ಅಕ್ರಮ ಗಣಿಗಾರಿಕೆ ವಿಚಾರಣೆ; ನಾವು ಮನುಷ್ಯರನ್ನು ತಿನ್ನುವ ಹುಲಿಗಳಲ್ಲ -ಸುಪ್ರೀಂಕೋರ್ಟ್

ಖಾಸಗಿ ಕಂಪನಿ ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ " ಸುಪ್ರಿಂಕೋರ್ಟ್ ನಲ್ಲಿ ಪ್ರಕರಣ ಬಾಕಿ ಇದ್ದರೆ ರಾಜ್ಯವು ಹೆದರುವ ಅಗತ್ಯವಿಲ್ಲ ಏಕೆಂದರೆ ಸುಪ್ರೀಂ ಕೋರ್ಟ್ ಮನುಷ್ಯರನ್ನು ತಿನ್ನುವ ಹುಲಿಗಳಲ್ಲ ಎಂದು ವ್ಯಾಖ್ಯಾನಿಸಿದೆ.

Last Updated : Sep 21, 2018, 06:11 PM IST
ಅಕ್ರಮ ಗಣಿಗಾರಿಕೆ ವಿಚಾರಣೆ; ನಾವು ಮನುಷ್ಯರನ್ನು ತಿನ್ನುವ ಹುಲಿಗಳಲ್ಲ -ಸುಪ್ರೀಂಕೋರ್ಟ್ title=

ನವದೆಹಲಿ: ಖಾಸಗಿ ಕಂಪನಿ ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ " ಸುಪ್ರಿಂಕೋರ್ಟ್ ನಲ್ಲಿ ಪ್ರಕರಣ ಬಾಕಿ ಇದ್ದರೆ ರಾಜ್ಯವು ಹೆದರುವ ಅಗತ್ಯವಿಲ್ಲ ಏಕೆಂದರೆ ಸುಪ್ರೀಂ ಕೋರ್ಟ್ ಮನುಷ್ಯರನ್ನು ತಿನ್ನುವ ಹುಲಿಗಳಲ್ಲ ಎಂದು ವ್ಯಾಖ್ಯಾನಿಸಿದೆ.

ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಮದನ್.ಬಿ.ಲೋಕುರ್ ಮತ್ತು ದೀಪಕ್ ಗುಪ್ತಾ ಪೀಠವು ಈ ಪ್ರಕರಣದ ವಿಚಾರಣೆಯನ್ನು ನಡೆಸಿ " ನಾವು ಹುಲಿಗಳು ಅಥವಾ ಮತ್ತಿನ್ನೇನು ಅಲ್ಲ,ನಾವು ಮನುಷ್ಯರನ್ನು ತಿನ್ನುವ ಹುಲಿಗಳಲ್ಲ. ಆದ್ದರಿಂದ ಸರ್ಕಾರ ಹೆದರುವ ಅಗತ್ಯವಿಲ್ಲ ಎಂದು ತಿಳಿಸಿದರು.

ಇತ್ತೀಚಿಗೆ ಟ್ರೈಮೆಕ್ಸ್ ಗ್ರೂಪ್  ಕಂಪನಿಯ ಕಾರ್ಯಚಟುವಟಿಕೆಗಳನ್ನು ರಾಜ್ಯ ಸರ್ಕಾರವು ಸ್ಥಗೀತಗೊಳಿಸಲು ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಕಂಪನಿಯ ಪರವಾಗಿ ವಾದ ಮಾಡಿದ  ಮುಕುಲ್ ರೋಹಟಗಿ ಇದು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವಿಷಯವಲ್ಲ. ಕೋರ್ಟ್ ನಲ್ಲಿ ಈ ಪ್ರಕರಣ ಇರುವಾಗಲೇ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಆರೋಪಿಸಿದರು. 

ಇನ್ನೊಂದೆಡೆಗೆ ಅರ್ಜಿದಾರ ಇಎಎಸ್  ಶರ್ಮಾ ಪರವಾಗಿ ವಾದಿಸಿದ ಪ್ರಶಾಂತ್ ಭೂಷಣ ರಾಜ್ಯ ಸರ್ಕಾರವು ಕೇವಲ ಲೈಸನ್ಸ್ ರದ್ದುಗೊಳಿಸುವ ವಿಚಾರವಾಗಿ ನಿರ್ದೇಶನ ನೀಡಿದೆ.ಅದರ ಬದಲಾಗಿ ಅವರು ಲೈಸನ್ಸ್ ನ್ನು ರದ್ದುಪಡಿಸಿ ಕಂಪನಿಯಿಂದ ಹಣವನ್ನು ವಸೂಲಿ ಮಾಡಬೇಕು ಎಂದು ಅವರು  ವಾದಿಸಿದರು. ಮುಂದಿನ ವಿಚಾರಣೆ  ಸೆಪ್ಟೆಂಬರ್ 27 ರಂದು ನಡೆಯಲಿದೆ ಎಂದು  ತಿಳಿದು ಬಂದಿದೆ.

 

 

Trending News