾಗಿ ಪ್ರತಿಭಟನಾ ಮೆರವಣಿಗೆ) ಹಮ್ಮಿಕೊಂಡಿದ್ದರು. 

ಈ ಯಾತ್ರೆಯಲ್ಲಿ ಸರಿಸುಮಾರು 20,000 ಕ್ಕೂ ಹೆಚ್ಚು ದಲಿತರು ಪಾಲ್ಗೊಂಡು ಗುಜರಾತಿನಲ್ಲಿ ಹೊಸ ರೀತಿಯ ಸಾಮಾಜಿಕ ಚಳುವಳಿಗೆ ನಾಂದಿ ಹಾಡಿದ್ದರು. ಈ ಸಂದರ್ಭದಲ್ಲಿ ಸತ್ತ ಹಸುವಿನ ದೇಹಗಳನ್ನು ತೆಗೆದುಹಾಕುವ ಸಾಂಪ್ರದಾಯಿಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ಪ್ರತಿಜ್ಞೆಯೊಂದನ್ನು ವಿಧಿಸಿದರು. ಆ ಮೂಲಕ ಗುಜರಾತ್ ರಾಜ್ಯದಾದ್ಯಂತದ ಹಲವಾರು ದಲಿತ ಮಹಿಳೆಯರು ಒಟ್ಟಾಗಿ ಬಂದು ಉನಾ ಘಟನೆಯಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಗೊರಕ್ಷಕರನ್ನು ಬಂದಿಸಬೇಕೆಂದು ಮಾರ್ಚ್ 2016 ರ ಆಗಸ್ಟ್ 15 ರಂದು ಪ್ರತಿಭಟನಾ ರ್ಯಾಲಿಯಲ್ಲಿ ಒತ್ತಾಯಿಸಲಾಯಿತು. ಮುಂದೆ ಈ ಚಳುವಳಿ ದೇಶದ ವಿವಿಧ ಭಾಗಗಳಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಅದರ ಫಲವಾಗಿ ಕರ್ನಾಟಕದಲ್ಲಿ ಪ್ರಗತಿಪರರು ಕೂಡ ಇದೆ ಮಾದರಿಯಲ್ಲಿ ಉಡುಪಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಮುಂದೆ ಚಳುವಳಿಯ ಭಾಗವಾಗಿ  ಪ್ರತಿ ಭೂರಹಿತ ದಲಿತರಿಗೆ ಐದು ಎಕರೆ ಭೂಮಿಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು. 'ರಾಸ್ತಾ ರೋಕೊ' ಮತ್ತು 'ರೈಲ್ ರೊಕೊ' ಹೆಸರಿನಲ್ಲಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಲು ನ್ಯಾಯಾಲಯಗಳ ಮೊರೆಹೋದ ಮೇವಾನಿ  ಕೇವಲ ಕಾಗದದ ಮೇಲೆ ದಲಿತರಿಗೆ ಭೂಮಿಯನ್ನು ವರ್ಗಾಯಿಸಿ ಇನ್ನು ಅವರಿಗೆ ಭೂಹಂಚಿಕೆ ಮಾಡದೆ ಇರುವ ಪ್ರಕರಣಗಳನ್ನು ನ್ಯಾಯಾಲಯದ ಮೂಲಕ ಪರಿಹರಿಸುವ ಮಾರ್ಗವನ್ನು ಅವರು ಕಂಡುಕೊಂಡರು. ಆ ಮೂಲಕ  ಗುಜರಾತ್ನಲ್ಲಿ ಅಂಬೇಡ್ಕರ್ ಚಳವಳಿಯನ್ನು ಮೆವಾನಿ ಮುನ್ನಡೆಸುತ್ತಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಏಳರಷ್ಟು ಜನಸಂಖ್ಯೆಯನ್ನು ಹೊಂದಿರುವ ದಲಿತರಿಗೆ ಹೊಸ ಆಶಾಕಿರಣವಾಗಿದ್ದಾರೆ. 

ಗುಜರಾತ್ನ ಅಹ್ಮದಾಬಾದ್ ಜಿಲ್ಲೆಯಲ್ಲಿ  ಡಿಸೆಂಬರ್ 11, 1982 ರಂದು ಜನಿಸಿದ ಜಿಗ್ನೇಶ್ ಮೇವಾನಿ  ಸ್ವಸ್ತಿಕ್ ವಿದ್ಯಾಲಯ ಮತ್ತು ವಿಶ್ವವಿದ್ಯಾಲಯ ಮಾಧಯ್ಮಿಕ ಶಾಲಾ ಮೂಲಕ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು.  2003 ರಲ್ಲಿ ಅದೇ ನಗರದಲ್ಲಿ ಎಚ್.ಕೆ. ಆರ್ಟ್ಸ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ತಮ್ಮ ಪದವಿಯನ್ನು ಪಡೆದರು ಮುಂದೆ  ಜರ್ನಲಿಸಮನ್ನಲ್ಲಿ ಡಿಪ್ಲೊಮಾವನ್ನು ಪಡೆದರು.2004 ರಿಂದ 2007 ರವರೆಗೆ ಗುಜರಾತಿ ನಿಯತಕಾಲಿಕೆಯ  ಅಭಿಯಾನಕ್ಕೆ ವರದಿಗಾರನಾಗಿ ಕಾರ್ಯನಿರ್ವಹಿಸಿದ ಅವರು ಮುಂದೆ  2013 ರಲ್ಲಿ ಲಾ ಪದವಿಯನ್ನು ಅಹಮದಾಬಾದಿನ ಆರೋಮ್ ಡಿಟಿಟಿ ಲಾ ಕಾಲೇಜ್ನಲ್ಲಿ ಮುಗಿಸಿದರು.  

ಇತ್ತೀಚಿನ ಬೆಳವಣಿಗೆಯಲ್ಲಿ, 2017 ರ ಗುಜರಾತ್ ವಿಧಾನಸಭೆ ಚುನಾವಣೆಗಾಗಿ ಬನಸ್ಕಾಂತದ ವಾಡ್ಗಮ್ ನಿಂದ ಸ್ವತಂತ್ರ ಅಭ್ಯರ್ಥಿಯಾಗಿಯಾಗಿ ಬಿಜೆಪಿ ಅಭ್ಯರ್ಥಿಯನ್ನು ಸುಮಾರು 20,000 ಕ್ಕೂ ಅಧಿಕ ಮತಗಳಿಂದ ಜಯಶಾಲಿಯಾಗಿದ್ದಾರೆ. 

Trending News