ನವದೆಹಲಿ: ದೀಪಾವಳಿಯ ಸಂದರ್ಭದಲ್ಲಿ ಅಯೋಧ್ಯೆಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೆಲವು ಪ್ರಮುಖ ಘೋಷಣೆಗಳನ್ನು ನೀಡಬಹುದೆಂದು ಉತ್ತರ ಪ್ರದೇಶದ ಬಿಜೆಪಿಯ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ತಿಳಿಸಿದ್ದಾರೆ.
Yogi Ji mukhyamantri ke saath-saath bahut bade sant hain. Nishchit roop se unhone Ayodhya ke liye yojana banayi hai. Diwali aane dijiye,khushkhabri ki pratiksha kijiye...Mukhyamantri ke haathon wo yojana saamne aayegi to uchit hoga:UP BJP chief Mahendra Nath Pandey on #RamMandir pic.twitter.com/DM2HWvrhZJ
— ANI UP (@ANINewsUP) November 2, 2018
ಆದರೆ ಪಾಂಡೆ ಅವರು ಆ ಯೋಜನೆಯ ಬಗ್ಗೆ ಯಾವುದೇ ವಿವರವನ್ನು ಬಹಿರಂಗಪಡಿಸಲು ನಿರಾಕರಿಸಿ ಅದನ್ನು ಸ್ವತಃ,ಮುಖ್ಯಮಂತ್ರಿ ಘೋಷಣೆ ಮಾಡಿದರೆ ಸೂಕ್ತವೆಂದು ಹೇಳಿದರು. ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಯೋಗಿ ಜಿ ಮುಖ್ಯಾಮಂತ್ರಿ ಕೆ ಸಾಥ್-ಸಾಥ್ ಬಹುತ್ ಬಡೆ ಸಂತ ಹೈ. ನಿಶ್ಚಿತ್ ರೂಪ್ ಸೆ ಉನ್ನೋನೆ ಅಯೋಧ್ಯಾ ಕೆ ಲಿಯೆ ಯೋಜನಾ ಬನಾಯಿ ಹೈ (ಮುಖ್ಯಮಂತ್ರಿಯಾಗಿರುವುದರಿಂದ ಯೋಗಿ ಜೀ ಸಹ ಒಬ್ಬ ಮಹಾನ್ ಸಂತ, ಖಂಡಿತವಾಗಿ ಅವರು ಅಯೋಧ್ಯೆಗಾಗಿ ಕೆಲವು ಯೋಜನೆಯನ್ನು ಮಾಡಿದ್ದಾರೆ) ಎಂದು ಅವರು ತಿಳಿಸಿದರು.
"ದೀಪಾವಳಿ ಆನೆ ಡಿಜಿಯೆ, ಖುಷ್ ಖಬರ್ ಕಿ ಪ್ರತಿಕ್ಷ ಕಿಜಿಯೆ ...ಮುಖ್ಯಮಂತ್ರಿ ಕೆ ಹಾತ್ ವೋ ಸಾಮನೇ ಆಯೆಗಿ ತೋ ಉಚಿತ ಹೋಗಾ( ದೀಪಾವಳಿ ಬರಲಿ ಗುಡ್ ನ್ಯೂಸ್ ಗಾಗಿ ಕಾಯಿರಿ ಈ ಯೋಜನೆಯನ್ನು ಮುಖ್ಯಮಂತ್ರಿ ಅವರೇ ಘೋಷಣೆ ಮಾಡಿದರೆ ಸೂಕ್ತ ಎಂದು ಅವರು ತಿಳಿಸಿದ್ದಾರೆ. ಅಯೋಧ್ಯೆ ವಿಚಾರಣೆಯನ್ನು ಸುಪ್ರಿಂಕೋರ್ಟ್ ಮುಂದೂಡಿದ್ದರಿಂದ ವಿಎಚ್ಪಿ ಹಾಗೂ ಆರೆಸೆಸ್ಸ್ ಸಂಘಟನೆಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು, ಈಗ ಈ ಹಿನ್ನಲೆಯಲ್ಲಿ ಪಾಂಡೆಯವರ ಹೇಳಿಕೆ ಬಂದಿದೆ.