Rain Update: ಕರ್ನಾಟಕದ ಈ ಪ್ರದೇಶಗಳಲ್ಲಿ ಭಾರೀ ವರ್ಷಧಾರೆ: ಗುಡುಗು ಸಹಿತ ಮಳೆಯ ಎಚ್ಚರಿಕೆ ನೀಡಿದ ಇಲಾಖೆ

Weather Update 1-5-2023: ಹವಾಮಾನ ಇಲಾಖೆ ವರದಿ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಸಿಕ್ಕಿಂನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

Written by - Bhavishya Shetty | Last Updated : May 1, 2023, 09:08 AM IST
    • ಈ ಬಾರಿ ಏಪ್ರಿಲ್ ನಲ್ಲಿ ಒಂದೇ ಒಂದು ದಿನವೂ ವಿಪರೀತ ಸೆಖೆ ಇರಲಿಲ್ಲ
    • ದೆಹಲಿಯಲ್ಲಿ ಮೋಡ ಕವಿದ ವಾತಾವರಣ ಮತ್ತು ಗುಡುಗು ಸಹಿತ ಅತಿ ಕಡಿಮೆ ಮಳೆಯಾಗುವ ಮುನ್ಸೂಚನೆ ಇದೆ
    • ಕರುನಾಡಿಗೆ ಮುಂದಿನ 48 ಗಂಟೆಯಲ್ಲಿ ವರುಣನ ಎಂಟ್ರಿ
Rain Update: ಕರ್ನಾಟಕದ ಈ ಪ್ರದೇಶಗಳಲ್ಲಿ ಭಾರೀ ವರ್ಷಧಾರೆ: ಗುಡುಗು ಸಹಿತ ಮಳೆಯ ಎಚ್ಚರಿಕೆ ನೀಡಿದ ಇಲಾಖೆ title=
Karnataka Rain

Weather Update 1st May 2023: ಈ ಬಾರಿ ದೆಹಲಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಹವಾಮಾನವು ತುಂಬಾ ಆಹ್ಲಾದಕರವಾಗಿದೆ. ಕಳೆದ ಬಾರಿಗಿಂತ ಈ ತಿಂಗಳು ಹೆಚ್ಚು ಮಳೆಯಾಗಿದ್ದು, ಸರಾಸರಿ ತಾಪಮಾನವೂ ವಾಡಿಕೆಗಿಂತ ಕಡಿಮೆ ದಾಖಲಾಗಿದೆ. ಅಷ್ಟೇ ಅಲ್ಲದೆ, ವರದಿಯ ಪ್ರಕಾರ ಈ ಬಾರಿ ಏಪ್ರಿಲ್ ನಲ್ಲಿ ಒಂದೇ ಒಂದು ದಿನವೂ ವಿಪರೀತ ಸೆಖೆ ಇರಲಿಲ್ಲ. ಇದೀಗ ಮೇ ತಿಂಗಳ ಆರಂಭದಲ್ಲಿ, ದೆಹಲಿ ಎನ್‌ ಸಿ ಆರ್ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Shani Rahu Yuti 2023: ಈ ರಾಶಿಯವರಿಗೆ ಶನಿ-ರಾಹು ಇಬ್ಬಿಬ್ಬರ ಕಾಟ: ಕಷ್ಟಗಳ ಸುರಿಮಳೆ ಗ್ಯಾರಂಟಿ

ಯಾವ ರಾಜ್ಯಗಳಲ್ಲಿ ಮಳೆಯಾಗಲಿದೆ?

ಹವಾಮಾನ ಇಲಾಖೆ ವರದಿ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಸಿಕ್ಕಿಂನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ದೆಹಲಿಯ ಹವಾಮಾನ ಹೇಗಿರುತ್ತದೆ?

