ನವದೆಹಲಿ: ಪಶ್ಚಿಮ ಬಂಗಾಳದ ಜಲ್ಪೈಗುಡಿಯ ಮಾಯನ್ಗುಡಿಯ ರೈತರು ತಾನು ಬೆಳೆದ ಎಲೆ ಕೋಸಿಗೆ ನ್ಯಾಯಯುತ ಬೆಲೆ ಸಿಗದೇ ಪರದಾಡುತ್ತಿದ್ದಾರೆ. ಸಾಕಷ್ಟು ಖರ್ಚು ಮಾಡಿ ಬೆವರು ಸುರಿಸಿ ಬೆಳೆದ ಎಲೆ ಕೋಸಿಗೆ ನಿರ್ದಿಷ್ಟ ಬೆಲೆ ಸಿಗದೆ ಕಂಗಾಲಾಗಿರುವ ರೈತ, ತಾನು ಬೆಳೆದ ಎಲೆ ಕೋಸನ್ನು ಹಸುವಿಗೆ ಆಹಾರವಾಗಿ ನೀಡಿದ್ದಾರೆ.
ಮಾಯನ್ಗುಡಿಯ ರೈತ ಹಸನ್ ಅಲಿ ಸ್ವ ಸಹಾಯ ಸಂಘದಿಂದ ಸಾಲ ಪಡೆದು ಮಗಳ ಮದುವೆ ಮಾಡಿದ್ದರು. ಬಳಿಕ ಅವರು ತಮ್ಮ ಜಮೀನಿನಲ್ಲಿ ಎಲೆಕೋಸು ಬೆಳೆಯಲು ಬೀಜ, ಯೂರಿಯ ಮತ್ತು ವೇತನಕ್ಕಾಗಿ 15 ಸಾವಿರ ರೂ. ಖರ್ಚು ಮಾಡಿದ್ದಾರೆ. ಸುಮಾರು ಒಂದೂವರೆ ಎಕರೆ ಬ್ಹೊಮಿಯಲ್ಲಿ 8 ಸಾವಿರ ಎಲೆಕೋಸು ಬೆಳೆದಿದ್ದಾರೆ. ಇದರಿಂದ ತಾವು ಮಗಳ ಮದುವೆಯಲ್ಲಿ ಮಾಡಿದ ಸಾಲ ತೀರಿಸುವ ನಿರೀಕ್ಷೆ ಹೊಂದಿದ್ದ ರೈತನಿಗೆ ನ್ಯಾಯಯುತ ಬೆಲೆ ಸಿಕ್ಕಿಲ್ಲ.
ಮಾರುಕಟ್ಟೆಯಲ್ಲಿ ಕೆಜಿಗೆ ಕನಿಷ್ಠ 5 ರಿಂದ 7 ರೂಪಾಯಿಗೆ ಮಾರಾಟವಾಗಬೇಕಿದ್ದ ಎಲೆ ಕೋಸು ಪ್ರತಿ ಕೆಜಿಗೆ ಕೇವಲ 1 ರೂಪಾಯಿಗೆ ಮಾರಾಟವಾಗುತ್ತಿದೆ. ನಾಲ್ಕು ಕ್ವಿಂಟಾಲ್ ಎಲೆಕೋಸನ್ನು ಮಾರುಕಟ್ಟೆ ಸಾಗಿಸಲು 150 ರೂ. ಬಾಡಿಗೆ ಪಾವತಿಸಬೇಕಿದೆ ಎಂದು ರೈತ ಹಸನ್ ಅಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.