ನವದೆಹಲಿ: ಕಾಂಗ್ರೆಸ್ ಪಕ್ಷದ ಜೊತೆಗೆ ಜೆಡಿಎಸ್ ಧೃಡವಾಗಿ ನಿಂತಿದೆ ಅದಕ್ಕಿಂತ ಹೆಚ್ಚು ಬೇರೇನು ಹೇಳಲು ಬಯಸುವುದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಮತ್ತು ಜೆಡಿ (ಎಸ್) ಮುಖ್ಯಸ್ಥ ಎಚ್.ಡಿ. ದೇವೇಗೌಡ "ನಾವು ಕಾಂಗ್ರೆಸ್ನೊಂದಿಗೆ ಇದ್ದೇವೆ, ಈ ವಿಚಾರದಲಿ ನಾನು ಇನ್ನೂ ಹೆಚ್ಚಿನದನ್ನು ಮಾತನಾಡಲು ಬಯಸುವುದಿಲ್ಲ. ಮೇ 23 ರ ಫಲಿತಾಂಶದಲ್ಲಿ, ಮುಂದಿನ ಬೆಳವಣಿಯ ಸಂಪೂರ್ಣ ಚಿತ್ರ ದೊರೆಯುತ್ತದೆ ಎಂದು ತಿಳಿಸಿದರು.
JD(S) Chief and Former Prime Minister HD Deve Gowda: We are with Congress, I don't want to speak anything more. On 23rd results will come, clear picture will be known to the entire country & what further development takes place. pic.twitter.com/sxbgQXwV2D
— ANI (@ANI) May 18, 2019
ತಮ್ಮ ಹುಟ್ಟುಹಬ್ಬದ ನಿಮಿತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವೇಗೌಡ ಲೋಕಸಭೆ ಚುನಾವಣೆಯ ಮುಂದಿನ ಬೆಳವಣಿಗೆಗಳ ಕುರಿತಾಗಿ ಈ ರೀತಿ ಅಭಿಪ್ರಾಯಪಟ್ಟರು. ಇದೇ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅವರ ಕುಟುಂಬ ಸದಸ್ಯರು ಗೌಡ ಅವರೊಂದಿಗೆ ಹಾಜರಿದ್ದರು.
ಜೆಡಿಎಸ್ ಪಕ್ಷವು ಕರ್ನಾಟಕದಲ್ಲಿ ಕಾಂಗ್ರೆಸ್ನ ಸಮ್ಮಿಶ್ರ ಪಾಲುದಾರರಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿ ಅಧಿಕಾರದಿಂದ ದೂರವಿರಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಅವರು ಹೇಳಿದರು.
ಮೇ 23 ರಂದು ಸೋನಿಯಾ ಗಾಂಧಿಯವರು ಕರೆದಿರುವ ಪ್ರತಿಪಕ್ಷಗಳ ನಾಯಕರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ತಮಗೆ ಇದುವರೆಗೆ ಅಂತಹ ಯಾವುದೇ ಆಹ್ವಾನ ಬಂದಿಲ್ಲ.ಒಂದು ವೇಳೆ ಬಂದಲ್ಲಿ ತಾವು ಸಂತೋಷದಿಂದ ಪಾಲ್ಗೊಳ್ಳುವುದಾಗಿ ಹೇಳಿದರು.