ಏನಿದು ಮರಾಠಾ ಮೀಸಲಾತಿ ಕಾಯ್ದೆ ? ಇದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದೇಕೆ?

ಮಹಾರಾಷ್ಟ್ರದಲ್ಲಿ ಶಿಕ್ಷಣದಲ್ಲಿ ಪ್ರವೇಶಾತಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

Written by - Manjunath N | Last Updated : May 5, 2021, 04:51 PM IST
  • ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ (ಎಸ್‌ಬಿಸಿ) ಮೀಸಲಾತಿ ಕಾಯ್ದೆ 2018, ಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್‌ನ 2019 ರ ಜೂನ್ 27 ರ ಆದೇಶವನ್ನು ಪ್ರಶ್ನಿಸಿ ಈ ತೀರ್ಪು ಬಂದಿದೆ.
ಏನಿದು ಮರಾಠಾ ಮೀಸಲಾತಿ ಕಾಯ್ದೆ ? ಇದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದೇಕೆ? title=

ನವದೆಹಲಿ: ಮಹಾರಾಷ್ಟ್ರ ಸರ್ಕಾರ ಶಿಕ್ಷಣದಲ್ಲಿ ಪ್ರವೇಶಾತಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಮರಾಠಾ ಸಮುದಾಯದ ಜನರನ್ನು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯವೆಂದು ಘೋಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Supreme Court On Quota - ಎಷ್ಟು ತಲೆಮಾರಿನವರೆಗೆ ಜಾರಿಯಲ್ಲಿರಲಿದೆ ಕೋಟಾ?: ಸುಪ್ರೀಂ ಪ್ರಶ್ನೆ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್ ನಾಗೇಶ್ವರ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರನ್ನು ಒಳಗೊಂಡ ಪೀಠವು 1992 ರ ಇಂದಿರಾ ಸಾಹ್ನಿ ಪ್ರಕರಣದ ತೀರ್ಪನ್ನು ದೊಡ್ಡ ನ್ಯಾಯಪೀಠಕ್ಕೆ ಶಿಫಾರಸ್ಸು ಮಾಡಬೇಕಾದ ಅವಶ್ಯಕತೆಯಿಲ್ಲ ಮತ್ತು ಇಂದ್ರ ಸಾಹ್ನಿ ತೀರ್ಪಿನಲ್ಲಿ ನಿಗದಿಪಡಿಸಿದ ಮೀಸಲಾತಿಯ ಮೇಲಿನ ಶೇಕಡಾ 50 ರ ಮಿತಿ ಉತ್ತಮವಾಗಿದೆ ಎಂದು ತೀರ್ಪು ನೀಡಿತು. ಈಗ ಮರಾಠ ಮೀಸಲಾತಿಯನ್ನು ಸಮರ್ಥಿಸಲು ಯಾವುದೇ ಅಸಾಧಾರಣ ಸಂದರ್ಭಗಳಿಲ್ಲ, ಅದು ಶೇ 50 ರ ಮಿತಿಯನ್ನು ಮೀರಿದೆ, ಇದು 14 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಮರಾಠಾ ಮೀಸಲಾತಿ ಪ್ರಕರಣದ ಹಿನ್ನೆಲೆ: 

ಮರಾಠರು (Maratha Quota) ಹಿಂದುಳಿದಿರುವ ಬಗ್ಗೆ ನ್ಯಾಯಮೂರ್ತಿ ಎಂ.ಜಿ.ಗಾಯಕವಾಡ್ ಆಯೋಗ ನೀಡಿರುವ ವರದಿ ಆಧಾರದ ಮೇಲೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ರಾಜ್ಯ ಮೀಸಲಾತಿ ಕಾಯ್ದೆ (2018) ಯನ್ನು ಜಾರಿಗೆ ತರಲಾಯಿತು. ಆದರೆ ಇದರಲ್ಲಿ ರಾಜ್ಯ ಸರ್ಕಾರವು ಅಂತಹ ಮೀಸಲಾತಿ ನೀಡಲು ಯಾವುದೇ ಅಸಾಮಾನ್ಯ ಸಂದರ್ಭಗಳನ್ನು ಉಲ್ಲೇಖ ಮಾಡಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. 102 ನೇ ಸಾಂವಿಧಾನಿಕ ತಿದ್ದುಪಡಿ ಸಂವಿಧಾನದ ಮೂಲ ರಚನೆ (Basic Structre) ಯನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಪೀಠ ಎತ್ತಿ ಹಿಡಿದಿದೆ.

