ರೈಲ್ವೆ ಟಿಕೆಟ್‌ಗಳನ್ನು ರದ್ದುಗೊಳಿಸಲು ಬಯಸುವಿರಾ? IRCTC ರದ್ದತಿ ಶುಲ್ಕಗಳ ಬಗ್ಗೆ ತಿಳಿಯಿರಿ

ನಿಮ್ಮ ರೈಲು ಟಿಕೆಟ್ ಅನ್ನು ರದ್ದುಗೊಳಿಸಿದರೆ ರದ್ದತಿ ಶುಲ್ಕವನ್ನು ವರ್ಗ(Class) ಮತ್ತು ನೀವು ದೃಢೀಕರಿಸಿದ ಟಿಕೆಟ್‌ಗಳನ್ನು ರದ್ದುಗೊಳಿಸುವ ಸಮಯದ ಆಧಾರದ ಮೇಲೆ ವಿಧಿಸಲಾಗುತ್ತದೆ.

Written by - Puttaraj K Alur | Last Updated : Oct 22, 2021, 01:28 PM IST
  • ತುರ್ತಾಗಿ ರೈಲ್ವೆ ಟಿಕೆಟ್ ರದ್ದುಗೊಳಿಸುವ ಮುನ್ನ ನೀವು ಏನು ಮಾಡಬೇಕು..?
  • ಸರಿಯಾದ ಸಮಯಕ್ಕೆ ಟಿಕೆಟ್ ರದ್ದುಗೊಳಿಸಿದರೆ ನೀವು ಹಣ ಉಳಿಸಬಹುದು
  • IRCTCಯ ರದ್ದತಿ ಶುಲ್ಕಗಳ ನಿಯಮಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು
ರೈಲ್ವೆ ಟಿಕೆಟ್‌ಗಳನ್ನು ರದ್ದುಗೊಳಿಸಲು ಬಯಸುವಿರಾ? IRCTC ರದ್ದತಿ ಶುಲ್ಕಗಳ ಬಗ್ಗೆ ತಿಳಿಯಿರಿ title=
ಟಿಕೆಟ್ ರದ್ದುಗೊಳಿಸುವ ಮುನ್ನ ತಿಳಿದುಕೊಳ್ಳಬೇಕಾದ ಮಾಹಿತಿ

ನವದೆಹಲಿ: ದೀಪಾವಳಿಗೂ ಮುನ್ನ ನೀವು ನಿಮ್ಮ ಐಆರ್‌ಸಿಟಿಸಿ ರೈಲು ಟಿಕೆಟ್‌(IRCTC Railway Tickets)ಗಳನ್ನು ರದ್ದುಗೊಳಿಸಲು ಯೋಚಿಸುತ್ತಿದ್ದೀರಾ? ಆದರೆ ರದ್ದತಿ ಶುಲ್ಕದ ಬಗ್ಗೆ ನಿಮಗೆ ಖಚಿತ ಮಾಹಿತಿ ಇಲ್ಲವೆ? ಅದರ ಚಿಂತಿಸಬೇಡಿ, ಇದರ ಬಗ್ಗೆ ನಾವು ಇಲ್ಲಿ ನಿಮಗೆ ಉಪಯುಕ್ತ ಮಾಹಿತಿ ನೀಡುತ್ತಿದ್ದೇವೆ. ಭಾರತೀಯ ರೈಲ್ವೆ ನಿಯಮಗಳು ಮತ್ತು ಮರುಪಾವತಿ ನೀತಿ(IRCTC Cancellation Charges)ಯ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ರೈಲ್ವೆ ಟಿಕೆಟ್‌ ರದ್ದುಗೊಳಿಸಲು ಬಯಸುವಿರಾ? ಈ ರದ್ದತಿ ಶುಲ್ಕ ತಿಳಿಯಿರಿ

