ಅಯೋಧ್ಯೆ ವಿವಾದವನ್ನು 24 ಘಂಟೆಯೊಳಗೆ ಬಗೆಹರಿಸಬಹುದು-ಸಿಎಂ ಯೋಗಿ ಆದಿತ್ಯನಾಥ್

ಅಯೋಧ್ಯೆ ವಿವಾದ ವಿಚಾರವಾಗಿ ಶನಿವಾರದಂದು ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ "ಈ ವಿವಾದವನ್ನು 24 ಗಂಟೆಯಲ್ಲಿ ಬಗೆ ಹರಿಸಬಹುದು" ಎಂದು ಅಭಿಪ್ರಾಯಪಟ್ಟಿದ್ದಾರೆ.

Last Updated : Jan 26, 2019, 07:28 PM IST
ಅಯೋಧ್ಯೆ ವಿವಾದವನ್ನು 24 ಘಂಟೆಯೊಳಗೆ ಬಗೆಹರಿಸಬಹುದು-ಸಿಎಂ ಯೋಗಿ ಆದಿತ್ಯನಾಥ್ title=

ನವದೆಹಲಿ: ಅಯೋಧ್ಯೆ ವಿವಾದ ವಿಚಾರವಾಗಿ ಶನಿವಾರದಂದು ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ "ಈ ವಿವಾದವನ್ನು 24 ಗಂಟೆಯಲ್ಲಿ ಬಗೆ ಹರಿಸಬಹುದು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಯೋಗಿ, ಅಯೋಧ್ಯೆ ವಿವಾದ ವಿಚಾರವಾಗಿ ಯಾವುದಾದರೂ ಮಾತುಕತೆ ನಡೆದಿದೆ ಎಂದು ಅವರಿಗೆ ಪ್ರಶ್ನಿಸಿದಾಗ ಉತ್ತರಿಸಿದ ಅವರು  "ನಾವು ಸುಪ್ರೀಂಗೆ ಮನವಿ ಮಾಡಿಕೊಳ್ಳುವುದಿಷ್ಟೇ ತೀರ್ಪನ್ನು ಬೇಗನೆ ನೀಡಿ ಲಕ್ಷಾಂತರ ಜನರನ್ನು ಸಂತೃಪ್ತಿಪಡಿಸಿ. ಏಕೆಂದರೆ ಇದು ಜನರ ನಂಬಿಕೆ ಸಂಕೇತ, ತೀರ್ಪಿನ ವಿಷಯದಲ್ಲಿ ಪದೇ ಪದೆ ವಿಳಂಭ ಮಾಡಿದಲ್ಲಿ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ "ಎಂದರು

ಇನ್ನು ಮುಂದುವರೆದು "ನಾನು ಹೇಳುವುದಿಷ್ಟೇ ತೀರ್ಪನ್ನು ಸುಪ್ರೀಂ ಬೇಗನೆ ನೀಡಬೇಕು ಇಲ್ಲದೇ ಹೋದಲ್ಲಿ ಈ ವಿಚಾರವನ್ನು ನಮಗೆ ಹಸ್ತಾಂತರಿಸಬೇಕು ನಾವು ಈ ರಾಮ ಜನ್ಮಭೂಮಿ ವಿವಾದವನ್ನು 24 ಘಂಟೆಯೊಳಗೆ ಬಗೆ ಹರಿಸುತ್ತೇವೆ" ಎಂದರು. ಇದೇ ವೇಳೆ ಈ ವಿಚಾರವಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಏಕೆ ತರುತ್ತಿಲ್ಲ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಯೋಗಿ "ಸಂಸತ್ತು ನ್ಯಾಯಾಲಯದ ಅಡಿಯಲ್ಲಿ ಇರುವ ವಿಷಯಗಳ ಕುರಿತಾಗಿ ಚರ್ಚಿಸುವುದಿಲ್ಲ ಇದನ್ನು ನಾವು ಕೋರ್ಟ್ ಗೆ ಬಿಟ್ಟಿದ್ದೇವೆ" ಎಂದು ತಿಳಿಸಿದರು.

 

Trending News