ಹವಾಮಾನ ಇಲಾಖೆಯ ಪ್ರಕಾರ, ಸೋಮವಾರ ಅಂದರೆ ಇಂದು ದೆಹಲಿ-ಎನ್‌ ಸಿ ಆರ್‌ ನಲ್ಲಿ ಮೋಡ ಕವಿದ ವಾತಾವರಣ ಮತ್ತು ಗುಡುಗು ಸಹಿತ ಅತಿ ಕಡಿಮೆ ಮಳೆಯಾಗುವ ಮುನ್ಸೂಚನೆ ಇದೆ. ದಿನವಿಡೀ ಬೀಸುವ ಗಾಳಿಯಿಂದ ಜನರಿಗೆ ನೆಮ್ಮದಿ ಸಿಗಲಿದೆ. ರಾಜಧಾನಿಯಲ್ಲಿ ಗಂಟೆಗೆ 25-35 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಬಹುದು. ದೆಹಲಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ.

ಹಿಮಾಚಲದಲ್ಲಿ ಮಳೆ, ಗುಡುಗು ಮತ್ತು ಮಿಂಚಿನ ಎಚ್ಚರಿಕೆ:

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಭಾನುವಾರ ಭಾರೀ ಮಳೆ ಸುರಿದಿದೆ. ಇದರ ಪರಿಣಾಮ ಸೋಮವಾರವೂ ಹವಾಮಾನವು ಕೆಟ್ಟದಾಗಿದೆ. ಹವಾಮಾನ ಇಲಾಖೆ ಪ್ರಕಾರ, ಮೇ 1 ಮತ್ತು ಮೇ 2 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ, ಜೊತೆಗೆ ಬಯಲು ಸೀಮೆ, ಕೆಳ ಮತ್ತು ಮಧ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೇ 1 ರ ರಾತ್ರಿಯಿಂದ ವಾಯುವ್ಯ ಭಾರತದಲ್ಲಿ ತಾಜಾ ಪಾಶ್ಚಿಮಾತ್ಯ ಅಡಚಣೆಯ ಪರಿಣಾಮವನ್ನು ಕಾಣಬಹುದು. ಇಂತಹ ಪರಿಸ್ಥಿತಿಯಲ್ಲಿ ಮೇ 2 ಮತ್ತು 3 ರಂದು ಹಿಮಾಚಲದ ಹಲವೆಡೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಇನ್ನು ಭಾನುವಾರ ಸುರಿದ ಅಕಾಲಿಕ ಮಳೆ, ಆಲಿಕಲ್ಲು ಮತ್ತು ಗುಡುಗು ಸಹಿತ ಮಳೆಯ ನಂತರ ಸೋಮವಾರವೂ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಕೆಲವು ಪ್ರದೇಶಗಳಲ್ಲಿ 'ಆರೆಂಜ್ ಅಲರ್ಟ್' ನೀಡಿದೆ. ಸೋಮವಾರ ರಾಜ್ಯದ ಜಬಲ್‌ಪುರ, ಮಂಡ್ಲಾ, ದಿಂಡೋರಿ, ಬಾಲಾಘಾಟ್, ಕಟ್ನಿ, ಗುಣಾ, ಭೋಪಾಲ್, ದಾತಿಯಾ, ಧಾರ್, ಇಂದೋರ್, ಗ್ವಾಲಿಯರ್, ಶಿವಪುರಿ, ಉಜ್ಜಯಿನಿ, ಸಾಗರ್ ಮತ್ತು ಶಾಜಾಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಬಲವಾದ ಗಾಳಿ ಬೀಸಬಹುದು ಎಂದು ಇಲಾಖೆ ಹೇಳಿದೆ. ಈ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಪ್ರಧಾನಿ ನರೇಂದ್ರಮೋದಿ ರ‍್ಯಾಲಿಯಲ್ಲಿ ಭದ್ರತಾ ಲೋಪ- ವಿಡಿಯೋ ವೈರಲ್

ಕರುನಾಡಿಗೆ ಮುಂದಿನ 48 ಗಂಟೆಯಲ್ಲಿ ವರುಣನ ಎಂಟ್ರಿ:

ಮಹಾರಾಷ್ಟ್ರದ ಪಶ್ಚಿಮ ಭಾಗದಿಂದ ರಾಜ್ಯದತ್ತ ಗಾಳಿ ಬೀಸುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದ್ದು ಬಹುತೇಕ ಕಡೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೂಡ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಳೆದ ದಿನ ಕೋಲಾರ, ಹಾಸನ, ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News