ನವದೆಹಲಿ: ಗುಜರಾತಿನ ಗಾಂಧಿನಗರದಲ್ಲಿ ರ್ರ್ಯಾಲಿವೊಂದರಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
आप जागरुक बनें, इससे बड़ी कोई देशभक्ति नहीं। आपकी जागरुकता, आपका वोट एक हथियार है। ये ऐसा हथियार है जिससे किसी को चोट नहीं पहुंचानी है : कांग्रेस महासचिव UP East @priyankagandhi #GandhiMarchesOn pic.twitter.com/TZxKbtWiPW
— Congress (@INCIndia) March 12, 2019
"ಯೋಚನೆ ಮಾಡಿ ನಿರ್ಧರಿಸಿ -ನಿಮ್ಮ ಮುಂದೆ ದೊಡ್ಡದಾಗಿ ಮಾತನಾಡುವವರು, ನಿಮಗೆ ಭರವಸೆ ನೀಡಿದ್ದ ಉದ್ಯೋಗಗಳು ಎಲ್ಲಿ? 15 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದ ಭರವಸೆ ಏನಾಯ್ತು ? ಮಹಿಳೆಯರ ರಕ್ಷಣೆ ಎಲ್ಲಿದೆ? ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದರು.ದ್ವೇಷದ ಗಾಳಿಯೂ ಪ್ರೀತಿಯ ಮುಂದೆ ಹಾರಿಹೋಗಲಿದೆ ಎಂದರು.
I realised that this country is built with love and harmony. I feel sad at the current situation of the country. There is no better nationalism than being aware. Your vote is your weapon: GS UP East @priyankagandhi #GandhiMarchesOn pic.twitter.com/48o3nQMQ7x
— Congress (@INCIndia) March 12, 2019
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಭಾರಿಗೆ ಚುನಾವಣಾ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ, ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿ ಮತವೇ ನಿಮ್ಮ ಅಸ್ತ್ರ ಆದ್ದರಿಂದ ಮತ ಹಾಕುವ ಮೊದಲು ಯೋಚಿಸಿ ಎಂದರು.
ಈ ದೇಶ ಪ್ರೀತಿ ಹಾಗೂ ಸಹೋದರತ್ವದ ಮೇಲೆ ನಿಂತಿದೆ. ಆದರೆ ಇತ್ತೀಚಿನ ಸಂಗತಿಗಳು ದುಃಖ ತರಿಸಿವೆ. ಈ ದೇಶದಲ್ಲಿ ಜಾಗೃತಿಗಿಂತ ಅತಿ ದೊಡ್ಡ ದೇಶಭಕ್ತಿ ಯಾವುದೂ ಇಲ್ಲವೆಂದು ಪ್ರಿಯಾಂಕಾ ಗಾಂಧಿ ಹೇಳಿದರು.