ನಿಮ್ಮ ರೈಲು ಟಿಕೆಟ್ ಅನ್ನು ರದ್ದುಗೊಳಿಸಿದರೆ ರದ್ದತಿ ಶುಲ್ಕವನ್ನು ವರ್ಗ(Class) ಮತ್ತು ನೀವು ದೃಢೀಕರಿಸಿದ ಟಿಕೆಟ್‌ಗಳನ್ನು ರದ್ದುಗೊಳಿಸುವ ಸಮಯದ ಆಧಾರದ ಮೇಲೆ ವಿಧಿಸಲಾಗುತ್ತದೆ. ಭಾರತೀಯ ರೈಲ್ವೆ ಟಿಕೆಟ್ ರದ್ದತಿ ನೀತಿಯನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು (IRCTC) ನಿರ್ವಹಿಸುತ್ತದ.

ಇದನ್ನೂ ಓದಿ: Petrol price Today : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಲ್ಲಿ ಹೊಸ ದಾಖಲೆ : ನಿಮ್ಮ ನಗರದ ದರ ಇಲ್ಲಿ ಪರಿಶೀಲಿಸಿ

ರದ್ದತಿ ಶುಲ್ಕಗಳು ಕೋಚ್ ಮತ್ತು ಪ್ರಯಾಣದ ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತವೆ ಮತ್ತು ಅವು AC, Sleeper ಮತ್ತು 2nd Class ಬದಲಾವಣೆಯಾಗುತ್ತವೆ. ಚಾರ್ಟ್ ಸಿದ್ಧಪಡಿಸುವ ಮೊದಲು ಮತ್ತು ನಂತರ ಟಿಕೆಟ್ ಗಳನ್ನು ರದ್ದುಗೊಳಿಸಿದರೆ ರದ್ದತಿ ಶುಲ್ಕಗಳಲ್ಲಿ ಬದಲಾವಣೆಯಾಗಬಹುದು.

ರದ್ದತಿ ಶುಲ್ಕಗಳು ಯಾವುವು?

ಭಾರತೀಯ ರೈಲ್ವೆ(Indian Railways)ಯ ಪ್ರಕಾರ ಪ್ರಯಾಣಿಕರು ರೈಲು ಹೊರಡುವ 48 ಗಂಟೆಗಳ ಮೊದಲು ದೃ ಢಪಡಿಸಿದ ಟಿಕೆಟ್ ಅನ್ನು ರದ್ದುಗೊಳಿಸಿದರೆ ಈ ಕೆಳಗಿನಂತೆ ಶುಲ್ಕದಲ್ಲಿ ಕಡಿತವಾಗುತ್ತದೆ.

1) AC First Class 240 ರೂ. ಕಡಿತಗೊಳಿಸಲಾಗುತ್ತದೆ

2) AC Two-Tierಗೆ 200 ರೂ.

3) AC Three-Tierಗೆ 180 ರೂ.

4) Sleeper Classಗೆ 120 ರೂ.

5) 2ನೇ ಆಸನದ ಟಿಕೆಟ್ ರದ್ದತಿ(second seating ticket)ಯ ಮೇಲೆ 60 ರೂ.ಗಳ ರದ್ದತಿ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ.

ಹಾಗೆಯೇ ಮುಖ್ಯವಾಗಿ ಪ್ರಯಾಣಿಕರು ರೈಲು ಹೊರಡುವ 12 ರಿಂದ 48 ಗಂಟೆಗಳ ಮೊದಲು ರೈಲು ಟಿಕೆಟ್ ರದ್ದುಗೊಳಿಸಿದರೆ(Confirm Ticket Cancellation)ನಂತರ ಟಿಕೆಟ್ ವೆಚ್ಚದ ಶೇ.25ರಷ್ಟು ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ಏತನ್ಮಧ್ಯೆ ರೈಲು ನಿರ್ಗಮಿಸಿದ 4 ರಿಂದ 12 ಗಂಟೆಗಳಲ್ಲಿ ಟಿಕೆಟ್ ರದ್ದಾದರೆ ಅರ್ಧದಷ್ಟು ಹಣ ಮತ್ತು ಜಿಎಸ್‌ಟಿ ಕಡಿತವಾಗುತ್ತದೆ.