ಈ ತಿದ್ದುಪಡಿಯು ಸಂವಿಧಾನದಲ್ಲಿನ 38-ಬಿ ಮತ್ತು 342-ಎ ಕಲಂಗಳನ್ನು ಸೇರಿಸಿದೆ.102 ರ ತಿದ್ದುಪಡಿಯು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸಾಂವಿಧಾನಿಕ ಸ್ಥಾನಮಾನದ ಬಗ್ಗೆ ಪ್ರಸ್ತುತಪಡಿಸುತ್ತದೆ.ಕಲಂ 334 ಬಿ ಆಯೋಗದ ರಚನೆ, ಕರ್ತವ್ಯಗಳು ಮತ್ತು ಅಧಿಕಾರಗಳ ಬಗ್ಗೆ ವ್ಯವಹರಿಸುತ್ತದೆ, ಆದರೆ 342 ಎ ಒಂದು ವರ್ಗವನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು (ಎಸ್‌ಬಿಸಿ) ಎಂದು ತಿಳಿಸುವ ರಾಷ್ಟ್ರಪತಿಯ ಅಧಿಕಾರ ಮತ್ತು ಕೇಂದ್ರ ಪಟ್ಟಿ ಎಸ್‌ಬಿಸಿ ಪಟ್ಟಿಯನ್ನು ಬದಲಾಯಿಸುವ ಸಂಸತ್ತಿನ ಅಧಿಕಾರದ ಬಗ್ಗೆ ಉಲ್ಲೇಖಿಸುತ್ತದೆ.ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ (ಎಸ್‌ಬಿಸಿ) ಮೀಸಲಾತಿ ಕಾಯ್ದೆ 2018, ಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದ ಬಾಂಬೆ ಹೈಕೋರ್ಟ್‌ನ 2019 ರ ಜೂನ್ 27 ರ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಈ ಐತಿಹಾಸಿಕ ತೀರ್ಪನ್ನು ನೀಡಿದೆ.

ಮಾರ್ಚ್ 26 ರಂದು,  ಹಲವು ಮೇಲ್ಮನವಿ ಅರ್ಜಿಗಳ ಸಲ್ಲಿಕೆ ಆಧಾರದ ಮೇಲೆ ಸುಪ್ರೀಂಕೋರ್ಟ್ ಅಂತಿಮ ತೀರ್ಪನ್ನು ಕಾಯ್ದಿರಿಸಿತ್ತು. ಹೈಕೋರ್ಟ್, ಜೂನ್ 2019 ರಲ್ಲಿ ಕಾನೂನನ್ನು ಎತ್ತಿ ಹಿಡಿಯುವಾಗ, ಶೇಕಡಾ 16 ರಷ್ಟು ಮೀಸಲಾತಿ ಸಮರ್ಥನೀಯವಲ್ಲ ಮತ್ತು ಮೀಸಲಾತಿಯು ಉದ್ಯೋಗದಲ್ಲಿ ಶೇಕಡಾ 12 ಮತ್ತು ಶೈಕ್ಷಣಿಕ ಪ್ರವೇಶದಲ್ಲಿ ಶೇಕಡಾ 13 ರಷ್ಟು ಮೀರಬಾರದು ಎಂದು ಅಭಿಪ್ರಾಯಪಟ್ಟಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News