ಪಶ್ಚಿಮ ಬಂಗಾಳ: ಸೂಟ್‌ಕೇಸ್‌ಗಳಲ್ಲಿ ದಂಪತಿ ಮೃತ ದೇಹ ಪತ್ತೆ; ತೀವ್ರ ತನಿಖೆ ಆರಂಭ

ಮೃತರನ್ನು ಪ್ರದೀಪ್ ಬಿಸ್ವಾಸ್ (55) ಮತ್ತು ಅಲ್ಪಾನಾ ಬಿಸ್ವಾಸ್ (45) ಎಂದು ಗುರುತಿಸಲಾಗಿದೆ.

Last Updated : Jul 31, 2019, 02:01 PM IST
ಪಶ್ಚಿಮ ಬಂಗಾಳ: ಸೂಟ್‌ಕೇಸ್‌ಗಳಲ್ಲಿ ದಂಪತಿ ಮೃತ ದೇಹ ಪತ್ತೆ; ತೀವ್ರ ತನಿಖೆ ಆರಂಭ title=
Pic Courtesy: ANI

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಅವಳಿಕೊಲೆಗಳು ಬೆಳಕಿಗೆ ಬಂದಿದ್ದು, ಜನತೆಯನ್ನು ಬೆಚ್ಚಿಬೀಳಿಸಿದೆ. 

ನರೇಂದ್ರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖೇಡಾಹಾ ತುರಿಯಾದ ಮನೆಯೊಂದರಲ್ಲಿ ಮಧ್ಯವಯಸ್ಕ ದಂಪತಿಗಳು ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಪ್ರದೀಪ್ ಬಿಸ್ವಾಸ್ (55) ಮತ್ತು ಅಲ್ಪಾನಾ ಬಿಸ್ವಾಸ್ (45) ಎಂದು ಗುರುತಿಸಲಾಗಿದ್ದು, ಮೃತದೇಹಗಳು ಎರಡು ಪ್ರತ್ಯೇಕ ಸೂಟ್‌ಕೇಸ್‌ಗಳಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಮೃತ ದಂಪತಿಗಳು ಆ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.  "ಮನೆಯೊಳಗೆ ರಕ್ತದ ಕಲೆಗಳಿವೆ, ದುರ್ವಾಸನೆ ಬರುತ್ತಿದೆ ಎಂದು ದೂರು ಸ್ವೀಕರಿಸಿದ ಬಳಿಕ ಮನೆಗೆ ಹೋಗಿ ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ಪಿ ರಶೀದ್ ಮುನೀರ್ ಖಾನ್ ಹೇಲಿದ್ದಾರೆ.

ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು. ಸದ್ಯ ಶವಗಳನ್ನು ಮರಣೋತ್ತರ ಪರಿಕ್ಷೆಗೆ ಕಳುಹಿಸಲಾಗಿದ್ದು, ತೀವ್ರ ತನಿಖೆ ನಡೆಸಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Trending News