ಪಶ್ಚಿಮ ಬಂಗಾಳ: ಕೋಟ್ಯಾಂತರ ಮೌಲ್ಯದ ಆನೆ ದಂತ ಸಾಗಿಸುತ್ತಿದ್ದ ತಂದೆ ಮಗಳ ಬಂಧನ

60 ಕೆಜಿಗೂ ಅಧಿಕ ಪ್ರಮಾಣದ ಆನೆ ದಂತವನ್ನು ಸಾಗಿಸುತ್ತಿದ್ದ ಕೇರಳ ಮೂಲದ ತಂದೆ ಮತ್ತು ಮಗಳನ್ನು ಕೊಲ್ಕತಾದಲ್ಲಿ ಬಂಧಿಸಲಾಗಿದೆ. ಈಗ ವಶ ಪಡಿಸಿಕೊಂಡಿರುವ ಆನೆ ದಂತದಲ್ಲಿ ಕಚ್ಚಾ ಹಾಗೂ ಸೂಕ್ಷ ಕುಶಲತೆಯಿಂದ ಕೂಡಿದ ಮೂರ್ತಿಗಳನ್ನು ಇದರಲ್ಲಿ ಕೆತ್ತಲಾಗಿದೆ. ಇದರ ಮೌಲ್ಯವು 1.3 ಕೋಟಿ ಬೆಲೆ ಬಾಳುತ್ತದೆ ಎಂದು ಹೇಳಲಾಗಿದೆ.

Last Updated : Mar 12, 2019, 07:49 PM IST
ಪಶ್ಚಿಮ ಬಂಗಾಳ: ಕೋಟ್ಯಾಂತರ ಮೌಲ್ಯದ ಆನೆ ದಂತ ಸಾಗಿಸುತ್ತಿದ್ದ ತಂದೆ ಮಗಳ ಬಂಧನ  title=

ಕೊಲ್ಕತ್ತಾ: 60 ಕೆಜಿಗೂ ಅಧಿಕ ಪ್ರಮಾಣದ ಆನೆ ದಂತವನ್ನು ಸಾಗಿಸುತ್ತಿದ್ದ ಕೇರಳ ಮೂಲದ ತಂದೆ ಮತ್ತು ಮಗಳನ್ನು ಕೊಲ್ಕತಾದಲ್ಲಿ ಬಂಧಿಸಲಾಗಿದೆ. ಈಗ ವಶ ಪಡಿಸಿಕೊಂಡಿರುವ ಆನೆ ದಂತದಲ್ಲಿ ಕಚ್ಚಾ ಹಾಗೂ ಸೂಕ್ಷ ಕುಶಲತೆಯಿಂದ ಕೂಡಿದ ಮೂರ್ತಿಗಳನ್ನು ಇದರಲ್ಲಿ ಕೆತ್ತಲಾಗಿದೆ. ಇದರ ಮೌಲ್ಯವು 1.3 ಕೋಟಿ ಬೆಲೆ ಬಾಳುತ್ತದೆ ಎಂದು ಹೇಳಲಾಗಿದೆ.

ಈ ಘಟನೆ ವಿಚಾರವಾಗಿ ಈಗಾಗಲೇ ಸೋಮವಾರದಂದು ಇಬ್ಬರು ವ್ಯಕ್ತಿಗಳನ್ನು ಹೌರಾದ ಸಂತರಾಗಾಚಿಯಲ್ಲಿ  ಬಂಧಿಸಲಾಗಿದೆ. ಟೊಲ್ಲಿಗಂಜ್ ಪ್ರದೇಶದ ಕಾರ್ಯಾಗಾರದ ಹತ್ತಿರ ಇವರಿಬ್ಬರನ್ನು ಬಂಧಿಸಿ ಆನೆ ದಂತವನ್ನು ವಶಪಡಿಸಿಕೊಳ್ಳಲಾಗಿದೆ.ಈಗಾಗಲೇ ಡಿ.ಆರ್.ಐ ಸುಂಕ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ಇನ್ನೊಂದೆಡೆಗೆ  ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯೂ ಕೂಡ ಮತ್ತೊಂದು ಪ್ರಕರಣವನ್ನು ದಾಖಲಿಸಿಕೊಂಡಿದೆ.ಇದರಲ್ಲಿ ಬಂಧಿತನಾಗಿರುವ ಒಬ್ಬ ವ್ಯಕ್ತಿ ಕೇರಳದ 2015 ರಲ್ಲಿನ ಆನೆ ಬೇಟೆ ಪ್ರಕರಣದಲ್ಲಿ ಆರೋಪಿ ಎನ್ನಲಾಗಿದೆ.ಈಗ  ಅವರನ್ನು ಈ ಪ್ರಕರಣದ ವಿಚಾರವಾಗಿಯೂ ಕೂಡ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

2015 ರಲ್ಲಿನ ಕೇರಳ ಆನೆ ಭೇಟೆ ಪ್ರಕರಣದಲ್ಲಿ ತಂಗಾಚಿ ಪ್ರಮುಖ ಆರೋಪಿ ಎನ್ನಲಾಗಿದೆ.ಈಗ ಬಂಧಿತರಾಗಿರುವರು ಆಕೆಯ ಪತಿ ಹಾಗೂ ಮಗಳು ಎಂದು ತಿಳಿದು ಬಂದಿದೆ.ಈಗ ಇಬ್ಬರನ್ನು ಈ ಹಿಂದಿನ ಪ್ರಕರಣದ ವಿಚಾರವಾಗಿ ಕೇರಳ ಮತ್ತು ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಗಳು ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳುತ್ತಿವೆ ಎನ್ನಲಾಗಿದೆ.ಈಗ ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಗಿದೆ. 

Trending News