ರಾಜಸ್ತಾನ್ ಕಾಂಗ್ರೆಸ್ ಗೆ 'ಭೇಷ್' ಎಂದ ರಾಹುಲ್ ಗಾಂಧಿ

    

Last Updated : Feb 1, 2018, 06:24 PM IST
ರಾಜಸ್ತಾನ್ ಕಾಂಗ್ರೆಸ್ ಗೆ 'ಭೇಷ್' ಎಂದ ರಾಹುಲ್ ಗಾಂಧಿ  title=

ನವದೆಹಲಿ: ರಾಜಸ್ತಾನದಲ್ಲಿನ ಕಾಂಗ್ರೇಸ್ ಪಕ್ಷದ  ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದರ ಮೂಲಕವಾಗಿ ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ನೇತೃತ್ವದ ಬಿಜೆಪಿ ಸರಕಾರ ಜನರನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 

ರಾಹುಲ್ ಗಾಂಧಿಯವರು ಟ್ವೀಟ್ ಮೂಲಕ ರಾಜಸ್ತಾನದ ಕಾಂಗ್ರೆಸನ್ನು ಕೊಂಡಾಡಿದ್ದಾರೆ. 

"ಭೇಷ್ ರಾಜಸ್ತಾನ ಕಾಂಗ್ರೇಸ್! ನೀವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಿರಿ,ಈ ಫಲಿತಾಂಶವು  ರಾಜಸ್ತಾನದ ಜನರು ಬಿಜೆಪಿ ಪಕ್ಷವನ್ನು  ತಿರಸ್ಕರಿಸಿರುವುದಕ್ಕೆ ಸ್ಪಷ್ಟ ನಿದರ್ಶನ"ಎಂದು ಅವರು ಪ್ರತಿಕ್ರಯಿಸಿದ್ದಾರೆ.

ಸದ್ಯ ಆಳ್ವಾರ ಮತ್ತು ಅಜ್ಮೀರ್ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ ಅಲ್ಲಿ ಕೂಡಾ ಗೆಲುವು ಸಾಧಿಸುವ ಸಾಧ್ಯತೆ ಎಂದು ಹೇಳಲಾಗಿದೆ. ರಾಜಸ್ತಾನದಲ್ಲಿ ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ನಿರಸ ಪ್ರದರ್ಶನ ನೀಡಿದ್ದ ಕಾಂಗ್ರೆಸ್, ಈಗ ಮತ್ತೆ ರಾಜಸ್ಥಾನದಲ್ಲಿ ಮರಳಿ ಫಾರ್ಮ್ ಕಂಡುಕೊಂಡಿದೆ. 

 

Trending News