ಇದನ್ನೂ ಓದಿ: Arecanut Price: ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ

ಗಮನಿಸಿ: ನೀವು TDR ಅನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡದಿದ್ದರೆ ಮತ್ತು ರೈಲು ಹೊರಡುವ 4 ಗಂಟೆಗಳಲ್ಲಿ ದೃಢಪಡಿಸಿದ ರೈಲು ಟಿಕೆಟ್ ಅನ್ನು ರದ್ದುಗೊಳಿಸದಿದ್ದರೆ ನೀವು ಸಂಪೂರ್ಣ ಟಿಕೆಟ್ ವೆಚ್ಚವನ್ನು ಕಳೆದುಕೊಳ್ಳುತ್ತೀರಿ.

ಭಾರತೀಯ ರೈಲ್ವೆ ರೈಲು ಟಿಕೆಟ್‌ಗಳ ಬುಕಿಂಗ್ ಮತ್ತು ರದ್ದತಿ ಪ್ರಕ್ರಿಯೆಯನ್ನು ಅತ್ಯಂತ ಅನುಕೂಲಕರವಾಗಿಸಿದೆ. ಈಗ ನೀವು ಮನೆಯಲ್ಲಿಯೇ ಕುಳಿತು ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಬಹುದು ಅಥವಾ ರದ್ದು ಮಾಡಬಹುದು. ಹಲವಾರು ಜನರು ಟಿಕೆಟ್‌ಗಳನ್ನು ಬುಕ್ ಮಾಡುವುದು ಸುಲಭ, ಆದರೆ ದೃಢೀಕರಿಸಿದ ಟಿಕೆಟ್‌ಗಳನ್ನು ರದ್ದುಗೊಳಿಸುವ ಸಮಯದಲ್ಲಿ ಕಡಿತಗೊಳಿಸಿದ ಶುಲ್ಕಗಳ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ.

ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ರದ್ದು ಮಾಡುವುದು ಹೇಗೆ?

ರೈಲು ಟಿಕೆಟ್‌ ರದ್ದುಗೊಳಿಸಲು ಸುಲಭವಾಗಿ ಅನುಸರಿಸಬಹುದಾದ ಹಂತಗಳು…

1) ನೀವು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರೆ IRCTCಯ ಇ-ಟಿಕೆಟಿಂಗ್ ವೆಬ್‌ಸೈಟ್‌ https://www.irctc.co.in/nget/train-search ಗೆ ಭೇಟಿ ನೀಡಿ

2) ನಂತರ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು

3) My Transactions ಮೇಲೆ ಕ್ಲಿಕ್ ಮಾಡಿ ಮತ್ತು Ticket History ಗುಂಡಿ ಒತ್ತಿರಿ

4) ಕಾಯ್ದಿರಿಸಿದ ಟಿಕೆಟ್ ರದ್ದುಗೊಳಿಸಲು Cancellation ಆಯ್ಕೆಯನ್ನು ಕ್ಲಿಕ್ ಮಾಡಿ

5) Cancel Confirm Ticket ಆಯ್ಕೆಯನ್ನು ಕ್ಲಿಕ್ ಮಾಡಿ

6) ಈಗ ಟಿಕೆಟ್ ಕ್ಯಾನ್ಸಲ್ ಆದ ಬಳಿಕ ನಿಮ್ಮ ಉಳಿದ ಮೊತ್ತವನ್ನು ನಿಮ್ಮ ಖಾತೆಗೆ ಒಂದೆರಡು ದಿನಗಳಲ್ಲಿ ಮರುಪಾವತಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News